More

  ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

  ಮೈಸೂರು‌: ಮದ್ವೆಯಾಗಿ ಎರಡು ಮಕ್ಕಳಿದ್ದರೂ ದೇವಸ್ಥಾನದ ಅರ್ಚಕನ ಜೊತೆ ಪರಾರಿಯಾಗಿದ್ದ ಮಹಿಳೆ ಸ್ಥಿತಿ ಇದೀಗ ಹೇಳ ತೀರದು. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಯುವ ಅರ್ಚಕ, 10 ದಿನ ಆಕೆಯ ಜತೆ ಸುತ್ತಾಡಿ ಕೊನೆಗೆ ಮಧ್ಯರಾತ್ರಿ ಕಾಡಲ್ಲಿ ಬಿಟ್ಟು ಹೋಗಿದ್ದಾನೆ. ಇಡೀ ರಾತ್ರಿ ಒಂಟಿಯಾಗಿ ಕಾಡಲ್ಲಿ ಪ್ರಿಯಕರನಿಗಾಗಿ ಕಾದು ಕಾದು ಸುಸ್ತಾದ ಮಹಿಳೆ, ಬೆಳಗ್ಗೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾಳೆ.

  ಇಂತಹ ವಿಚಿತ್ರ ಪ್ರಕರಣ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ಸಂಭವಿಸಿದೆ. ಮಹದೇಶ್ವರ ದೇವಸ್ಥಾನದಲ್ಲಿ 35 ವರ್ಷದ ಗೃಹಿಣಿಯೊಬ್ಬಳು ಶಾಸ್ತ್ರ ಕೇಳಲು ಹೋದಾಗ 21 ವರ್ಷ ವಯಸ್ಸಿನ ಅರ್ಚಕ ಸಂತೋಷ್​ ಎಂಬಾತನ ಪರಿಚಯವಾಗಿತ್ತು. ಗೃಹಿಣಿ ಮತ್ತು ಅರ್ಚಕ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ಎಲ್ಲಿಗಾದರೂ ಹೋಗಾಣ ಬಾ… ನಿನಗೆ ಬಾಳು ಕೊಡುವೆ ಎಂದು ಅರ್ಚಕ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಮಹಿಳೆ, ಗಂಡ-ಮಕ್ಕಳನ್ನು ಬಿಟ್ಟು ಜೂ.12ರಂದು ತವರು ಮನೆಯಿಂದ ನಾಪತ್ತೆಯಾಗಿದ್ದಳು.

  ಅತ್ತ ಮಹಿಳೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರೆ, ಈಕೆ ಪ್ರಿಯಕರನ ಜತೆ ಊರು ಬಿಟ್ಟಿದ್ದಳು. ಮದ್ವೆ ಆಗ್ತೀನಿ ಅಂತ ಆಸೆ ಹುಟ್ಟಿಸಿ ಆಕೆಯೊಂದಿಗೆ ಆತ್ಮೀಯವಾಗಿದ್ದ ಸಂತೋಷ್​, ದೇಗುಲ ಮತ್ತು ನಿರ್ಜನ ಪ್ರದೇಶದಲ್ಲಿ ಸುತ್ತಾಡಿಸಿದ್ದ. 10 ದಿನ ಒಟ್ಟಿಗೆ ಇದ್ದವ, ನಿನ್ನೆ (ಜೂ.22) ವರಸೆ ಬದಲಿಸಿದ್ದ. ಮದ್ವೆ ಆಗೋಕೆ ಮನೆಯಲ್ಲಿ ಒಪ್ಪಲ್ಲ ಎಂದು ಉಲ್ಟಾ ಹೊಡೆದಿದ್ದಾನೆ. ಎಲ್ಲಿಯಾದರೂ ದೂರ ಹೋಗಿ ಬದುಕೋಣ ಎಂದರೂ ಆತ ಸಮ್ಮತಿಸಿಲ್ಲ. ಊರಿಗೆ ವಾಪಸ್​ ಹೋಗೋಣ, ಅಲ್ಲಿಯೇ ನನಗೆ ತಾಳಿ ಕಟ್ಟು, ನಾನು ನಿನ್ನೊಂದಿಗೇ ಬಾಳುವೆ ಎಂದು ಮಹಿಳೆ ಗೋಗರೆದರೂ ಕಿವಿಗೊಡದ ಆತ, ಅಲ್ಲಿಗೆ ಹೋದರೆ ನಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಹೆದರಿಸಿದ್ದಾನೆ. ಕೊನೆಗೆ ಇಬ್ಬರೂ ಸಾವಲ್ಲಿ ಒಂದಾಗೋಣ, ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ.

  ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

  ರಾತ್ರಿ 12 ಗಂಟೆ ಸುಮಾರಿಗೆ ಇಲ್ಲೇ ಇರುವ ಬರ್ತೀನಿ ಒಂದೈದು ನಿಮಿಷ ಅಂತ ಹೋದ ಸಮತಷ್​ ವಾಪಸ್​ ಬಂದಿಲ್ಲ. ಕಗ್ಗತ್ತರ ರಾತ್ರಿ, ಒಂಟಿಯಾಗಿ ಇಡೀ ರಾತ್ರಿ ಕಾಡಿನಲ್ಲೇ ಮಹಿಳೆ ತನ್ನ ಪ್ರಿಯಕರನ ಬರುವಿಕೆಗಾಗಿ ಕಾದಿದ್ದಾಳೆ. ಕಾಡುಪ್ರಾಣಿಗಳ ಭೀತಿ, ಸರೀಸೃಪಗಳ ಭಯದಲ್ಲೇ ಕಾಲ ಕಳೆದಿದ್ದಾಳೆ. ಪ್ರಿಯಕರ ಬಂದರೆ ಸಾಕಪ್ಪ, ಅಲ್ಲಿವರೆಗೂ ನನಗೆ ಏನೂ ಆಗದಂತೆ ಕಾಪಾಡು ಎಂದು ದೇವರಿಗೆ ಮನದಲ್ಲೇ ಕೈಮುಗಿದು ಜೀವಭಯದಲ್ಲೇ ಇದ್ದಾಳೆ. ಬೆಳಗಾದರೂ ಪ್ರಿಯಕರ ಬಂದಿಲ್ಲ.

  ನಡೆದುಕೊಂಡೇ ಕಾಡಂಚಿಗೆ ಬಂದು ಕುಳಿತಿದ್ದ ಒಬ್ಬಂಟಿ ಮಹಿಳೆಯನ್ನ ಕಂಡ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಮಹಿಳೆಯ ಕಣ್ಣೀರ ಕಥೆ ಕೇಳಿದ ಗ್ರಾಮಸ್ಥರು, ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಮಹಿಳೆ ಕಣ್ಣೀರು ಹಾಕಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾಳೆ. ನನಗೆ ಸಂತೋಷ್​ ಬೇಕು, ಆತನ ಜತೆ ಮದ್ವೆ ಮಾಡಿಸಿ. ಅವನು ಮದ್ವೆ ಆಗ್ತೀನಿ ಅಂತ ಕರೆದುಕೊಂಡು ಬಂದು ಈಗ ನಾಪತ್ತೆಯಾಗಿದ್ದಾನೆ. ನನಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಮಹಿಳೆಯ ಮನವೊಲಿಸಿ ಪೊಲೀಸರು ಕರೆದೊಯ್ದಿದ್ದು, ಸಂತೋಷ್​ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​, ಮೈಸೂರು)

  ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

  ಪ್ರಿನ್ಸಿಪಾಲ್​ರ ಕಪಾಳಕ್ಕೆ ಬಾರಿಸಿದ ಮಂಡ್ಯ ಶಾಸಕ! ಕಾಲೇಜಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲೇ ಕೃತ್ಯ, ವಿಡಿಯೋ ವೈರಲ್​

  ಕುಜ ದೋಷಕ್ಕೆ ಮಹಿಳಾ ಪೊಲೀಸ್​ ಬಲಿ! ಮದ್ವೆ ನಿರಾಕರಿಸಿ ವಿಷ ಕುಡಿಸಿದ್ದ ಪ್ರಿಯಕರ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts