More

    ಕೆರೆ ಕಾಮೇಗೌಡರಿಗೆ ಅನಾರೋಗ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

    ಮಳವಳ್ಳಿ: ಕೆರೆಗಳನ್ನು ನಿರ್ಮಿಸುವ ಮೂಲಕ ಪ್ರಖ್ಯಾತಿ ಪಡೆದಿರುವ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತಿದೆ.

    ಕೆಲ ದಿನದಿಂದ ತೀವ್ರ ನಿಶ್ಯಕ್ತಿ, ಬಲಗಾಲಿನ ನೋವು, ಕಫದಿಂದ ಕಾಮೇಗೌಡ ಬಳಲುತ್ತಿದ್ದಾರೆ. ಬೆಳಕವಾಡಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತು. ತಹಸೀಲ್ದಾರ್​ ಎಂ.ವಿಜಯಣ್ಣ ಸೂಚನೆಯಂತೆ ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಸಿಬ್ಬಂದಿಯೊಡನೆ ತೆರಳಿ ಕಾಮೇಗೌಡರನ್ನು ಆಂಬುಲೆನ್ಸ್​ನಲ್ಲಿ ಕರೆತಂದರು.

    ಕಾಮೇಗೌಡರ ಆರೋಗ್ಯ ಸ್ಥಿರವಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿರಿಸಿ ಎಲ್ಲ ರೀತಿಯ ಪರೀಕ್ಷೆಗೊಳಪಡಿಸಲಾಗಿದೆ. ಅವರನ್ನು ನಮ್ಮ ವೈದ್ಯರು ಹಾಗೂ ಸಿಬ್ಬಂದಿ ನಿಗಾ ವಹಿಸಿ ಉಪಚರಿಸುತ್ತಿದ್ದಾರೆ ಎಂದು ಡಾ.ವೀರಭದ್ರಪ್ಪ ‘ವಿಜಯವಾಣಿ’ಗೆ ತಿಳಿಸಿದರು.

    15 ಕೆರೆಗಳನ್ನು ನಿರ್ಮಿಸುವ ಮೂಲಕ ಹೆಸರುವಾಸಿಯಾಗಿರುವ ಇವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್​ ಕಿ ಬಾತ್​ನಲ್ಲಿ ಪ್ರಶಂಸಿಸಿದ್ದರು.

    6 ವರ್ಷದ ಮಗನ ಜತೆ ತಡರಾತ್ರಿ ಗಂಡ ಆತ್ಮಹತ್ಯೆ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಕೊಟ್ಟ ಕಾಟ…

    ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ

    ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts