More

    ಹನಿಟ್ರ್ಯಾಪ್​ ಗಾಳಕ್ಕೆ ಬಿದ್ದ ಉಪ ತಹಸೀಲ್ದಾರ್​! ಆಕೆಯ ಮಾತಿಗೆ ಮರುಳಾಗಿ ಹೋಟೆಲ್​ಗೆ ಹೋಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ…

    ಕೆ.ಆರ್​.ಪುರ/ಬೆಂಗಳೂರು: ಯುವತಿಯಿಂದ ಬಂದ ಫೇಸ್​ಬುಕ್​ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸಿದ ಉಪ ತಹಸೀಲ್ದಾರ್​ವೊಬ್ಬರು ‘ಹನಿಟ್ರ್ಯಾಪ್​​’ಗೆ ಸಿಕ್ಕಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆಯ ಆಹ್ವಾನದ ಮೇರೆಗೆ ಹೋಟೆಲ್​ಗೆ ಹೋದ ಉಪ ತಹಸೀಲ್ದಾರ್​ಗೆ ಮತ್ತು ಬರುವ ಔಷಧ ಕೊಟ್ಟು ಅಶ್ಲೀಲ ವಿಡಿಯೋ ಮಾಡಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದ ಕೆ.ಆರ್​. ಪುರ ಪೊಲೀಸರು ಬಂಧಿಸಿದ್ದಾರೆ.

    ಕೋಡಿಗೆಹಳ್ಳಿಯ ನಿವಾಸಿ ಗಣಪತಿ ನಾಯಕ್​, ಕಿಶನ್​ ಮತ್ತು ಕೇಶವ್​ ಬಂಧಿತರು. ಗದಗ ಮೂಲದ ಜ್ಯೋತಿ ವಿಶ್ವನಾಥ್​ ತೋಪಗಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೊಸಕೋಟೆ ನಿವಾಸಿ ಕೋಲಾರ ಜಿಲ್ಲೆಯ ಉಪ ತಹಸೀಲ್ದಾರ್​ ಗೌತಮ್​ (40) ಹನಿಟ್ರ್ಯಾಪ್​ಗೆ ಒಳಗಾದವರು. 2021ರ ಜುಲೈನಲ್ಲಿ ಉಪ ತಹಸೀಲ್ದಾರ್​ ಕಂಟನಲ್ಲೂರು ಕ್ರಾಸ್​ ಬಳಿಯ ಹೋಟೆಲ್​ಗೆ ಊಟ ಮಾಡಲು ಬಂದಿದ್ದ ಸಂದರ್ಭದಲ್ಲಿ ಆರೋಪಿತೆ ಜ್ಯೋತಿ ವಿಶ್ವನಾಥ್​ ತೋಪಗಿ ತನ್ನನ್ನು ಪರಿಚಯಿಸಿಕೊಂಡಿದ್ದಳು. ಗೌತಮ್​ ಮೊಬೈಲ್​ ನಂಬರ್​ ಪಡೆದು, ಫೇಸ್​ಬುಕ್​ನಲ್ಲಿ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದಳು. ಮೊಬೈಲ್​ ವಾಟ್ಸ್​ಆಪ್​, ಮೆಸೆಂಜರ್​ಗೆ ನಿರಂತರವಾಗಿ ಸಂದೇಶ ಕಳುಹಿಸಿ ತನ್ನತ್ತ ಆಕರ್ಷಿತರಾಗುವಂತೆ ಮಾಡಿದ್ದಳು. ಜ್ಯೋತಿಯ ಮೋಹಕ ಮಾತಿಗೆ ಮರುಳಾದ ಉಪ ತಹಸೀಲ್ದಾರ್​ ಗೌತಮ್​, ಆಕೆಯ ಸೂಚನೆಯಂತೆ ಒಂದೆರಡು ಬಾರಿ ಹೋಟೆಲ್​ನಲ್ಲಿ ಭೇಟಿಯಾಗಿ ಜತೆಗೆ ಊಟ ಮಾಡಿದ್ದರು. ಇದಾದ ಮೇಲೆ ಶುರುವಾಯ್ತು ಆಕೆಯ ಅಸಲಿ ಮುಖ.

    ಕೆಲ ಸಮಯದ ಬಳಿಕ ಭಟ್ಟರಹಳ್ಳಿಯ ಹೋಟೆಲ್​ವೊಂದಕ್ಕೆ ಗೌತಮ್​ ಅವರನ್ನು ಕರೆಸಿಕೊಂಡ ಜ್ಯೋತಿ, ಅದೇ ಬಿಲ್ಡಿಂಗ್​ನ ಮೇಲ್ಭಾಗದ ರೂಂಗೆ ಕರೆದುಕೊಂಡು ಹೋಗಿ ಮತ್ತು ಬರುವ ಜ್ಯೂಸ್​ ಕೊಟ್ಟಿದ್ದಳು. ಗೌತಮ್​ ಜ್ಯೂಸ್​ ಕುಡಿದ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದು, ಅವರ ಬಟ್ಟೆಬಿಚ್ಚಿ ಅವರೊಂದಿಗೆ ಅಶ್ಲೀಲವಾಗಿ ಕಳೆದಿರುವ ಖಾಸಗಿ ಫೋಟೊವನ್ನು ಜ್ಯೋತಿ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಹೋಟೆಲ್​ನಿಂದ ತೆರಳಿದ್ದಳು. ಕೆಲ ಹೊತ್ತಿನ ಬಳಿಕ ಗೌತಮ್​ಗೆ ಎಚ್ಚರವಾದಾಗ ಅರೆನಗ್ನಾವಸ್ಥೆಯಲ್ಲಿದ್ದರು.

    25 ಲಕ್ಷ ರೂ.ಗೆ ಬೇಡಿಕೆ: ಕಳೆದ ಫೆ.24ರಂದು ಕೋಲಾರದ ಎ.ಸಿ. ಕಚೇರಿಗೆ ಬಂದು ಗೌತಮ್​ ಅವರನ್ನು ಭೇಟಿಯಾದ ಆರೋಪಿಗಳಾದ ಗಣಪತಿ ನಾಯಕ್​, ರಮೇಶ್​ಗೌಡ, ಸಂತೋಷ್​ ತಮ್ಮನ್ನು ವಕೀಲರು ಎಂದು ಪರಿಚಯಿಸಿಕೊಂಡಿದ್ದರು. ನಂತರ ಜ್ಯೋತಿ ಸೆರೆಹಿಡಿದಿದ್ದ ಅಶ್ಲೀಲ ವಿಡಿಯೋ ತೋರಿಸಿ, ನಾವು ಹೇಳಿದ ಸ್ಥಳಕ್ಕೆ ಬಂದರೆ ಸಂಪೂರ್ಣ ವಿಡಿಯೋ ತೋರಿಸುವುದಾಗಿ ಹೇಳಿದ್ದರು. ಫೆ.25ರಂದು ಗೌತಮ್​ ಅವರನ್ನು ಕೋಡಿಗೆಹಳ್ಳಿಯ ಹೋಟೆಲ್​ವೊಂದಕ್ಕೆ ಕರೆಸಿಕೊಂಡು ವಿಡಿಯೋ ತೋರಿಸಿ 25 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಸಿದ್ದರು. ಆರೋಪಿಗಳ ಬೆದರಿಕೆಗೆ ಗೌತಮ್​ ಜಗ್ಗದಿದ್ದಾಗ, ಮಾ.10ರಂದು ಮತ್ತೆ ಆರೋಪಿ ಗಣಪತಿ ನಾಯಕ್​ ತಾವಿದ್ದಲ್ಲಿಗೆ ಗೌತಮ್​ ಅವರನ್ನು ಕರೆಸಿಕೊಂಡು ಮಾ.17ರೊಳಗೆ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು. ಇದರಿಂದ ನೊಂದ ಗೌತಮ್​ ಈ ಬಗ್ಗೆ ಕೆ.ಆರ್.​ಪುರ ಪೊಲೀಸರಿಗೆ ದೂರು ನೀಡಿದ್ದರು.

    ಆರೋಪಿಗಳು ಸಿಕ್ಕಿ ಬಿದ್ದಿದ್ದೇ ರೊಚಕ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೌತಮ್​ ಮೂಲಕ ಆರೋಪಿಗಳಿಗೆ ಕರೆ ಮಾಡಿಸಿ, ಹಣ ಕೊಡುವುದಾಗಿ ಯಲಹಂಕದ ಕೊಡಿಗೇಹಳ್ಳಿ ಬಳಿ ಬರುವಂತೆ ಕರೆಸಿಕೊಂಡಿದ್ದರು. ಆರೋಪಿಗಳು ಕಾರಿನಲ್ಲಿ ಬರುತ್ತಿದ್ದಂತೆ ಸಿವಿಲ್​ ಧಿರಿಸಿನಲ್ಲಿದ್ದ ಪೊಲೀಸರು ಕಾರು ಸುತ್ತುವರಿದು ಬಂಧಿಸಲು ಮುಂದಾದಾಗ ಆರೋಪಿಗಳು ಪರಾರಿಯಾಗಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರು ಗೌತಮ್​ಗೆ ಕರೆ ಮಾಡಿ ‘ಹಣ ಕೊಡಲು ಹೇಳಿದರೆ ರೌಡಿಗಳನ್ನು ಕರೆಸುತ್ತೀಯಾ?’ ಎಂದು ಬೆದರಿಸಿದ್ದರು. ಈ ವಿಚಾರವನ್ನು ಗೌತಮ್​ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಆ ಜನಪ್ರಿಯ ವಕೀಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಆರೋಪಿಗಳು ತಮ್ಮ ಕಚೇರಿಯಲ್ಲೇ ಬಚ್ಚಿಟ್ಟುಕೊಂಡಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಆ ವಕೀಲರ ಕಚೇರಿಗೆ ತೆರಳಿದ ಪೊಲೀಸ್​ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಜನಪ್ರಿಯ ವಕೀಲರ ಸಹಚರರು: ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ವಕೀಲರೊಬ್ಬರ ಸಹಚರರು ಎಂಬುದು ಗೊತ್ತಾಗಿದೆ. ದೂರುದಾರರು ಬ್ಲ್ಯಾಕ್​ಮೇಲ್​ನಿಂದ ಆತಂಕಗೊಂಡು ಆರೋಪಿಗಳಿಗೆ ಈ ಹಿಂದೆ 5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಹನಿಟ್ರ್ಯಾಪ್​ ಕೇಸ್​ನಲ್ಲಿ ಆ ಜನಪ್ರಿಯ ವಕೀಲರ ಪಾತ್ರವೇನು? ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆರೋಪಿಗಳನ್ನು 10 ದಿನ ವಶಕ್ಕೆ ಪಡೆದಿರುವ ಪೊಲೀಸರು ಇದೇ ಮಾದರಿಯಲ್ಲಿ ಈ ಹಿಂದೆ ಎಷ್ಟು ಜನರಿಗೆ ಹನಿಟ್ರ್ಯಾಪ್​ ಮಾಡಿದ್ದಾರೆ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಎಚ್​ಡಿಕೆ ಬೆಂಗಾವಲು ವಾಹನ ಅಪಘಾತ: ಪಾವಗಡ ಬಸ್​ ದುರಂತದಲ್ಲಿ ಗಾಯಗೊಂಡವರ ಭೇಟಿ ವೇಳೆ ಮತ್ತೊಂದು ಅವಘಡ

    ತುಮಕೂರಿನ ಲಾಡ್ಜ್​ನಲ್ಲಿ ಹೆಂಡ್ತಿ ಕಾಲನ್ನೇ ಕತ್ತರಿಸಿದ ಗಂಡ: ನೋವಲ್ಲೂ ಆಕೆ ಬಾಯ್ಬಿಟ್ಟ ರಹಸ್ಯ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts