More

    ರಾತ್ರೋರಾತ್ರಿ ಏನಾಯ್ತು? ಬೆಳಗ್ಗೆ ದಿಢೀರ್​ ಕಾಯ್ದೆಗಳನ್ನ ರದ್ದು ಮಾಡಿದ್ದೇಕೆ?: ಎಚ್​ಡಿಕೆ ಅನುಮಾನ

    ರಾಮನಗರ: ಯಾವ ಉದ್ದೇಶಕ್ಕೆ 3 ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ ಎಂಬುದು ಕೇಂದ್ರ ಸರ್ಕಾರವೇ ಸ್ಪಷನೆ ಕೊಡಬೇಕು ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಬಿಡದಿಯ ಕೇತುಗಾನಗಹಳ್ಳಿ ತೋಟದ ಮನೆಯಲ್ಲಿ ಮಾತನಾಡಿದ ಎಚ್​ಡಿಕೆ, ನಿನ್ನೆ ರಾತ್ರೋರಾತ್ರಿ ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿ ಇಂದು ಬೆಳಗ್ಗೆಯೇ ಕಾಯ್ದೆಗಳನ್ನು ಹಿಂಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಕೇಂದ್ರ ಸರ್ಕಾರ ಬಗ್ಗೆ ಹಲವು ಅನುಮಾನ ಹುಟ್ಟುಹಾಕಿವೆ. ಕೃಷಿ ಕಾಯ್ದೆ ಹಿಂಪಡೆಯುವಂತೆ ಒಂದು ವರ್ಷದಿಂದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಉತ್ತರ ಭಾರತದಲ್ಲಿ ಹೋರಾಡುತ್ತಿದ್ದ ನೂರಾರು ರೈತರು ಪ್ರಾಣ ಕಳೆದುಕೊಂಡರು. ಆ ವೇಳೆಯೂ ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಕೇಂದ್ರ ಸರ್ಕಾರ, ಪಂಚ ರಾಜ್ಯಗಳ ಚುನಾವಣೆ ಬರುತ್ತಿದ್ದಂತೆ ತರಾತುರಿಯಲ್ಲಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ. ಸಾಧಕಬಾಧಕಗಳ ಬಗ್ಗೆ ಅವರಿಗೆ ಈಗ ಜ್ಞಾನೋದಯ ಆಗಿದೆಯಾ? ಈ ನಿರ್ಧಾರ ಕೈಗೊಳ್ಳುವಂತೆ ಅವರಿಗೆ ಮನವರಿಕೆ ಮಾಡಿದ್ದು ಯಾರು? ಎಂಬುದಕ್ಕೆಲ್ಲ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.

    ಲೋಕಸಭೆಯಲ್ಲಿ ಕಾಯ್ದೆಗಳನ್ನು ವಾಪಸ್ ಪಡೆದ ಬಳಿಕ ಪ್ರತಿಭಟನೆ ಕೈಬಿಡುವುದಾಗಿ ರೈತರು ಹೇಳಿದ್ದಾರೆ. ಹಲವು ರೈತ ಕುಟುಂಬಗಳು ಬೀದಿಯಲ್ಲಿ ನಿಂತು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಂದಿನಿಂದ ವಾಪಸ್​ ಪಡೆಯುವ ಮಾತೇ ಇಲ್ಲ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಇದೀಗ ದಿಢೀರ್​ ನಿರ್ಧಾರ ಬದಸಿಲಿದ್ದೇಕೆ? ಯಾವ ಉದ್ದೇಶಕ್ಕೆ ಹಿಂಪಡೆಯುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಅನುಮಾನ ಮೂಡಿದೆ ಎಂದು ಎಚ್​ಡಿಕೆ ಹೇಳಿದ್ದಾರೆ.

    ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು: ಸಿದ್ದರಾಮಯ್ಯ ವ್ಯಂಗ್ಯ

    ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ‌ ರೂ.‌ ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts