More

    ಕರೊನಾ ಹೆಚ್ಚಾಗ್ತಿದೆ, 15 ದಿನ ಶಾಲಾ‌-ಕಾಲೇಜು ಬಂದ್​ ಮಾಡಿ: ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ

    ರಾಮನಗರ: ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೊಡ್ಡ ಮಟ್ಟದಲ್ಲಿ ಪಾಸಿಟಿವ್ ಬರ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ 15 ದಿನ ಶಾಲಾ‌-ಕಾಲೇಜುಗಳನ್ನು ಬಂದ್​ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

    ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಶಾಲಾ-ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ಕರೊನಾ ಪ್ರಕರಣ ಹೆಚ್ಚಾಗ್ತಿದೆ. ರಜೆ ಕೊಟ್ಟು ವಸತಿ ಶಾಲೆಗಳನ್ನು ಬಂದ್ ಮಾಡಬೇಕು. ನಿಮ್ಮ ಮುಂದೆ ವಾಸ್ತವಾಂಶದ ವರದಿ ಇದೆ. ಆ ಮಾಹಿತಿಗಳ ಆಧಾರದ ಮೇಲೆ ನೀವು ನಿರ್ಣಯ ತೆಗೆದುಕೊಳ್ಳಬೇಕು. ಈಗಾಗಲೇ ಅನೇಕ ಶಾಲಾ-ಕಾಲೇಜುಗಳಲ್ಲಿ ಪಾಸಿಟಿವ್ ರೇಟ್ ಜಾಸ್ತಿಯಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೀವಕ್ಕೆ ತೊಂದರೆ ಇಲ್ಲದಿದ್ರೂ ಪ್ಯಾನಿಕ್ ಆಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನ ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

    ಲಾಕ್​ಡೌನ್ ವಿಚಾರದಲ್ಲಿ ಬಿಜೆಪಿ ನಾಯಕರಲ್ಲೇ ಸಮನ್ವಯತೆ ಇಲ್ಲ. ಸಾರ್ವಜನಿಕರ ಒಂದು ವರ್ಗ ಪ್ರತಿನಿತ್ಯ ವ್ಯಾಪಾರ ಹಾಗೂ ಕೂಲಿ ಕೆಲಸ ಮಾಡುತ್ತಾರೆ. ಅಂತಹವರ ಕುಟುಂಬದ ನಿರ್ವಹಣೆ ಅವರ ಒಂದು ದಿನದ ಆದಾಯದ ಮೇಲೆ ನಿಂತ್ತಿರುತ್ತೆ. ವಿಕೇಂಡ್ ಕರ್ಫ್ಯೂ ಇಲ್ಲ, ವಿಕೇಂಡ್ ಲಾಕ್​ಡೌನ್ ಮಾಡುವುದರಿಂದ ಅಂತಹವರಿಗೆ ಕಷ್ಟ ಆಗುತ್ತೆ. ಅವರಿಗೆಲ್ಲ ಬದುಕು ಕಟ್ಟುವುದು ಸರ್ಕಾರದ ಜವಬ್ದಾರಿ. ಈ ಮಾತನ್ನ ವಿರೋಧ ಪಕ್ಷದ ನಾವು ಹೇಳಿದ್ರೆ ಅವರಿಗೇನು ಮಾತನಾಡುತ್ತಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ಕೂಡ ಸರ್ಕಾರ ನಡೆಸಿದವರೇ. ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂಬುದು ನಮ್ಮ ಉದ್ದೇಶ ಅಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ? ನನ್ನ ಹೊಟ್ಟೆಯಲ್ಲಿದ್ದ 7 ತಿಂಗಳ ಮಗುವನ್ನೂ ಕಿತ್ತುಕೊಂಡೆ.. ಈಗ ಗಂಡನ ಪ್ರಾಣವನ್ನೂ ತೆಗೆದೆ…

    ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ನಡೆಯುತ್ತಿತ್ತು… ಅಷ್ಟರಲ್ಲಿ ಆತ ಕಣ್ಣುಬಿಟ್ಟು ಉಸಿರಾಡಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts