More

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರ ಹತ್ಯೆ: ನೈಜ ಆರೋಪಿಗಳನ್ನ ಬಂಧಿಸಲು 5 ದಿನ ಗಡುವು ಕೊಟ್ಟ ಎಚ್​ಡಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ 3 ಕೊಲೆ ಪ್ರಕರಣಗಳ ನೈಜ ಅಪರಾಧಿಗಳನ್ನು ಆ.5ರೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಆ.6ರಂದು ಮಂಗಳೂರಿನಲ್ಲಿ ಶಾಂತಿಯುತ ಧರಣಿ ಮಾಡುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಚ್ಚರಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್​ಡಿಕೆ, ನನಗೆ ಇಲ್ಲಿ ಬೆಂಬಲ ಇಲ್ಲ, ನನಗೆ ಸ್ವಾರ್ಥವೂ ಇಲ್ಲ. ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳೂ ಇಲ್ಲ. ಹೀಗಾಗಿ ನನಗೆ ಇಲ್ಲಿ ಶಾಂತಿ ನೆಲೆಸಲು ಯಾರು ಬೆಂಬಲ ಕೊಡ್ತಾರೋ ಗೊತ್ತಿಲ್ಲ. ಈ ಮೂರು ಕುಟುಂಬ ನೋಡಿ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬೇಕು ಎಂದರು.

    ಆ.5ರ ಒಳಗೆ ಸರ್ಕಾರ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲಿ. ಈ ಹಿಂದೆ ಗೋಲಿಬಾರ್ ಮಾಡಿ ಹತ್ತು ಲಕ್ಷ ರೂ. ಕೊಟ್ಟು ವಾಪಸ್ ತಗೊಂಡ್ರು. ಸರ್ಕಾರ ಇರೋದು ಒಂದೇಒಂದು ಸಮಾಜಕ್ಕಲ್ಲ, ಆರೂವರೆ ಕೋಟಿ ಜನತೆಗೆ. ಯಾರನ್ನೋ ಮೆಚ್ಚಿಸಲು ಈ ಸರ್ಕಾರ ಇಲ್ಲಿಲ್ಲ. 2006ರಲ್ಲಿ ಗಲಾಟೆ ಆದಾಗ ನಾನೇ ಖುದ್ದು ಬಂದು ಗಲಭೆ ನಿಲ್ಲಿಸಿದ್ದೆ. ನನ್ನ ಕಾಲವೇ ಇರಲಿ, ಯಾರ ಕಾಲವೇ ಇರಲಿ, ಸರಿಯಾಗಬೇಕು ಎಂದರು.

    ಡಿಜಿಪಿ ಇಲ್ಲಿ ಏನು ಸಂದೇಶ ಕೊಡಲು ಬಂದರು, ಮೂವರ ಮನೆಗೆ ಹೋದ್ರಾ? ಇದರಲ್ಲಿ ನಾಯಕರ ರಾಜಕೀಯ ಹಸ್ತಕ್ಷೇಪ ಇದೆಯಾ ಗೊತ್ತಿಲ್ಲ. ಆದರೆ ಎರಡೂ ರಾಜಕೀಯ ಪಕ್ಷಗಳು ಗಲಭೆ ಎಬ್ಬಿಸಿ ರಾಜಕೀಯ ಫಸಲು ತೆಗೆಯುತ್ತಿವೆ. ನಾನು ಈ ಕರಾವಳಿಯನ್ನ ನನ್ನ ರಾಜಕೀಯದ ಖಾತೆಯಲ್ಲೇ ಇಟ್ಟುಕೊಂಡಿಲ್ಲ. ನಾನು ಧರಣಿ ಮಾಡಿ ಇಲ್ಲಿ ಏನನ್ನೂ ಗೆಲ್ಲಲೂ ಸಾಧ್ಯವಿಲ್ಲ. ಆದರೆ ನಾನು ಜನರ ನೋವಿಗೆ ಧ್ವನಿಯಾಗಬೇಕಿದೆ ಎಂದರು.

    ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಪ್ಪು ಫ್ಯಾನ್ಸ್ ಗರಂ​: ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುವೆ…

    ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts