More

    ತೃತೀಯ ರಂಗ ರಚನೆ ಕಷ್ಟ, ನನಗೆ ವಯಸ್ಸಾಗಿದೆ, ದೇಶ ಸುತ್ತುವ ಶಕ್ತಿ ನನ್ನಲ್ಲಿಲ್ಲ: ದೇವೇಗೌಡ

    ಕಲಬುರಗಿ: ವಯಸ್ಸಿನ ಹಿನ್ನೆಲೆ ತೃತೀಯ ರಂಗ ಹುಟ್ಟು ಹಾಕುವ ಕೆಲಸ ಮಾಡಲು ನನಗೆ ಆಗಲ್ಲ. ದೇಶಾದ್ಯಂತ ಸುತ್ತಾಡುವಷ್ಟು ಶಕ್ತಿ ಇಲ್ಲ. ಮಮತಾ ಬ್ಯಾನರ್ಜಿ ಬಲಿಷ್ಠ ನಾಯಕಿ. ಅವರದ್ದು, ನಮ್ಮದು ಒಂದೇ ಹೋರಾಟ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ಈಗಿನ ಪರಿಸ್ಥಿತಿ ನೋಡಿದರೆ ತೃತೀಯ ರಂಗ ರಚನೆ ಕಷ್ಟಕರ. ಮಮತಾ ಬ್ಯಾನರ್ಜಿ ಅವರು `ಮೈನಸ್ ಬಿಜೆಪಿ- ಮೈನಸ್ ಕಾಂಗ್ರೆಸ್’ ಹೋರಾಟ ಶುರು ಮಾಡಿದ್ದಾರೆ. ಪ್ರಾದೇಶಿಕ ಪಕ್ಷಗಳೆಲ್ಲ ಒಂದುಗೂಡುವುದರಿಂದ ಬಲ ಹೆಚ್ಚಾಗಲಿದೆ. ಆದರೆ ನನಗೆ ವಯಸ್ಸಾಗಿದೆ, ತೃತೀಯ ರಂಗ ಹುಟ್ಟು ಹಾಕುವ ಕೆಲಸ ಮಾಡಲು ನನಗೆ ಆಗಲ್ಲ ಎಂದರು.

    ಸದ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ವರ್ಚಸ್ಸು ಕುಸಿದಿದ್ದು, ಕಾಂಗ್ರೆಸ್ ಎಷ್ಟು ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಆಗಲಿದೆ. ಜೆಡಿಎಸ್ ಮುಕ್ತ ರಾಜ್ಯ ನಿರ್ಮಿಸುತ್ತೇವೆ ಎಂದು ಕಾಂಗ್ರೆಸ್-ಬಿಜೆಪಿ ಹೇಳುತ್ತಿವೆ. ಆದರೀಗ ಅವರೆಡರ ಶಕ್ತಿ ಕ್ಷೀಣಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಕನಿಷ್ಠ 5 ವಿಧಾನಸಭೆ ಸ್ಥಾನ ಗೆಲ್ಲುವ ಗುರಿಯೊಂದಿಗೆ ಸಂಘಟನೆ ಆರಂಭಿಸಿದ್ದೇವೆ. ಎಲ್ಲೆಡೆ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ನಾನು ಪ್ರತಿ ಜಿಲ್ಲೆಯಲ್ಲಿ ಎರಡು ದಿನ ಕ್ಯಾಂಪ್ ಮಾಡಲಿದ್ದೇನೆ. ಕುಮಾರಸ್ವಾಮಿ ಸೇರಿ ಉಳಿದ ನಾಯಕರು ಪ್ರವಾಸ ಮಾಡುವರು. ಈ ಭಾಗದಲ್ಲಿ ಬಂಡೆಪ್ಪ ಖಾಶೆಂಪುರ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಾರೆ. 2023ರಲ್ಲಿ ಪಕ್ಷ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೇಕೆದಾಟು ಕಾಂಗ್ರೆಸ್ ನಾಟಕ: ಕಾಂಗ್ರೆಸ್ ತನ್ನ ವರ್ಚಸ್ಸು ಮರಳಿ ಪಡೆಯಲು ಮೇಕೆದಾಟು ಪಾದಯಾತ್ರೆ ನಾಟಕ ಆರಂಭಿಸಿದೆ. ಅದರ ಉದ್ದೇಶ ಈಡೇರುವುದು ಸುಲಭವಲ್ಲ ಎಂದ ದೇವೇಗೌಡ, ಮೇಕೆದಾಟು ತಕರಾರು ಕುರಿತು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಲು ಸುಪ್ರೀಂ ಕೋರ್ಟ್ ದಿನಾಂಕ ನಿಗದಿಪಡಿಸಿದೆ ಎಂಬ ಮಾಹಿತಿಯಿದೆ. ಇಂಥ ಸಂದರ್ಭದಲ್ಲಿ ಹೋರಾಟ ಅನಗತ್ಯ. ಮೇಕೆದಾಟು ಪ್ರದೇಶದಲ್ಲಿ ನಮ್ಮ ಶಕ್ತಿ ಹೆಚ್ಚಿದೆ ಎಂಬುದನ್ನು ಕೈ ನಾಯಕರು ಅರಿತುಕೊಳ್ಳಲಿ ಎಂದರು.

    ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾರ ಜತೆಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ದೇವೇಗೌಡ ನಿರಾಕರಿಸಿದರು.

    ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸುಗುಸು ಸ್ಫೋಟ! ಕೆಟ್ಟ ನನ್ಮಗ, ಇವನಿಂದ ಜಿಲ್ಲೇಲಿ ಒಂದು ಸೀಟ್ ಬರೋಲ್ಲ…

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts