More

    ಕರೊನಾ ಲಸಿಕೆ ಹಾಕಿಸಿಕೊಂಡಿಲ್ಲವೇ? ಹಾಗಿದ್ರೆ ನಿಮಗೆ ಪಡಿತರ- ಮಾಸಾಶನ ಸಿಗಲ್ಲ!

    ಚಾಮರಾಜನಗರ: ನೀವು ಕರೊನಾ ಲಸಿಕೆ ಹಾಕಿಸಿಕೊಳ್ಳೋದಿಲ್ಲವೇ? ಹಾಗಿದ್ರೆ ನಿಮಗೆ ರೇಷನ್​ ಮತ್ತು ಪೆನ್ಷನ್​ ಸಿಗಲ್ಲ!

    ಹೌದು, ಇಂತಹದ್ದೊಂದು ಆದೇಶ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಾರಿಯಾಗಿದೆ. ನೋ ವ್ಯಾಕ್ಸಿನೇಷನ್‌- ನೋ ರೇಷನ್, ನೋ ವ್ಯಾಕ್ಸಿನೇಷನ್‌-ನೋ ಪೆನ್ಷನ್. ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತಂದರೆ ಮಾತ್ರ ಫಲಾನುಭವಿಗಳಿಗೆ ಪಡಿತರ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಮಾಸಾಶನ ಪಡೆಯಬೇಕಿದ್ದರೂ ವ್ಯಾಕ್ಸಿನೇಷನ್‌ ಪ್ರಮಾಣಪತ್ರ ಬೇಕೇಬೇಕು. ಈ ಪತ್ರ ತಂದರಷ್ಟೇ ಹಣ ಪಾವತಿಸುವಂತೆ ಎಲ್ಲ ಬ್ಯಾಂಕ್​ಗಳಿಗೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ 2.90 ಲಕ್ಷ ಬಿಪಿಎಲ್, ಅಂತ್ಯೋದಯ ಪಡಿತರದಾರರಿದ್ದಾರೆ. ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ 2.20 ಸಾವಿರ ಮಂದಿ ಮಾಸಾಶನ ಫಲಾನುಭವಿಗಳಿದ್ದಾರೆ.

    ಜಿಲ್ಲೆಯ ಹಾಡಿಗಳಲ್ಲಿ, ಕಾಡಂಚಿನ ಗ್ರಾಮಗಳ ಬಹುತೇಕರು ಕರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಮನವೊಲಿಸಿದರೂ ಹಲವರು ಲಸಿಕೆ ಬೇಡ ಎಂದು ವಾಗ್ವಾದ ಮಾಡುತ್ತಿರುವ ಘಟನೆ ಮರುಕಳಿಸುತ್ತಲೇ ಇದೆ. ಲಸಿಕಾಕರಣಕ್ಕೆ ವೇಗ ನೀಡಲು ಮತ್ತು ಕರೊನಾ ಸೋಂಕಿನ ಗಂಭೀರತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅವರ ಆರೋಗ್ಯ ಸುರಕ್ಷತೆಗಾಗಿ ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ.

    ಮೈಸೂರಲ್ಲಿ ಗ್ಯಾಂಗ್​ ರೇಪ್​: ನಮ್ಮಲ್ಲೊಬ್ಬನಿಗೆ ಲೈಂಗಿಕ ಚಟವಿತ್ತು… ಬೆಚ್ಚಿಬೀಳಿಸುತ್ತೆ ಆರೋಪಿಗಳ ಮಾತು

    ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು: ಪಿಎಸ್​ಐ ಸೇರಿ ಐವರು ಪೊಲೀಸರ ಅಮಾನತು

    ಮೈಸೂರಲ್ಲಿ ಗ್ಯಾಂಗ್​ರೇಪ್ ನಡೆದ ಬಳಿಕ ಎಚ್ಚೆತ್ತ ಚಾಮರಾಜನಗರ ಪೊಲೀಸರು! ಎಲ್ಲೆಡೆ ಪೊಲೀಸ್​ ಗಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts