ಮೈಸೂರಲ್ಲಿ ಗ್ಯಾಂಗ್​ರೇಪ್ ನಡೆದ ಬಳಿಕ ಎಚ್ಚೆತ್ತ ಚಾಮರಾಜನಗರ ಪೊಲೀಸರು! ಎಲ್ಲೆಡೆ ಪೊಲೀಸ್​ ಗಸ್ತು

chamarajanagara police
Published on

ಚಾಮರಾಜನಗರ: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್ ನಡೆದ ಬಳಿಕ ಚಾಮರಾಜನಗರ ಜಿಲ್ಲಾ ಪೊಲೀಸರು ಎಚ್ಚೆತ್ತಿದ್ದಾರೆ.

ಜಿಲ್ಲೆಯ ಪ್ರೇಕ್ಷಣೀಯ ಸ್ಥಳ, ಶಾಲಾ ಕಾಲೇಜು, ನಿರ್ಜನ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಭರಚುಕ್ಕಿ, ಹೊಗೆನಕಲ್, ಬಂಡೀಪುರ, ಕೆ.ಗುಡಿ, ಬಿಳಿಗಿರಿರಂಗನ ಬೆಟ್ಟದಲ್ಲಿ ಪೊಲೀಸ್​ ಕಣ್ಗಾವಲಿಗೆ ಸಿದ್ಧತೆ ನಡೆಯುತ್ತಿದೆ. ನಿರ್ಜನ ಪ್ರದೇಶದಲ್ಲಿ 112 ವೆಹಿಕಲ್ ಹಾಗೂ ಹೈವೇ ಪ್ಯಾಟ್ರೋಲ್ ವಾಹನಗಳ ಮೂಲಕ ಗಸ್ತು ನಡೆಸಲಾಗ್ತಿದೆ. ಸಿಸಿಟಿವಿ ಅಳವಡಿಕೆ, ಲೈಟಿಂಗ್ ಹಾಕಲೂ ಗ್ರಾಪಂ ಮತ್ತು ಮುನಿಸಿಪಾಲಿಟಿ ಜತೆ ಪತ್ರ ವ್ಯವಹಾರ ಮಾಡಿದ್ದೀವಿ. ನಿರ್ಭಯಾ ಸ್ಕೀಂ ನಲ್ಲಿ ಪಿಂಕ್ ಮೋಟಾರ್ ಬೈಕ್​ನಲ್ಲಿ ಪ್ಯಾಟ್ರೋಲ್ ಮಾಡ್ತೀವಿ ಎಂದು ಎಸ್ಪಿ ದಿವ್ಯಾ ಸಾರಾ ಥಾಮಸ್ ಹೇಳಿದ್ದಾರೆ.

ಕಾಲೇಜುಗಳಲ್ಲಿ ಟ್ರೈನಿಂಗ್ ಕೊಡಲೂ ಕ್ಯಾಂಪ್ ಆಯೋಜನೆ ಮಾಡ್ತೀವಿ. ಭರಚುಕ್ಕಿ, ಹೊಗೆನಕಲ್​ ನಲ್ಲಿ‌ ಸಿಸಿಟಿವಿ ಕ್ಯಾಮೆರಾ ಇಲ್ಲ. ಇಲ್ಲಿ ಹಾಗೂ ಜನ ಸೇರುವ ಕಡೆಯೂ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net