More

    ನಾಳೆಯಿಂದ ಹಾಸನಾಂಬೆ ದರ್ಶನೋತ್ಸವ: ನ.6ಕ್ಕೆ ದೇಗುಲ ಬಾಗಿಲು ಬಂದ್​

    ಹಾಸನ: ಸಪ್ತಮಾತೃಕೆಯರಲ್ಲಿ ಒಬ್ಬಳಾದ ಹಾಗೂ ವರ್ಷಕ್ಕೊಮ್ಮೆ ಮಾತ್ರವೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನೋತ್ಸವಕ್ಕೆ ಅ.28ರ ಮಧ್ಯಾಹ್ನ 12.30ಕ್ಕೆ ಚಾಲನೆ ದೊರೆಯಲಿದೆ.

    ಕೋವಿಡ್​ ಲಸಿಕೆ ಪ್ರಮಾಣಪತ್ರ ಹಾಗೂ ಗುರುತಿನ ಕಾರ್ಡ್​ ಹೊಂದಿರುವವರಿಗೆ ಮಾತ್ರ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಸಂಪ್ರದಾಯದಂತೆ ಅಶ್ವೀಜ ಮಾಸದ ಪ್ರಥಮ ಗುರುವಾರ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಬಲಿಪಾಢ್ಯಮಿ ಮರುದಿನವಾದ ನ.6ರಂದು ಬಾಗಿಲು ಮುಚ್ಚಲಾಗುವುದು. ಅ.28 ಹಾಗೂ ನ.6ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ.

    ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್​ ನಿಯಂತ್ರಣ ದೃಷ್ಟಿಯಿಂದ ವಯೋವೃದ್ಧರು ಹಾಗೂ ಮಕ್ಕಳನ್ನು ದೇವಾಲಯಕ್ಕೆ ಕರೆತರದಂತೆ ಜಿಲ್ಲಾಡಳಿತ ಸಲಹೆ ನೀಡಿದೆ.

    ರಜನಿ ಇದ್ದ ಬಸ್​ ಚೆಕ್​ ಮಾಡೋದೇ ಕಷ್ಟವಾಗಿತ್ತು… ಬಸ್​ನಲ್ಲಿ ಇದ್ದವರು ಗಲಾಟೆ ಮಾಡಿ ನನ್ನನ್ನು ಕೆಳಗಿಳಿಸಿದ್ರು…

    ಗೆಳತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು! ಹೋಂ ಸ್ಟೇನಲ್ಲಿ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts