More

    ಮಳೆ ಮುಂದುವರಿದರೆ ಈ ಗ್ರಾಮಕ್ಕೆ ಗಂಡಾಂತರ ಗ್ಯಾರಂಟಿ! 2 ಕೆರೆಗಳ ಏರಿ ಬಿರುಕು ಬಿಡೋ ಮುನ್ಸೂಚನೆ

    ಚಾಮರಾಜನಗರ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಚಿಕ್ಕಕೆರೆ (ಅಕ್ಕಮ್ಮನಕೆರೆ) ಹಾಗೂ ದೊಡ್ಡಕೆರೆ ಭರ್ತಿಯಾಗಿವೆ. ವರುಣನ ಅಬ್ಬರ ಮುಂದುವರಿದರೆ ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ.

    ಸುಮಾರು 3 ವರ್ಷಗಳ ಬಳಿಕ ಚಿಕ್ಕಕೆರೆ (ಅಕ್ಕಮ್ಮನಕೆರೆ) ಹಾಗೂ ದೊಡ್ಡಕೆರೆ ತುಂಬಿವೆ. ಕೆರೆ ತುಂಬಿದ್ದಕ್ಕೆ ಸಂತಸ ಪಡಬೇಕಿದ್ದ ಗ್ರಾಮಸ್ಥರಲ್ಲಿ ಆತಂಕ ಆವರಿಸಿದೆ. ಕೆರೆ ಏರಿ ಬಿರುಕು ಬಿಟ್ಟರೆ ಗ್ರಾಮ ಜಲಾವೃತಗೊಳ್ಳುವ ಭೀತಿ ಎದುರಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮೊದಲು ಚಿಕ್ಕಕೆರೆ ಭರ್ತಿಯಾಗಿದ್ದು, ಬಳಿಕ ದೊಡ್ಡಕೆರೆಗೆ ನೀರು ಹರಿದಿದೆ. ಕೆರೆ ದಡದ ಭೂಮಿಯಲ್ಲಿ ನೀರು ಜಿನುಗುತ್ತಿದ್ದು, ಕೆರೆ ಏರಿ ಹೊಡೆದರೆ 150 ಮನೆಗಳು, ಕೃಷಿ ಭೂಮಿಗೆ ನೀರು ನುಗ್ಗಲಿದೆ.

    ಬುಧವಾರ ಸುರಿದ ಮಳೆಯಿಂದಾಗಿ ಇಲ್ಲಿನ ಉಪ್ಪಾರ ಬಡಾವಣೆಯ ಎರಡು ಮನೆಗಳಿಗೆ ನೀರು ಹರಿದು ಅವಾಂತರ ಸೃಷ್ಠಿಯಾಗಿದೆ. ನೀರು ಹೊರಹಾಕಲು ಮಹಿಳೆಯರು, ಮಕ್ಕಳು ಹರಸಾಹಸ ಪಡುತ್ತಿದ್ದಾರೆ. ತಡರಾತ್ರಿ ಬಸವಣ್ಣ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಕುಟುಂಬಸ್ಥರು ಪ್ರಾಣ ಪಾಯದಿಂದ ಪಾರಾಗಿದ್ದಾರೆ.

    ಧಾರಾಕಾರ ಮಳೆ: ಮಾರ್ಕೋನಹಳ್ಳಿ ಜಲಾಶಯದ ನೀರಲ್ಲಿ ಕಾರು ಸಮೇತ ಕೊಚ್ಚಿ ಹೋದ ಮೂವರ ರಕ್ಷಣೆ

    ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts