More

    ನನ್ನತ್ರ 8 ಬಾಂಬ್​ ಇದೆ… ಅಪ್ಪ ವಕೀಲ- ಚಿಕ್ಕಪ್ಪ ಶಾಸಕ… ಕಂಪನಿಗೆ ಧಮ್ಕಿ ಹಾಕಿದ್ದ ಟೆಕ್ಕಿಗೆ ಹೈಕೋರ್ಟ್​ ಶಾಕ್​

    ಬೆಂಗಳೂರು: ‘ನನ್ನ ಬಳಿ ಒಂದು ಗನ್​, 8 ಬಾಂಬ್​ ಹಾಗೂ 2 ಕತ್ತಿ ಇದೆ. ನನ್ನ ತಂದೆ ವಕೀಲ, ಚಿಕ್ಕಪ್ಪ ಶಾಸಕ ಆಗಿದ್ದಾರೆ. ನಿಮ್ಮ ವಿರುದ್ಧ ಯಾವುದೇ ರೀತಿಯ ವಿಧ್ವಂಸಕ ಕೃತ್ಯವೆಸಗಲು ನಾನು ಸಮರ್ಥನಿದ್ದೇನೆ’ ಎಂದು ಕೆಲಸ ಮಾಡುತ್ತಿದ್ದ ಸಂಸ್ಥೆಯ ಆಡಳಿತ ಮಂಡಳಿಗೇ ಇ-ಮೇಲ್​ ಕಳುಹಿಸಿ ಬೆದರಿಕೆಯೊಡ್ಡಿದ್ದ ಸಾಪ್ಟ್​ವೇರ್​ ಇಂಜಿನಿಯರ್​ಗೆ ಹೈಕೋರ್ಟ್​ ತಕ್ಕಶಾಸ್ತಿ ಮಾಡಿದೆ.

    ಉದ್ಯೋಗ ನೀಡಿದ್ದ ಸಂಸ್ಥೆಗೆ ಬೆದರಿಕೆ ಹಾಕಿದ ಇಂಜಿನಿಯರ್​ ಹೆಸರು ಆಶೀಶ್​ ಕುಮಾರ್​ ನಾಥ್​. ಈತ ಜೆಪಿ ನಗರದಲ್ಲಿ ಶಾಖೆ ಹೊಂದಿರುವ, ಅಮೆರಿಕ ಮೂಲದ ಸಾಪ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಆಶೀಶ್​ನನ್ನು ಕೆಲಸದಿಂದ ವಜಾ ಮಾಡಿತ್ತು. ಈ ಪ್ರಕರಣ ಬೆಂಗಳೂರಿನ 3ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೆಲಸದಿಂದ ವಜಾಗೊಂಡಿದ್ದ ಆಶೀಶ್​​ ಎಂಬಾತನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡು, ಎಲ್ಲ ಹಿಂಬಾಕಿ ಪಾವತಿಸುವಂತೆ ಕಾರ್ಮಿಕ ನ್ಯಾಯಾಲಯ 2021ರ ಫೆ.26ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾಪ್ಟ್​ವೇರ್​ ಕಂಪನಿಯು ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿತ್ತು.

    ಕಂಪನಿಯ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ.ಎಸ್​. ಮುದಗಲ್​ ಅವರಿದ್ದ ಪೀಠ, ಆಶೀಶ್​ ಕುಮಾರ್​ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದು ಪಡಿಸಿದೆ. ​ಆತನನ್ನು ಕೆಲಸದಿಂದ ಬಿಡುಗಡೆಗೊಳಿಸಲು ಅನುಮತಿ ನೀಡಿದೆ. ಯಾವುದೇ ಶಿಸ್ತು ವಿಚಾರಣೆ ನಡೆಸದೆ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಹಿನ್ನೆಲೆಯಲ್ಲಿ ಆತನಿಗೆ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ಉದ್ಯೋಗದಾತ ಕಂಪನಿಗೆ ನಿರ್ದೇಶಿಸಿದೆ.

    ದೊಡ್ಡ ತ್ಯಾಗಕ್ಕೆ ಸಿದ್ಧರಾದರೇ ಡಿಕೆಶಿ? ಕುತೂಹಲ ಮೂಡಿಸಿದೆ ಅವರ ಈ ಮಾತು…

    ‘ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ, ಕಾರಂಜಿ ಕಲ್ಲು! ಡಮರುಗ, ಕಮಲ, ಆನೆ, ಕುದುರೆ… ಹಿಂದೂ ಚಿಹ್ನೆಯಲ್ಲ’

    ಅನಂತರಾಜು ಡೆತ್​ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ಪತ್ನಿ-ಪ್ರೇಯಸಿ ನಡುವಿನ 2ನೇ ಆಡಿಯೋ ವೈರಲ್​, ಸ್ಥಳೀಯರಲ್ಲಿ ಗುಸುಗುಸು ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts