More

    ನನ್ನ ಹೆಸರನ್ನ ಯಾಕೆ ಕೆಡಿಸಿಕೊಳ್ಳಲಿ? ಜೆಡಿಎಸ್​ನಲ್ಲೇ ಇದ್ದೀನಿ, ಬಿಜೆಪಿಗೆ ಹೋಗಲ್ಲ: ಗುಬ್ಬಿ ಶಾಸಕ ಶ್ರೀನಿವಾಸ್​

    ತುಮಕೂರು: ನನ್ನನ್ನು ಬಿಜೆಪಿಗೆ ಬರುವಂತೆ ನನ್ನ ಅಳಿಯನ ಮೂಲಕ ಒತ್ತಾಯಿಸಿದ್ರು. ನಾನು ಇಂಡಿಪೆಂಡೆಂಟ್ ಆಗಿ ಗೆದ್ದು ಜೆಡಿಎಸ್ ಪಕ್ಷಕ್ಕೆ ಬಂದವನು. ನಾನು ಪ್ರಾಮಾಣಿಕವಾಗಿ ಪಕ್ಷಾಂತರ ಮಾಡಿದ್ರೂ ಹಣ ಇಸ್ಕೊಂಡು ಹೋದ ಅಂತಾರೆ. ಜನರಿಗೆ ಮುಖ ತೋರಿಸೋಕೆ ಆಗೋಲ್ಲ, ಬೇಕಿದ್ರೆ ನಿವೃತ್ತಿ ಘೋಷಿಸಿ ಮನೇಲಿ ಇರ್ತೀನಿ, ನಾನು ಬರಲ್ಲ ಎಂದಿದ್ದೆ ಎಂದು ಗುಬ್ಬಿ ಶಾಸಕ ಎಸ್​.ಆರ್. ಶ್ರೀನಿವಾಸ್ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

    ಎಚ್​.ಡಿ.ಕುಮಾರಸ್ವಾಮಿ ಬೇಸರ ವಿಚಾರಕ್ಕೆ ಗುಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ನಾನು ಇಂಡಿಪೆಂಡೆಂಟ್ ಆಗಿ ಗೆದ್ದು ಜೆಡಿಎಸ್ ಪಕ್ಷಕ್ಕೆ ಬಂದವನು. ನನ್ನಿಂದ ಅವರಿಗೆ ಲಾಭ ಆಗಿದೆ ಬಿಟ್ರೆ ತೊಂದರೆ ಏನು ಆಗಿಲ್ಲ. ನಾನೇನಾದ್ರು ಕಾಸು ಇಸ್ಕೊಂಡು ಬೇರೆ ಪಕ್ಷಕ್ಕೆ ಹೋಗಿದ್ನಾ? ನಾನಿನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದೀನಿ, ಇಲ್ಲಿ ಪ್ರಮಾಣಿಕವಾಗಿ ಇದ್ದೇನೆ. ಬೇಸರ ಪಡೋ ಪ್ರಮೇಯನೇ ಇಲ್ಲ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ನನ್ನ ಅಳಿಯನ ಮೂಲಕ ನನನ್ನು ಬಿಜೆಪಿಗೆ ಸೆಳೆಯುವ ಕೆಲಸ ಮಾಡಿದ್ರು. ನನನ್ನು ಯಡಿಯೂರಪ್ಪ ಕರೆಸಿ ಮಾತನಾಡಿದ್ರು. ರಾಜಕೀಯ ನಿವೃತ್ತಿ ಹೊಂದುತ್ತೇನೆಯೇ ವಿನಃ ಈ ಸಂಧರ್ಭದಲ್ಲಿ ಯಾವುದೇ ಪಕ್ಷಕ್ಕೆ ಬರೋಲ್ಲ ಅಂದಿದ್ದೆ ಎಂದು ಸ್ಪಷ್ಟಪಡಿಸಿದರು.

    ಅವನು ಅಷ್ಟು ಇಸ್ಕೊಂಡ- ಇಷ್ಟು ಇಸ್ಕೊಂಡ ಅಂತಾರೆ. ಅಂತಹ ಬದುಕು ಯಾಕ್​ ಬೇಕು? ಸೂರ್ಯ-ಚಂದ್ರ ಇರೋವರೆಗೂ ಈ ಅಧಿಕಾರ ಶಾಶ್ವತ ಆದ್ರೆ ಅಲ್ಲೋ- ಇಲ್ಲೋ ಹೋಗಬೇಕು. ಇವತ್ತು ಇರುತ್ತೆ, ನಾಳೆ ಹೋಗೋ ಅಧಿಕಾರಕ್ಕೆ ಯಾಕಿಷ್ಟು ಒದ್ದಾಡಬೇಕು? ಇಂತಹ ಸಂದರ್ಭದಲ್ಲಿ ನಾನು ನನ್ನ ಹೆಸರನ್ನು ಯಾಕೆ ಕೆಡಿಸಿಕೊಳ್ಳಬೇಕು. ನಾನಿನ್ನೂ ಜೆಡಿಎಸ್ ಪಕ್ಷದಲ್ಲಿ ಪ್ರಮಾಣಿಕವಾಗಿ ಇದ್ದೇನೆ. ಬೇಸರ ಪಡೋ ಪ್ರಮೇಯನೇ ಇಲ್ಲ ಎಂದರು.

    ಕೋವಿಡ್​ಗೆ ಬಲಿಯಾದ ತಂದೆ ಸಮಾಧಿ ಬಳಿ ಬರ್ತ್​ ​ಡೇ ಆಚರಿಸಿಕೊಂಡ ಬಾಲಕಿ! ಅಪ್ಪಾ ಕೇಕ್​ ತಿನ್ನಪ್ಪಾ…

    ಯುವಕನಿಗೆ ‘ಮೂತ್ರ ನೆಕ್ಕಿಸಿದ್ದ’ ಪಿಎಸ್​ಐ ಬಂಧನ

    ಮೈಸೂರು ಗ್ಯಾಂಗ್​ ರೇಪ್​: ಆ ತಡರಾತ್ರಿ ಪೊಲೀಸರನ್ನೇ ಚಾಕುವಿನಿಂದ ಇರಿಯಲು ಮನ್ನುಗ್ಗಿದ್ದ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts