ತುಮಕೂರು: ಎಂತೆಂಥಾ ಕಳ್ಳರು ಇರ್ತಾರೆ ನೋಡಿ. ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಕದ್ದೊಯ್ದ ಕಳ್ಳರು, ಹಲವೆಡೆ ಸುತ್ತಾಡಿ ಮತ್ತೆ ಪಕ್ಕದ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ.
ಇಂತಹ ವಿಚಿತ್ರ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಸೋಮವಾರ ಕಳ್ಳರು ಕದ್ದೊಯ್ದಿದ್ದರು. ಕುಣಿಗಲ್ ತಾಲೂಕಿನ ಅಮೃತೂರು, ಯಡಿಯೂರು ಸುತ್ತಮುತ್ತಲ ಗ್ರಾಮಗಳ ಸಮೀಪ ಈ ಬಸ್ ಅನ್ನು ಓಡಾಡಿಸಿದ ಕಳ್ಳರು ಮತ್ತೆ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಗ್ರಾಮದತ್ತ ಬಂದಿದ್ದಾರೆ.
ಡೀಸೆಲ್ ಖಾಲಿಯಾದ ಕಾರಣ ಆ ಬಸ್ ಅನ್ನು ಜನ್ನೇನಹಳ್ಳಿ ಗ್ರಾಮದ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗುಬ್ಇ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದೇ ಕಳ್ಳರಿಗೆ ಪ್ಲಸ್ ಪಾಯಿಂಟ್ ಆಗಿದೆ ಎನ್ನಲಾಗಿದೆ.
ನಾಟಿ ಕೋಳಿ ತಿಂದು ವಿಶ್ರಮಿಸುತ್ತಿದ್ದ ಚಿರತೆ ಕೋಳಿಗೂಡಿನಲ್ಲೇ ಸೆರೆಯಾಯ್ತು!
ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ
ಲವ್-ಸೆಕ್ಸ್ ದೋಖಾ: ಎಎಸ್ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್ನೋಟ್