More

    ಶೌರ್ಯ ಜಾಗರಣ ರಥಯಾತ್ರೆಗೆ ಭವ್ಯ ಸ್ವಾಗತ

    ಶಿರಹಟ್ಟಿ: ವಿಶ್ವಹಿಂದು ಪರಿಷತ್ ಶೌರ್ಯ ಜಾಗರಣ ರಥಯಾತ್ರೆ ಶನಿವಾರ ಬೆಳ್ಳಟ್ಟಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ಈ ವೇಳೆ ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ, ವಿಹಿಂಪ ಸಂಚಾಲಕ ವೀರಣ್ಣ ಅಂಗಡಿ ಮಾತನಾಡಿ, 1964ರಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಚಾಲಕ ಮಾಧವರಾವ್ ಗೊಳಲಕರ ಮತ್ತು ಎ.ಎಸ್. ಅಪ್ಟೆಸ್ವಾಮಿ ಅವರು ಚಿನ್ಮಯಾನಂದ ಸ್ವಾಮೀಜಿ ಅವರ ಸಹಯೋಗದಲ್ಲಿ ಅವರ ಆಶ್ರಮದಲ್ಲಿ ವಿಶ್ವ ಹಿಂದು ಪರಿಷತ್ ಸ್ಥಾಪಿಸುವ ಮೂಲಕ ಹಿಂದು ಸಮಾಜ ಸಂಘಟನೆ, ದೇಶದಲ್ಲಿನ ಹಿಂದು ದೇವಾಲಯಗಳ ರಕ್ಷಣೆ, ನವೀಕರಣಕ್ಕೆ ಆದ್ಯತೆ ಹಾಗೂ ಗೋಹತ್ಯೆ ಮತ್ತು ಮತಾಂತರ ತಡೆಗಟ್ಟುವ ಉದ್ದೇಶ ವಿಶ್ವ ಹಿಂದು ಪರಿಷತ್ತಿನದಾಗಿತ್ತು. ನಂತರ ಇದರ ಮತ್ತೊಂದು ಅಂಗವಾಗಿ 1984ರಲ್ಲಿ ಬಜರಂಗದಳ ಘಟಕ ಸ್ಥಾಪಿಸಲಾಯಿತು. ಈ ನಿಟ್ಟಿನಲ್ಲಿ ಅಂದಿನಿಂದ ಇಂದಿನವರೆಗೆ ವಿಹಿಂಪ ಮತ್ತು ಬಜರಂಗ ದಳ ಸಂಘಟನೆ ಹಿಂದು ಧರ್ಮದ ರಕ್ಷಣೆ ಮತ್ತು ಧರ್ಮಕ್ಕೆ ಅನ್ಯಾಯವಾದಾಗ ಸಂಘಟನಾತ್ಮಕ ಹೋರಾಟದ ಮೂಲಕ ಧರ್ಮ ವಿರೋಧಿಗಳಿಗೆ ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದರು.

    ಮುಂದಿನ ದಿನಗಳಲ್ಲಿ ಬೆಳ್ಳಟ್ಟಿಯಲ್ಲಿ ಗ್ರಾಮ ಘಟಕಗಳನ್ನು ಮಾಡುವ ಮೂಲಕ ಹಿಂದು ಜಾಗೃತ ಸಮಾವೇಶ ನಡೆಸಲು ಇಚ್ಛಿಸಲಾಗಿದೆ ಎಂದರು.

    ಪರಶುರಾಮ ಡೊಂಕಬಳ್ಳಿ, ಉಪಾಧ್ಯಕ್ಷ ಬಸವನಗೌಡ ಪಾಟೀಲ, ಪ್ರಕಾಶ ಶಿರಹಟ್ಟಿ, ಯಲ್ಲಪ್ಪ ಇಂಗಳಗಿ, ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ, ಸುನಿಲ ಹೊಳಲದ, ಮಧುಚಂದ್ರ ಮರಡ್ಡಿ, ಅನಂತ ಸತ್ಯಮ್ಮನವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts