More

    ಕಂಪಲಾಪುರದಲ್ಲಿ ವಿಜೃಂಭಣೆಯ ಪೂಜಾ ಮಹೋತ್ಸವ

    ಕಂಪಲಾಪುರ: ಇಲ್ಲಿನ ದೇವಾಂಗ ಸಂಘದ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ 16ನೇ ವರ್ಷದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಬೆಂಗಳೂರಿನ ಪುರೋಹಿತ್ ಪ್ರಕಾಶ್ ಭಟ್ ನೇತೃತ್ವದಲ್ಲಿ ಬುಧವಾರ ಪೂಜಾ ವಿಧಾನಗಳು ನೆರವೇರಿದವು. ಮಹಾಮಂಗಳಾರತಿ ಬಳಿಕ ನಾಗಾ ವಿದ್ಯಾಸಂಸ್ಥೆ ಆವರಣದಲ್ಲಿ ಅನ್ನಸಂತರ್ಪಣೆ ನೆರವೇರಿತು. ಈ ಬಾರಿ ದೇವಿಗೆ ಹೊಸದಾಗಿ ಬೆಳ್ಳಿಯ ಕವಚ ಧಾರಣೆ ಮಾಡಿದ್ದು, ನೋಡುಗರ ಕಣ್ಮನ ಸೆಳೆಯಿತ್ತು.

    ದೇವಾಂಗ ಸಮುದಾಯದವರು ಶ್ವೇತವರ್ಣದ ಉಡುಪು ಧರಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಹೆಂಗಳೆಯರು ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು.

    ಮೈಸೂರಿನ ನಟರಾಜ್ ತಂಡದಿಂದ ಕರಡಿವಾದ್ಯ, ಕಂಪ್ಲಾಪುರದ ಮಹದೇವ್ ತಂಡದ ಮಂಗಳವಾದ್ಯ , ಕೇರಳದ ಚಂಡೆ ಯೊಂದಿಗೆ ಮಡಿಕೇರಿಯ ಪೂಜಾ ಲೈಟಿಂಗ್ಸ್‌ನ ವಿದ್ಯುತ್ ದೀಪಾಲಂಕಾ ಎಲ್ಲರ ಗಮನ ಸೆಳೆಯಿತು. ಭವ್ಯ ಮಂಟಪದಲ್ಲಿ ದೇವಿಯ ಮೂರ್ತಿಯನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಚಂಡೆ ನಾದಕ್ಕೆ ಕುಣಿದು ಕುಪ್ಪಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts