More

    ಕರೊನಾ ಸೋಂಕು ತಡೆಗೆ ಏನು ಮಾಡ್ಬೇಕು? ಗೌರಿಗದ್ದೆಯ ವಿನಯ್ ಗುರೂಜಿ ಕೊಟ್ಟ ಸಲಹೆ ಇಲ್ಲಿದೆ

    ಹಾಸನ: ಕರೊನಾ ಸೋಂಕು ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಮಗಳೂರಿನ ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ, ಜೀವಿ ಸಂಕುಲಕ್ಕೆ ಆಸರೆಯಾಗಿದ್ದ ಕಾಡನ್ನು ಕಡಿದು ಪ್ಲಾಟ್ ಮಾಡಿದ್ರು. ಮಕ್ಕಳಿಗಾಗಿ ಕೋಟ್ಯಂತರ ಕೂಡಿಟ್ಟರು. ಅದರ ಫಲವೇ ಕರೊನಾ ಎಂದು ಹೇಳಿದರು.

    ಚನ್ನರಾಯಪಟ್ಟಣದಲ್ಲಿ ಗುರುವಾರ ಮಾತನಾಡಿದ ವಿನಯ್ ಗುರೂಜಿ, ಕರೋನಾ ಎರಡನೇ ಮತ್ತು ಮೂರನೇ ಅಲೆ ಬಗ್ಗೆ ಈ ಮೊದಲೇ ನಾನು ಹೇಳಿದ್ದೆ. ಮೂರನೇ ಅಲೆ ಬರುವ ಮೊದಲೇ ನಾವು ಎಚ್ಚೆತ್ತು ಕೊಳ್ಳಬೇಕಿದೆ. ಸೊಳ್ಳೆಯನ್ನ ಹೋಗಲಾಡಿಸಲು ಆಗಲ್ಲ. ಆದ್ರೆ ಸೊಳ್ಳೆ ಬಾರದಂತೆ ಪರದೆ ಹಾಕಿಕೊಳ್ಳಬಹುದು ಅದೇ ನಿಜ ಸ್ಥಿತಿ ಎನ್ನುವ ಮೂಲಕ ಕರೊನಾ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅಗ್ನಿಹೋತ್ರ, ಯೋಗ, ‌ರಾಸಾಯನಿಕ ಮುಕ್ತ ಜೀವನ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

    2020ರ ಮೇ ನಲ್ಲೂ ಕರೊನಾ ಕುರಿತು ಮಾತನಾಡಿದ್ದ ವಿನಯ್​ ಗುರೂಜಿ, ನಾವು ಇನ್ನೂ ಎರಡು ವರ್ಷ ಗಾಂಧೀಜಿ ಅವರು ಹೇಳಿದಂತೆ ಸರಳ ಜೀವನ ನಡೆಸಬೇಕು. ಇಲ್ಲದವರಿಗೆ ಇದ್ದವರು ಸಹಾಯ ಮಾಡಬೇಕು. ಪ್ರವಾಸ, ಶಾಪಿಂಗ್ ಎಂದು ವೃಥಾ ಖರ್ಚು ಮಾಡುವ ಬದಲು ಅಗತ್ಯವಿರುವ ಧಾನ್ಯವನ್ನು ಸಂಗ್ರಹಿಸಿಕೊಳ್ಳೋಣ. 10ರಿಂದ 11 ಜತೆ ಬಟ್ಟೆಗಳ ಖರೀದಿ ಮಾಡುವ ಬದಲು 3 ರಿಂದ 4 ಜತೆ ಖರೀದಿಸೋಣ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕುಳಿತುಕೊಳ್ಳಬಾರದು. ನಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮಾಡಬೇಕು ಎಂದಿದ್ದರು.

    ನಮ್ಮ ದೇಶ ಪುಣ್ಯಭೂಮಿ ಹೀಗಾಗಿ ಮೃತ್ಯು ಸಂಖ್ಯೆ ಕಡಿಮೆ. ಸ್ವದೇಶಿ ಆಹಾರ ಮತ್ತು ಹೋಮ ಹವನ ಮಾಡುವುದರಿಂದ ಮಾತ್ರ ನಾವು ಇದರಿಂದ ಬಚಾವ್ ಆಗಲು ಸಾಧ್ಯ. ನೆರೆ ಕಡಿಮೆ ಆಗಲು ರಾಜ್ಯದ ಜನ ಪ್ರಾರ್ಥನೆ ಮಾಡಬೇಕು. ಎರಡರಿಂದಲೂ ರಾಜ್ಯ ಪಾರಾಗುತ್ತದೆ. ದೊಡ್ಡ ಮಟ್ಟದ ಅನಾಹುತದಿಂದ ಪಾರಾಗ್ತೀವಿ ಎಂದು ಕಳೆದ ಆಗಸ್ಟ್​ನಲ್ಲಿಯೇ ಸಲಹೆ ನೀಡಿದ್ದರು.

    ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

    ಬಿಜೆಪಿ ಶಾಸಕ ಪಿ.ರಾಜೀವರ ತಾಯಿ ಕರೊನಾಗೆ ಬಲಿ

    ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ… ಕ್ಷಣಾರ್ಧದಲ್ಲೇ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts