More

    ನೆರೆ ಸಂತ್ರಸ್ತರ ನೆರವಿಗೆ ನಿಲ್ಲದ ಸರ್ಕಾರ

    ರಾಮನಗರ: ರಾಜ್ಯ ಸರ್ಕಾರ ಉಪ ಚುನಾವಣೆಗೆ ನೀಡಿದ ಒತ್ತನ್ನು ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಬಳಲಿದ ಸಂತ್ರಸ್ತರಿಗೆ ನೆರವು ನೀಡಲು ತೋರಲಿಲ್ಲ ಎಂದು ಜೆಡಿಎಸ್ ಯುವ ಮುಖಂಡ, ನಟ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

    ನಗರದಲ್ಲಿ ಶುಕ್ರವಾರ ಖಾಸಗಿ ಮಳಿಗೆ ಉದ್ಘಾಟನೆಗೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯ ಮುಖಂಡರು ಮತ್ತು ಯುವಕರ ನಿರೀಕ್ಷೆಗೂ ಮೀರಿ ಅವರ ಜತೆ ನಿಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ರಾಮನಗರ-ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯ ಕುರಿತು ಕೇಳಿದಾಗ, ಈ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದಷ್ಟೇ ಹೇಳಿದರು. ಶಿರಾ ಮತ್ತು ರಾಜರಾಜೇಶ್ವರಿ ನಗರದ ಚುನಾವಣೆಯಲ್ಲಿ ಜೆಡಿಎಸ್ ರೇಸ್​ನಲ್ಲಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ. ನ.10ರಂದು ಹೊರ ಬೀಳುವ ಫಲಿತಾಂಶ ಜೆಡಿಎಸ್ ಪರವಾಗಿ ಬರುವ ನಿರೀಕ್ಷೆಯಿದೆ ಎಂದರು.

    ಕೃಷಿ ಜ್ಞಾನ ಹೊಂದದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಕೃಷಿ ಪರಿಚಯಿಸಲಾಗದು, ಹಾಗಾಗಿ ಕೃಷಿ ಬಗ್ಗೆ ಆಸಕ್ತಿ ಇದೆ. ಕೇತಿಗಾನಹಳ್ಳಿ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂದರು.

    ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ತಾಲೂಕು ಅಧ್ಯಕ್ಷ ರಾಜಶೇಖರ್, ನಗರ ಜೆಡಿಎಸ್ ಯುವ ಘಟಕದ ಪ್ರಚಾರ ಸಮಿತಿ ಅದ್ಯಕ್ಷ ಉಮೇಶ್, ಗುತ್ತಿಗೆದಾರ ಪ್ರಕಾಶ್, ನಗರಸಭೆ ಮಾಜಿ ಸದಸ್ಯ ಎ.ರವಿ, ಯೆಲ್ಲೋ ಆಂಡ್ ರೆಡ್ ಸಂಸ್ಥೆಯ ಅಮಿತ್​ಶಿವ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts