More

    ಹೆಣ್ಣು ಕರುಣೆ, ಮಮತೆಯ ಕಡಲು

    ಮದ್ದೂರು: ಮಹಿಳೆಯರು ಮೇಲು-ಕೀಳು ಎಂಬ ಭಾವನೆಯನ್ನು ದೂರ ಮಾಡಿ ಅನುಕಂಪ, ಕರುಣೆ, ಮಮತೆಯ ಕಡಲಾಗಿರಬೇಕು ಎಂದು ಪಿಎಂ ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯ ಸಹಾಯಕ ನಿರ್ದೇಶಕಿ ಡಾ.ಮಂಗಳಾ ತಿಳಿಸಿದರು.

    ಪಟ್ಟಣದ ಶ್ರೀ ಮದ್ದೂರಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಛಲ ಇರುತ್ತದೆ. ಹೆಣ್ಣು ಮಕ್ಕಳಾದ ನಮಗೆಲ್ಲರಿಗೂ ಕಾನೂನಿನ ಅರಿವಿನೊಂದಿಗೆ ಸಹೋದರತಾ ಭಾವನೆ ಇರಬೇಕು ಎಂದು ಹೇಳಿದರು.

    ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಅವರು ಜ್ಞಾನವಿಕಾಸ ಕಾರ್ಯಕ್ರಮದ ಮಹತ್ವ, ಕೌಶಲಾಭಿವೃದ್ಧಿ, ಸಂಪ್ರದಾಯಗಳ ಆಚರಣೆ, ವಾತ್ಸಲ್ಯ ಮನೆ, ಮಾಸಾಶನ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.
    ಮನೋರೋಗ ತಜ್ಞ ಮಹಮ್ಮದ್ ಸುಹೇಲ್ ಮಾತನಾಡಿ, ವಿವಿಧ ರೀತಿಯಲ್ಲಿ ಮಾನಸಿಕ ಅಸ್ವಸ್ಥತೆ ಕಂಡು ಬರುವ ಬಗ್ಗೆ ತಿಳಿಸಿಕೊಟ್ಟರು. ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯೆ ಲಕ್ಷ್ಮೀ ಚನ್ನರಾಜು ಅಧ್ಯಕ್ಷತೆ ವಹಿಸಿದ್ದರು.

    ಕೇಂದ್ರದ ಸದಸ್ಯರಿಗೆ ರಂಗೋಲಿ, ಪುಷ್ಪಗುಚ್ಛ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ.ಅರ್.ಯೋಗೀಶ್, ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮೇಗೌಡ, ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಎನ್.ತೇಜಾವತಿ, ವಲಯ ಮೇಲ್ವಿಚಾರಕಿ ಲತಾ, ಜ್ಞಾನವಿಕಾಸ ಸಂಯೋಜಕಿಯರು ಹಾಗೂ ಕೇಂದ್ರದ ಸದಸ್ಯರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts