ಗ್ಯಾಂಗ್‌ಸ್ಟರ್ ಸುರೇಶ್ ಪೂಜಾರಿ ಬಂಧನ: ಛೋಟಾ ರಾಜನ್, ರವಿ ಪೂಜಾರಿ ಬಳಿಕ ತನ್ನದೇ ಹವಾ ಸೃಷ್ಟಿಸಿದ್ದ

ಮಂಗಳೂರು: ಅಂಡರ್‌ವರ್ಲ್ಡ್ ಡಾನ್ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿ ಬಳಿಕ ತನ್ನದೇ ನಟೋರಿಯಸ್ ಗ್ಯಾಂಗ್ ಕಟ್ಟಿಕೊಂಡು ಮುಂಬೈನಲ್ಲಿ ಬಾರ್ ಮಾಲೀಕರಿಂದ, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಕರಾವಳಿ ಮೂಲದ ಗ್ಯಾಂಗ್‌ಸ್ಟರ್ ಸುರೇಶ್ ಪೂಜಾರಿಯನ್ನು ಫಿಲಿಪೀನ್ಸ್​ ಪೊಲೀಸರು ಬಂಧಿಸಿದ್ದಾರೆ.

ಬಾಲಕನಾಗಿದ್ದಾಗಲೇ ಹೋಟೆಲ್ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದ ಸುರೇಶ್, ಕೆಲ ವರ್ಷಗಳ ಬಳಿಕ ಯಾವುದೋ ಕೇಸ್‌ನಲ್ಲಿ ಜೈಲು ಪಾಲಾಗಿದ್ದ. ಈ ವೇಳೆ ರವಿ ಪೂಜಾರಿಯ ಸಂಪರ್ಕಕ್ಕೆ ಬಂದಿದ್ದ. ಬಳಿಕ ಛೋಟಾ ರಾಜನ್ ಜತೆಗೂ ಇದ್ದ. ದಶಕದ ಹಿಂದೆ ಅವರಿಬ್ಬರಿಂದಲೂ ಅಂತರ ಕಾಯ್ದುಕೊಂಡು ತನ್ನದೇ ಗ್ಯಾಂಗ್ ಕಟ್ಟಿಕೊಂಡು ಭೂಗತ ಲೋಕದಲ್ಲಿ ಗುರುತಿಸಿಕೊಂಡಿದ್ದ. ನವೀ ಮುಂಬೈ, ಮುಂಬೈ ಹಾಗೂ ಥಾಣೆಯಲ್ಲಿನ ಬಾರ್ ಮಾಲೀಕರಿಗೆ ಕರೆ ಮಾಡಿ ಹಫ್ತಾಕ್ಕಾಗಿ ಬೆದರಿಕೆ ಹಾಕುತ್ತಿದ್ದ. ಹಣ ಕೊಡದೆ ಇದ್ದರೆ ಕೊಲೆ ಬೆದರಿಕೆ ಹಾಕುತ್ತಿದ್ದ. ತನ್ನ ಸಹಚರರ ಮೂಲಕ ಬಾರ್‌ಗಳಿಗೆ ಶೂಟ್ ಮಾಡಿ ಹೆದರಿಸಿ ಹಣ ಲೂಟಿ ಮಾಡುತ್ತಿದ್ದ. 2015ರಲ್ಲಿ ಕೇಬಲ್ ಆಪರೇಟರ್ ಓರ್ವನನ್ನು ಕೊಲೆ ಮಾಡಿಸಿದ್ದ. 2018ರಲ್ಲಿ ಕಲ್ಯಾಣ್ ಭಿವಂಡಿಯ ಹೋಟೆಲ್‌ಗೆ ಶಾರ್ಪ್ ಶೂಟರ್‌ಗಳ ಮೂಲಕ ಗುಂಡು ಹಾರಿಸಿ ಅಲ್ಲಿದ್ದ ಸ್ವಾಗತಕಾರನನ್ನು ಕೊಲೆ ಮಾಡಿಸಿದ್ದ.

2007ರಲ್ಲಿ ಮುಂಬೈ ಬಿಟ್ಟು ವಿದೇಶಕ್ಕೆ ತೆರಳಿದ್ದ ಸುರೇಶ್ ಪೂಜಾರಿ ಅಲ್ಲಿಂದಲೇ ತನ್ನ ಸಹಚರರ ಮೂಲಕ ಕೆಲಸ ಮಾಡಿಸುತ್ತಿದ್ದ. ಆತನ ಪತ್ತೆಗೆ ಮುಂಬೈ ಪೊಲೀಸರು ಇಂಟರ್‌ಪೋಲ್ ನೋಟಿಸ್ ಜಾರಿ ಮಾಡಿದ್ದರು. ಮಲೇಷ್ಯಾ, ಕೆನಡಾ, ಫಿಲಿಪೀನ್ಸ್​​, ದುಬೈ ಮೊದಲಾದ ಕಡೆ ತನ್ನ ವಾಸ ಬದಲಾಯಿಸುತ್ತಿದ್ದ. 2020ರ ಸೆಪ್ಟೆಂಬರ್‌ನಿಂದ ಫಿಲಿಪೀನ್ಸ್​​ನಲ್ಲಿಯೇ ನೆಲೆಸಿದ್ದ.

ರವಿ ಪೂಜಾರಿ ಸೆನೆಗಲ್‌ನಲ್ಲಿ ಬಂಧಿತನಾಗಿ ಬೆಂಗಳೂರಿಗೆ ಹಸ್ತಾಂತರವಾದ ಬಳಿಕ ಮುಂಬೈಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸುರೇಶ್ ಪೂಜಾರಿ ಹವಣಿಸಿದ್ದು, ಈ ಅವಧಿಯಲ್ಲೇ ಬಂಧನವಾಗಿದ್ದಾನೆ. ಶೀಘ್ರದಲ್ಲೇ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲ ಉಡುಪಿ: ಸುರೇಶ್ ಪೂಜಾರಿ ಬೇರೆ ದೇಶಗಳಿಗೆ ಹೋದಾಗಲೆಲ್ಲ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು, ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿ ಪ್ರಯಾಣಿಸುತ್ತಿದ್ದ. ಸುಮಾರು 8 ಪಾಸ್‌ಪೋರ್ಟ್‌ಗಳಿದ್ದು, ಸುರೇಶ್ ಪೂಜಾರಿ, ಸುರೇಶ್ ಪುರಿ, ಸತೀಶ್ ಪೈ, ಶೇಖರ್ ಪೈ ಮೊದಲಾದ ಹೆಸರುಗಳಿವೆ. ಈತನ ಮೂಲ ಉಡುಪಿ ಜಿಲ್ಲೆಯ ಮಲ್ಪೆ. ತಂದೆ ಬಸಪ್ಪ ಘಾಟ್‌ಕೊಪ್ಪರ್‌ನ ಅಸಲ್ಫಾ ಎಂಬಲ್ಲಿ ದೇವಸ್ಥಾನದ ಪೂಜಾರಿಯಾಗಿದ್ದು, ಪುತ್ರನ ಜತೆ ಯಾವುದೇ ಸಂಬಂಧ ಹೊಂದಿಲ್ಲ. ಸುರೇಶ್‌ನ ಸಹೋದರಿ ಮದುವೆಯಾಗಿ ಥಾಣೆಯಲ್ಲಿ ನೆಲೆಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಅಪರಾಧ ಕೃತ್ಯಗಳನ್ನು ಎಸಗಿರುವ ಮಾಹಿತಿ ಇಲ್ಲ. ಆದರೆ ಬೆಂಗಳೂರಿನಲ್ಲಿ ಕೆಲವು ಪ್ರಕರಣಗಳಿವೆ.

ಪ್ರೇಯಸಿ ಹೆಸರಲ್ಲಿ ಕೊಡಗು ಎಸ್​ಪಿಗೆ ಪತ್ರ ಬರೆದು ಮಧ್ಯಪ್ರದೇಶದಲ್ಲಿ ಪೊನ್ನಂಪೇಟೆ ಮೂಲದ ಯುವಕ ಆತ್ಮಹತ್ಯೆ!

ಸಖತ್ ವೈರಲ್​ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

ಥೂ, ಇವನೆಂಥಾ ಕಾಮುಕ? ಸ್ಕ್ಯಾನಿಂಗ್ ಸೆಂಟರ್​ನ ಶೌಚಗೃಹದಲ್ಲಿ ಹೀಗಾ ಮಾಡೋದು?

ಬಬಲೇಶ್ವರದಲ್ಲಿ ಭೀಕರ ಅಪಘಾತ: ಶಿಕ್ಷಕ ಸೇರಿ ನಾಲ್ವರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…