More

    ಫರ್ನೀಚರ್ ಎಕ್ಸ್‌ಪೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: ಒಂದೇ ಸೂರಿನಡಿ ಪೀಠೋಪಕರಣಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಸಂತಸ

    ಬೆಂಗಳೂರು: ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಆಯೋಜಿಸಿರುವ ‘ಪೀಠೋಪಕರಣ ಮತ್ತು ಮನೆ ಒಳಾಂಗಣ ವಿನ್ಯಾಸ ಮೇಳ-2022’ಕ್ಕೆ ಮೊದಲ ದಿನವೇ ಭರ್ಜರಿ ಸ್ಪಂದನೆ ವ್ಯಕ್ತ‌ವಾಗಿದೆ.

    ವಿಜಯವಾಣಿ ಮತ್ತು ದಿಗ್ವಿಜಯ 24/7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಏರ್ಪಡಿಸಿರುವ 4 ದಿನಗಳ ಮೇಳಕ್ಕೆ ಶುಕ್ರವಾರ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಚಾಲನೆ ನೀಡಿದರು.

    ಫರ್ನೀಚರ್ ಎಕ್ಸ್‌ಪೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: ಒಂದೇ ಸೂರಿನಡಿ ಪೀಠೋಪಕರಣಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಸಂತಸ

    ಒಂದೇ ಸೂರಿನಡಿ ವಿವಿಧ ಮಾದರಿಯ ಐಷಾರಾಮಿ ಸೋಫಾ ಡೈನಿಂಗ್ ಟೇಬಲ್ ಸೆಟ್, ಉದ್ಯಾನ ಪೀಠೋಪಕರಣ, ಇಟಾಲಿಯನ್ ವಿನ್ಯಾಸದ ಸೋಫಾಗಳು, ಕಚೇರಿ ಪೀಠೋಪಕರಣ, ಕಾರ್ಪೆಟ್, ಬೆಡ್‌ರೂಮ್ ಸೆಟ್‌ಗಳು, ವಾಲ್ ಪ್ರೇಮ್‌ಗಳು, ಟೀಕ್‌ವುಡ್ ಪೀಠೋಪಕರಣಗಳ ಬೃಹತ್ ಸಂಗ್ರಹ ಇಲ್ಲಿ ಲಭ್ಯವಿರುವುದು ವಿಶೇಷ. 15 ಸಾವಿರ ರೂ.ನಿಂದ 6 ಲಕ್ಷ ರೂ. ವರೆಗಿನ ಪೀಠೋಪಕರಣಗಳು ಇಲ್ಲಿದ್ದು, ಗ್ರಾಹಕರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

    ಫರ್ನೀಚರ್ ಎಕ್ಸ್‌ಪೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: ಒಂದೇ ಸೂರಿನಡಿ ಪೀಠೋಪಕರಣಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಸಂತಸ

    ನಿರೀಕ್ಷೆಗೂ ಮೀರಿದ ಸ್ಪಂದನೆ: ಶುಕ್ರವಾರ ಬೆಳಗ್ಗೆಯಿಂದಲೇ ಸಾವಿರಾರು ಗ್ರಾಹಕರು ಎಕ್ಸ್‌ಪೋದಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದು, ಅನೇಕರು ಕುಟುಂಬಸ್ಥರೊಂದಿಗೆ ಆಗಮಿಸಿ ಪೀಠೋಪಕರಣಗಳನ್ನು ಸ್ಥಳದಲ್ಲಿಯೇ ಖರೀದಿಸಿದರು. ಶುಕ್ರವಾರ ಒಂದೇ ದಿನ ಎಕ್ಸ್‌ಪೋದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ವಿವಿಧ ಉತ್ಪನ್ನಗಳನ್ನು ಬುಕ್ ಮಾಡಿದರು. ಹೊಸ ಮಾದರಿಯ ಕೈಗೆಟುಕುವ ದರದಲ್ಲಿದ್ದ ಸೋಫಾ, ಡೈನಿಂಗ್ ಟೇಬಲ್, ಬೆಡ್, ಮರದ ಕೆತ್ತನೆಯ ಉಯ್ಯಾಲೆ ಖರೀದಿಗೂ ಉತ್ಸಾಹ ತೋರಿದರು. ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವುದರಿಂದ ಪೀಠೋಪಕರಣ ಸಂಸ್ಥೆಯ ಮಾಲೀಕರೂ ಸಂತಸದಲ್ಲಿದ್ದರು. ಮಾರಾಟ ಪ್ರತಿನಿಧಿಗಳು, ಕಂಪನಿ ಮುಖ್ಯಸ್ಥರು ಗ್ರಾಹಕರಿಗೆ ಸೂಕ್ತ ಮಾಹಿತಿ ಒದಗಿಸಿದರು.

    ಫರ್ನೀಚರ್ ಎಕ್ಸ್‌ಪೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: ಒಂದೇ ಸೂರಿನಡಿ ಪೀಠೋಪಕರಣಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಸಂತಸ
    ಫರ್ನೀಚರ್ ಎಕ್ಸ್‌ಪೋಗೆ ಜ್ಯೋತಿ ಬೆಳಗುವ ಮೂಲಕ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಚಾಲನೆ ನೀಡಿದರು. ವಿಆರ್​ಲ್​ ಸಮೂಹ ಸಂಸ್ಥೆಯ ಎಂಡಿ ಡಾ. ಆನಂದ ಸಂಕೇಶ್ವರ ಅವರ ಪತ್ನಿ ವಾಣಿ ಸಂಕೇಶ್ವರ ಉಪಸ್ಥಿತರಿದ್ದರು.

    ಸ್ಕೋಡಾ‌ ಕಾರುಗಳು: ಸೆಂಟ್‌ಮಾಕ್ಸ್೯ ರಸ್ತೆಯ ಟೆಫೆ ಆಕ್ಸಸ್‌ ಸ್ಕೋಡಾ ಡೀಲರ್ ಶಿ‌ಪ್, ವರುಣಾ ಮೋಟಾರ್ಸ್​ ಸಂಸ್ಥೆಯು ತನ್ನ ಶೋರೂಂನ ನೂತನ ಕಾರುಗಳನ್ನು ಪ್ರದರ್ಶನಕ್ಕಿ‌ಟ್ಟಿರುವುದು ಗ್ರಾಹಕರ ಮನ ಸಳೆಯುತ್ತಿದೆ.

    ಫರ್ನೀಚರ್ ಎಕ್ಸ್‌ಪೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: ಒಂದೇ ಸೂರಿನಡಿ ಪೀಠೋಪಕರಣಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಸಂತಸ

    ವಿಜಯವಾಣಿ, ದಿಗ್ವಿಜಯ ನ್ಯೂಸ್ ಪ್ರಯತ್ನಕ್ಕೆ ಮೆಚ್ಚುಗೆ: ಕೈ ಕೆತ್ತನೆಯಲ್ಲಿ ಮೂಡಿಬಂದ ಆಧುನಿಕ ಶೈಲಿಯ ಪೀಠೋಪಕರಣಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೃತಕ ಹೂಗಳು, ಡೆಕೋರೇಟಿವ್ ವಸ್ತುಗಳು, ತಿನಿಸುಗಳು, ಮಕ್ಕಳ ಆಟಿಕೆ, ಮಹಿಳೆಯರ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಲಭ್ಯವಿವೆ. ಎಕ್ಸ್‌ಪೋ ಮೂಲಕ ಎಲ್ಲ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಪೀಠೋಪಕರಣ, ಎಲೆಕ್ಟ್ರಿಕ್ ಉತ್ಪನ್ನಗಳನ್ನು ಒದಗಿಸಲು ಮುಂದಾಗಿರುವ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಪ್ರಯತ್ನಕ್ಕೆ ಗ್ರಾಹಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

    ಫರ್ನೀಚರ್ ಎಕ್ಸ್‌ಪೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ: ಒಂದೇ ಸೂರಿನಡಿ ಪೀಠೋಪಕರಣಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಸಂತಸ
    ಫರ್ನೀಚರ್ ಎಕ್ಸ್‌ಪೋದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ, ವಿಆರ್​ಲ್​ ಸಮೂಹ ಸಂಸ್ಥೆಯ ಎಂಡಿ ಡಾ. ಆನಂದ ಸಂಕೇಶ್ವರ ಅವರ ಪತ್ನಿ ವಾಣಿ ಸಂಕೇಶ್ವರ, ನಟಿ ರೂಪಿಕಾ.

    ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಹೊಸ ಯುವಶಕ್ತಿ ಉದಯ: ಸಿಎಂ ಬೊಮ್ಮಾಯಿ‌

    ಕೊಪ್ಪಳದಲ್ಲಿ ಹೃದಯವಿದ್ರಾವಕ ಘಟನೆ: ಬಟ್ಟೆ ಒಣ ಹಾಕುವಾಗ ತಾಯಿ-ಇಬ್ಬರು ಮಕ್ಕಳ ಪ್ರಾಣ ಹೊತ್ತೊಯ್ದ ಜವರಾಯ

    ಮೈಸೂರಲ್ಲಿ ‘ಕವಲಂದೆ ಮಿನಿ ಪಾಕಿಸ್ತಾನ’ ಎಂದು ಘೋಷಣೆ ಕೂಗಿದ್ದ ಆರೋಪಿಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts