More

    ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್​ಐಆರ್​

    ಮಂಡ್ಯ: ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಡ್ಯದ ಮಹಿಳಾ ಕಾಲೇಜು, ವೈದ್ಯಕೀಯ ಕಾಲೇಜಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಇದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಮುಕ್ತವಾಗಿ ತನಿಖೆ ನಡೆಸಲು ನಮಗೆ ಅಧಿಕಾರವಿಲ್ಲ, ನ್ಯಾಯಾಲಯದಿಂದ ಆದೇಶ ತಂದರೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದರು.

    ಸರ್ಕಾರಿ ಕಾಲೇಜುಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ನಡೆಸಿರುವ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸುವಂತೆ ಚುನಾವಣಾ ಆಧಿಕಾರಿಯು 2ನೇ ACJ ಮತ್ತು JMFC ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಎಫ್​ಐಆರ್​ ದಾಖಲಿಸಿ, ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆ ಪೂರ್ವ ಠಾಣೆ ಅಪರಾಧ ವಿಭಾಗದ ಪಿಎಸ್​ಐ ಕೆ.ಎನ್. ಕೇಶವಮೂರ್ತಿ ಅವರು ಅಶ್ವತ್ಥ್ ನಾರಾಯಣ್ ಮತ್ತು ಮೈ.ವಿ.ರವಿಶಂಕರ್ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

    ಕೆಜಿಎಫ್​ ಬಾಬು ಮನೆ ಮೇಲೆ IT ದಾಳಿ: ನಾಮಪತ್ರದಲ್ಲಿನ ಮಾಹಿತಿ ನೋಡಿ ಐಟಿ ಕಣ್ಣು ಬಿತ್ತಾ? ಬಾಬು ಮುಂದೆ ಡಿಕೆಶಿ, ಎಂಟಿಬಿ ಆಸ್ತಿಯೂ ಕಮ್ಮಿ

    ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ… ಏಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts