More

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೂ ಕಳವಳ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ಬೆಂಗಳೂರು: ಯೂಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಅನೇಕ ಪರಿಣಾಮಗಳನ್ನು ಬೀರಿದ್ದು, ಈ ಪೈಕಿ‌ ಕಚ್ಚಾ ತೈಲ ಬೆಲೆ‌ ಹೆಚ್ಚಳವೂ ಸೇರಿದೆ. ಇದರಿಂದ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರಕ್ಕೂ ಕಳವಳ ಉಂಟು ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

    ಖಾಸಗಿ ಹೋಟೆ ವೊಂದರಲ್ಲಿ ಮಂಗಳವಾರ ಆಯೋಜಿಸಿದ್ದ ‘ಆತ್ಮನಿರ್ಭರ್ ಭಾರತ ಅರ್ಥ ವ್ಯವಸ್ಥೆ’ ಕುರಿತು ಸಂವಾದದಲ್ಲಿ ಉತ್ತರಿಸಿದ ಸಚಿವೆ, ಜಾಗತಿಕಮಟ್ಟದಲ್ಲಿ ಕಚ್ಚಾತೈಲ ಹೆಚ್ಚಳದ ಮೇಲೆ ತೀವ್ರ ನಿಗಾವಹಿಸಿದ್ದು, ಅದರ ಪರಿಣಾಮಗಳ ತೀವ್ರತೆ ತಗ್ಗಿಸುವ ಮಾರ್ಗೋಪಾಯಗಳ ಶೋಧ ಕಾರ್ಯದಲ್ಲಿದೆ. ಭಾರತ ಶೇ.85ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಆಮದು ಅವಲಂಬಿಸಿದ್ದು, ಬೆಲೆ ಏರಿಕೆ ಬಿಸಿ ತಣಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ ಎನ್ನುವ ಮೂಲಕ ಡೀಸೆಲ್‌, ಪೆಟ್ರೋಲ್ ಬೆಲೆ ಏರಿಕೆ ಸುಳಿವು ನೀಡಿದರು.

    ತೈಲ ಕಂಪನಿಗಳು ಪ್ರತಿ 15 ದಿನಗಳ ಸರಾಸರಿ ಬೆಲೆ ಪರಿಗಣಿಸಿ ಪೆಟ್ರೋಲ್, ಡೀಸೆಲ್‌ ಬೆಲೆ‌ ನಿಗದಿಪಡಿಸುತ್ತವೆ. ಬಿಕ್ಕಟ್ಟಿನ ಪರಿಣಾಮಗಳನ್ನು ಅವಲೋಕಿಸುತ್ತಿದೆ. ಕಚ್ಚಾ ತೈಲ ಆಮದು ಪ್ರಮಾಣ ತಗ್ಗಿಸುವುದಕ್ಕೆ ಪರ್ಯಾಯ ಇಂಧನ ಮೂಲಗಳ ಅಗತ್ಯವಿದ್ದು, ಇದಕ್ಕಾಗಿ ಬಜೆಟ್​ನಲ್ಲಿ ಅನುದಾನ ಕಾದಿರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಜಿಎಸ್​ಟಿ ವ್ಯಾಪ್ತಿಯಲ್ಲಿ ಡೀಸೆಲ್‌, ಪೆಟ್ರೋಲ್ ಸೇರಿರುವ ಕಾರಣ‌ ಹೊಸದಾಗಿ ಸೇರಿಸುವ ಪ್ರಶ್ನೆಯೇ ಉದ್ಭವಿಸದು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

    ತಡರಾತ್ರಿ ಘೋರ ದುರಂತ: 8 ತಿಂಗಳ ಮಗು ಸೇರಿ ಐವರು ಮಲಗಿದ್ದಲ್ಲೇ ಸಜೀವ ದಹನ

    ಬೆಕ್ಕು ಕಚ್ಚಿ ಮಹಿಳೆಯರಿಬ್ಬರು ಸಾವು! ಮೃತರಲ್ಲಿ ಒಬ್ಬಾಕೆ ವೈದ್ಯನ ಪತ್ನಿ… ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

    ನಾವು ಲವ್​ ಮಾಡಿದ್ದೇ ತಪ್ಪಾ? ಚಿತ್ರಹಿಂಸೆ ಕೊಡ್ತಿದ್ದಾರೆ.. ಪ್ಲೀಸ್​ ನಮ್ಮನ್ನು ಕಾಪಾಡಿ.. ಬೆಂಗಳೂರಲ್ಲಿ ಸಚಿವರ ಪುತ್ರಿ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts