More

    ನಾನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ತಿದ್ದೆ… ಕೋಡಿಹಳ್ಳಿ ವಿರುದ್ಧ ರೈತ ಸಂಘದ ನೂತನ ಅಧ್ಯಕ್ಷ ಆಕ್ರೋಶ

    ಶಿವಮೊಗ್ಗ: ಕೋಡಿಹಳ್ಳಿ ಚಂದ್ರಶೇಖರ್​ ಅವರಂತೆ ನನ್ನ ಮೇಲೆ ಆರೋಪ ಬಂದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ರೈತ ಸಂಘದ ನೂತನ ಅಧ್ಯಕ್ಷ ಎಚ್​.ಆರ್​. ಬಸವರಾಜಪ್ಪ ಆಕ್ರೋಶ ಹೊರಹಾಕಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಮಂಗಳವಾರ ಶಿವಮೊಗ್ಗದ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ರಾಜ್ಯ ಸಮಿತಿ ಸಭೆ ಏರ್ಪಡಿಸಲಾಗಿತ್ತು.ಸಭೆಗೆ ಆಹ್ವಾನವಿದ್ದರೂ ಕೋಡಿಹಳ್ಳಿ ಚಂದ್ರಶೇಖರ್​ ಗೈರಾಗಿದ್ದರು. ಕೋಡಿಹಳ್ಳಿ ವರ್ತನೆಗೆ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ರೈತ ಸಂಘದ ಅಧ್ಯಕ್ಷ ಸ್ಥಾನದಿಂದಲೇ ಕೋಡಿಹಳ್ಳಿಯನ್ನ ವಜಾ ಮಾಡಿ, ಬಸವರಾಜಪ್ಪ ಅವರನ್ನು ರೈತ ಸಂಘದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಬಸವರಾಜಪ್ಪ, ಕೋಡಿಹಳ್ಳಿ ಹೆಸರಿನಲ್ಲಿ ಸಿಎಂಎನ್​ ಎಂಬ ಕಂಪನಿ ನೋಂದಣಿಯಾಗಿದೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅವರು ರೈತ ಸಂಘಕ್ಕೆ ರಾಜೀನಾಮೆ ನೀಡಿ ರಿಯಲ್​ ಎಸ್ಟೇಟ್​ ವ್ಯವಹಾರ ಮಾಡಬೇಕಿತ್ತು. ಸಾಲ ಮನ್ನಾ ವಿಷಯದಲ್ಲೂ ರೈತರಿಂದ ಸಂಗ್ರಹ ಮಾಡಿದ ಹಣ ಕೋಟಿ ರೂ. ಲೆಕ್ಕದಲ್ಲಿದೆ. ಇದೆಲ್ಲವೂ ರೈತ ಸಂಘಟನೆಗೆ ಕಪ್ಪುಚುಕ್ಕೆ ಎಂದು ಆಕ್ರೋಶ ಹೊರಹಾಕಿದರು.

    ಬ್ಯಾನರ್​ನಲ್ಲಿ ಫೋಟೋ ಇರಲ್ಲ: ಸತ್ಯಶೋಧನಾ ಸಮಿತಿಯ ತನಿಖೆಯಲ್ಲಿ ಆರೋಪ ಸಾಬೀತಾದರೆ ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನ ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಲಾಗುತ್ತೆ. ಇಷ್ಟು ದಿನ ರೈತ ಸಂಘದ ಎಲ್ಲ ಹೋರಾಟಗಳ ಬ್ಯಾನರ್​ಗಳಲ್ಲೂ ಕೋಡಿಹಳ್ಳಿ ಅವರ ಭಾವಚಿತ್ರ ಮಾತ್ರ ಇರುತ್ತಿತ್ತು. ಇನ್ಮುಂದೆ ಸಂಘದ ಬ್ಯಾನರ್​ಗಳಲ್ಲಿ, ಕರಪತ್ರಗಳಲ್ಲಿ ರೈತ ಸಂಘದ ಸಂಸ್ಥಾಪಕರಾದ ಎಚ್​.ಎಸ್​.ರುದ್ರಪ್ಪ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್​.ಡಿ.ಸುಂದರೇಶ್​ ಅವರ ಫೋಟೋಗಳು ಮಾತ್ರ ಇರಲಿವೆ ಎಂದು ಬಸವರಾಜಪ್ಪ ಘೋಷಿಸಿದರು.

    ನನ್ನನ್ನು ಎಲ್ಲರೂ ಸರ್ವಾನುಮತದಿಂದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ನನಗಿಂತ ಸಮರ್ಥರು ಮುಂದೆ ಬಂದರೆ ಅಧ್ಯಕ್ಷ ಸ್ಥಾನ ತ್ಯಜಿಸಲು ನಾನು ಸಿದ್ದನಿದ್ದೇನೆ. ನಾನೆಂದೂ ಪದವಿಗೆ ಅಂಟಿಕೊಂಡು ಕೂರುವುದಿಲ್ಲ. ಬ್ಯಾನರ್​ ಹಾಗೂ ಕರಪತ್ರಗಳಲ್ಲಿ ನಮ್ಮ ಫೋಟೋ ಕೂಡ ಪ್ರಕಟವಾಗುವುದಿಲ್ಲ ಎಂದು ತಿಳಿಸಿದರು.

    ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ವಜಾ: ಸತ್ಯಶೋಧನಾ ಸಮಿತಿ ರಚನೆ, ಪ್ರಾಥಮಿಕ ಸದಸ್ಯತ್ವಕ್ಕೂ ಕುತ್ತು

    ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ BMW ಕಾರು ಪತ್ತೆ! ರಾತ್ರಿ ನಾನೇ ನೀರಲ್ಲಿ ಮುಳುಗಿಸಿದೆ ಎಂದ ಮಾಲೀಕ… ಏಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts