More

    ದೂರು ಸ್ವೀಕರಿಸದ ಪೊಲೀಸರು; ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಕುಟುಂಬ..!

    ಮಂಡ್ಯ: ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿಪಡಿಸಿ, ದೌರ್ಜನ್ಯ ಮಾಡಿದ್ದರೂ ಸಹ ಕೆರಗೋಡು ಠಾಣೆಯ ಪೊಲೀಸರ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ತಾಲೂಕಿನ ಡಣಾಯಕನಪುರ ಒಂದೇ ಕುಟುಂಬದ ಮೂವರು ಗುರುವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

    ಗ್ರಾಮದ ರವಿಕುಮಾರ್, ಇವರ ತಾಯಿ ಪಾರ್ವತಮ್ಮ ಹಾಗೂ ನಂದಿನಿ ಮಾಡುತ್ತಿದ್ದಾರೆ. ತಮ್ಮ ಜಮೀನಿಗೆ ನೀರು ಸರಬರಾಜು ಮಾಡಲು ವಿದ್ಯುತ್ ಸಂಪರ್ಕ ಅನಿವಾರ್ಯವಾಗಿದ್ದು, ಸೆಸ್ಕಾಂಗೆ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಈವರೆಗೆ ವಿದ್ಯುತ್ ಕಂಬ ಅಳವಡಿಕೆಗೆ ದಾಯಾದಿ ಸಂಬಂಧಿಗಳು ಅಡ್ಡಿಪಡಿಸುತ್ತಿದ್ದಾರೆ.

    ಇದನ್ನೂ ಓದಿರಿ: ಯಾರ ಜತೆ ಯಶ್ ಮುಂದಿನ ಸಿನಿಮಾ?

    ಗುರುವಾರ ಬೆಳಗ್ಗೆ ಸೆಸ್ಕಾಂ ಇಂಜಿನಿಯರ್ ಸಂತೋಷ್ ತಮ್ಮ ಸಿಬ್ಬಂದಿ ಜತೆ ವಿದ್ಯುತ್ ಕಂಬ ಅಳವಡಿಕೆಗಾಗಿ ಜಮೀನಿನ ಬಳಿ ಬಂದಿದ್ದಾಗ, ಚಿಕ್ಕಪ್ಪನ ಮಕ್ಕಳಾದ ಶಿವಲಿಂಗ. ಶಿವಕುಮಾರ್ ಅಡ್ಡಿಪಡಿಸಿ ಗಲಾಟೆ ಮಾಡಿದ್ದಾರೆ. ಇದೇ ವೇಳೆ ನಂದಿನಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಹಾಗೂ ಎರಡು ಮೊಬೈಲ್ ಗಳನ್ನು ಕಸಿದು ಹೋಗಿದ್ದಾರೆಂದು ಆರೋಪಿಸಿದ್ದಾರೆ.

    ಈ ಸಂಬಂಧ ಕೆರೆಗೋಡುಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲು ಹೋದಾಗ, ಇಲ್ಲಸಲ್ಲದ ಸಬೂಬು ಹೇಳಿ ದಿನವಿಡೀ ದೂರು ದಾಖಲಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

    ಸ್ಟೇಟಸ್ ಲವಿಂಗ್ ಆ್ಯಂಡ್ ಕಂಫರ್ಟ್ ಲವಿಂಗ್‌ನಿಂದ ಸಂಘದ ಕಾರ್ಯಕ್ಕೆ ತೊಡಕು: ಮೋಹನ್ ಭಾಗವತ್

    VIDEO: ಓವರ್‌ಗೆ ಆರು ಸಿಕ್ಸರ್; ಯುವರಾಜ್, ಗಿಬ್ಸ್ ಜತೆ ಸಿಕ್ಸರ್ ಕ್ಲಬ್ ಸೇರಿದ ಕೈರಾನ್ ಪೊಲ್ಲಾರ್ಡ್,

    ಹಾಸ್ಟೆಲ್​ ಶೌಚಗೃಹದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು: ಸ್ಥಳದಲ್ಲಿ ಡೆತ್​ನೋಟ್​ ಪತ್ತೆ ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts