More

    ನಾನು ದೇವೇಗೌಡರ ಸಾವು ಬಯಸುವನಲ್ಲ.. ಖುದ್ದು ಅವರ ಬಳಿ ಕ್ಷಮೆಯಾಚಿಸುವೆ: ಕೆ.ಎನ್​.ರಾಜಣ್ಣ

    ತುಮಕೂರು: ನಾನು ದೇವೇಗೌಡರ ಸಾವು ಬಯಸುವನಲ್ಲ. ಆ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಖುದ್ದು ದೇವೇಗೌಡರನ್ನು ಭೇಟಿಯಾಗಿ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.

    ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಕೆ.ಎನ್​.ರಾಜಣ್ಣ ಮಾತನಾಡುತ್ತಾ, ‘ದೇವೇಗೌಡರು ಇಬ್ಬರ ಮೇಲೆ ಹಾಕ್ಕೊಂಡು ಹೋಗ್ತಾವ್ರೇ..(ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹೇಳಿದ ಮಾತು) ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು…’ ಎಂದಿದ್ದರು. ರಾಜಣ್ಣರ ಮಾತಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ಎಚ್​.ಡಿ.ಕುಮಾರಸ್ವಾಮಿ ಕೂಡ ಆಕ್ರೋಶ ಹೊರಹಾಕಿದ್ದರು. ‘ದೇವರಿಗೂ ಹೆಗಲು ಕೊಡ್ತಾರೆ. ನೀನೇನು ಬ್ರಹ್ಮ ಅಲ್ಲಪ್ಪ, ಆ ದೇವರು ನಮ್ಮ ತಂದೆಗೆ 100 ವರ್ಷ ಆಯುಸ್ಸು ಕೊಡ್ತಾರೆ. ಹುಷಾರ್, ಅವರ ಮಗ ನಾನಿನ್ನೂ ಬದುಕಿದ್ದೇನೆ. ಮಧುಗಿರಿಯಲ್ಲಿ ಬಂದು ತೋರಿಸುತ್ತೇನೆ. ಮಧುಗಿರಿಯ ಜನರಿಂದ ನಿನಗೆ ಉತ್ತರ ಕೊಡಿಸುತ್ತೇನೆ’ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ರಾಜಣ್ಣ, ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿದ್ದವರು, ವಯಸ್ಸಲ್ಲಿ ಹಿರಿಯರು. ಅವರ ಸೋಲಿನ ಕುರಿತಾಗಿ ನಮಗೆ ಬೇಸರ ಇದೆ. ನನ್ನ ಮಾತಿಂದ ಅವರ ಕುಟುಂಬಸ್ಥರಿಗೆ ಬೇಸರ ಆಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದರು.

    2004ರ ಚುನಾವಣೆಯಲ್ಲಿ ನಾನು ಜೆಡಿಎಸ್​ನಿಂದ ಸ್ಪರ್ಧಿಸಿದ್ದಾಗ ದೊಡ್ಡೇರಿ ಹೋಬಳಿ ಜನರು 5,500 ಮತಗಳ ಬಹುಮತ ನೀಡಿದ್ರು. ಇನ್ನೊಂದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸ್ತೇನೆ. ಈ ಬಾರಿಯೂ ನನಗೆ ಬಹುಮತ ನೀಡಿ ಗೆಲ್ಲಿಸಬೇಕು ಎಂದು ನಾನು ಹೇಳಿದೆ. ಈ ವೇಳೆ ಈ ವೇಳೆ ಮುಂದೆ ಕುಳಿತಿದ್ದ ಒಬ್ಬರು, ‘ಬಿಡಿ ಸ್ವಾಮಿ ದೇವೇಗೌಡರು ಈಗಲೂ ಚುನಾವಣೆ ಮಾಡ್ತಾರೆ’ ಎಂದರು. ಅದಕ್ಕೆ ನಾನು ಅವರು ಇಬ್ಬರ ಮೇಲೆ‌ ಕೈ ಹಾಕಿ ಓಡಾಡ್ತಾರೆ, ಬಿಡಿ ಅವರ ಬಗ್ಗೆ ಯಾಕೆ ಅಂದೆ… ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಮುಂದೆ-ಹಿಂದೆ ಮಾತಾಡಿದ್ದು ಬಿಟ್ಟು ಕೇವಲ ಒಂದು ನಿಮಿಷದ ವಿಡಿಯೋ ಈ ಅರ್ಥ ಕಲ್ಪಸಿದೆ. ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿದ್ದವರು, ವಯಸ್ಸಲ್ಲಿ ಹಿರಿಯರು. ಅವರ ಸೋಲಿನ ಕುರಿತಾಗಿ ನಮಗೆ ಬೇಸರ ಇದೆ. ನನ್ನ ಮಾತಿಂದ ಅವರ ಕುಟುಂಬಸ್ಥರಿಗೆ ಬೇಸರ ಆಗಿದ್ರೆ ವಿಷಾದಿಸುವೆ. ನಾನೇ ಖುದ್ದಾಗಿ ದೇವೇಗೌಡರನ್ನ ಭೇಟಿ ಮಾಡಿ ವಿಚಾರವನ್ನ ಅರ್ಥೈಸುವೆ. ಕ್ಷಮೆಯಾಚಿಸುವೆ. ಈ ಬಳಿಕವೂ ಜೆಡಿಎಸ್ ಪ್ರತಿಭಟನೆ ಮಾಡಿದರೆ ಮಾಡಲಿ. ದೇಶಕ್ಕೆ ದೇವೇಗೌಡರ ಕೊಡುಗೆಗಳನ್ನ ಸ್ಮರಿಸುತ್ತೇನೆ ಎಂದು ರಾಜಣ್ಣ ಹೇಳಿದರು.

    ನನಗೆ 50 ವರ್ಷದಿಂದ ಪ್ರಾಣ ಬೆದರಿಕೆ ಇದೆ. ಆದರೂ ನಾನು ವಿಚಲಿತ ಆಗಲ್ಲ. ತುಮಕೂರಿನಲ್ಲಿ ಜೆಡಿಎಸ್ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ಯಾಕೆಂದರೆ ನನ್ನ ಕ್ಷೇತ್ರದಲ್ಲಿ ಜೆಡಿಎಸ್​ಗೆ ನಾನು ಎದುರಾಳಿ. ದೇವೇಗೌಡರು ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದಾರೆ. ಆ ನಿಯತ್ತು ನನಗೆ ಇದೆ. ಸಿದ್ದರಾಮಯ್ಯರದ್ದೂ ಕೊನೇ ಚುನಾವಣೆ ಎಂದು ಅಂದುಕೊಂಡಿದ್ದೇನೆ. ಅವರ ಸಾವನ್ನು ನಾನು ಬಯಸುವನಲ್ಲ. ದೇಶ ಮತ್ತು ರಾಜ್ಯಕ್ಕೆ ದೇವೇಗೌಡರ ಕೊಡುಗೆಯನ್ನ ನಾವು ಮರೆಯುವಂತಿಲ್ಲ ಎಂದು ರಾಜಣ್ಣ ಹೇಳಿದರು.

    ಹುಷಾರ್​ ನಾನಿನ್ನೂ ಬದುಕಿದ್ದೇನೆ, ಇನ್ನೆರಡು ತಿಂಗಳು ಕಾಯು… ಕೆ.ಎನ್​.ರಾಜಣ್ಣಗೆ ಎಚ್​ಡಿಕೆ ಹಿಗ್ಗಾಮುಗ್ಗಾ ತರಾಟೆ

    ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

    ಬೆಂಗಳೂರಲ್ಲಿ ಮಗು ಕೊಂದು ಟೆಕ್ನಿ ಪತ್ನಿ ಆತ್ಮಹತ್ಯೆ: ಸಾವಿಗೂ ಮುನ್ನ ಬರೆದ ಡೆತ್​ನೋಟ್​ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts