More

    ಕಾಂಗ್ರೆಸ್​-ಬಿಜೆಪಿಯವರೇ ದಯವಿಟ್ಟು ಕ್ಷಮಿಸಿ, ದೇವೇಗೌಡರು ಇರೋವರೆಗೂ ನಾನು ಜೆಡಿಎಸ್ ಬಿಡಲ್ಲ… ಎನ್ನುತ್ತಲೇ ಕಣ್ಣೀರಿಟ್ಟ ಜಿಟಿಡಿ

    ಮೈಸೂರು: ಕಾಂಗ್ರೆಸ್​ನ ಸಿದ್ದರಾಮಯ್ಯ ಮತ್ತು ಬಿಜೆಪಿಯವರೇ ದಯವಿಟ್ಟು ನನ್ನನ್ನು ಕ್ಷಮಸಿ. ನಾನು ಜೆಡಿಎಸ್ ಪಕ್ಷವನ್ನು ಬಿಡಲ್ಲ. ಎಚ್.ಡಿ. ದೇವೇಗೌಡರು ಇರುವವರೆಗೂ ನಾನು ಮತ್ತು ನನ್ನ ಕುಟುಂಬ ಜೆಡಿಎಸ್ ಬಿಡಲ್ಲ… ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಕಣ್ಣೀರು ಸುರಿಸುತ್ತಲೇ ಘೋಷಣೆ ಮಾಡಿದರು.

    ಮೈಸೂರಿನಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು, ಜಿಟಿಡಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ದೇವೇಗೌಡರು ತಮ್ಮ ಮನೆಗೆ ಬಂದಿದ್ದರಿಂದ ಭಾವುಕರಾದ ಜಿಟಿಡಿ, ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷ ತೊರೆಯಲ್ಲ ಎಂದು ಘೋಷಣೆ ಮಾಡಿದರು. ಎಚ್.ಡಿ. ದೇವೇಗೌಡರ ಪ್ರೀತಿ ಮತ್ತು ಅಭಿಮಾನದ ಆಶೀರ್ವಾದಕ್ಕಿಂತ ನನಗೆ ಬೇರೆ ಯಾವುದೂ ದೊಡ್ಡದಲ್ಲ ಎಂದು ಭಾವುಕರಾದರು.

    ನಾನೊಬ್ಬ ಸಾಮಾನ್ಯ ರೈತನ ಮಗ. ನನ್ನ ಮನೆಗೆ ಎಚ್.ಡಿ.ದೇವೇಗೌಡ ಬಂದಿದ್ದಾರೆ. ಇದಕ್ಕಿಂತಾ ಭಾಗ್ಯ ಇನ್ನೇನಿದೆ? ಎಚ್.ಡಿ. ದೇವೇಗೌಡರ ಆರೋಗ್ಯ ಸದ್ಯ ಸರಿ ಇಲ್ಲ. ಎಲ್ಲ ನಾಯಕರು ಮತ್ತು ಸ್ವಾಮೀಜಿಗಳು ದೇವೇಗೌಡರನ್ನು ನೋಡಲು ಅವರ ಮನೆಗೆ ಹೋಗಿದ್ದರು. ನಾನು ಮಾತ್ರ ಎಚ್.ಡಿ. ದೇವೇಗೌಡರ ಆರೋಗ್ಯ ವಿಚಾರಿಸಲು ಹೋಗಿರಲಿಲ್ಲ. ಆದರೆ, ಅನಾರೋಗ್ಯದ ನಡುವೆಯೂ ದೇವೇಗೌಡರು ನನ್ನಂಥ ಚಿಕ್ಕವನ ಮನೆಗೆ ಬಂದಿದ್ದಾರೆ. ಎಚ್.ಡಿ. ದೇವೇಗೌಡರ ಬಂಧ ನನ್ನನ್ನು ಕಟ್ಟಿಹಾಕಿದೆ. ಸಿದ್ದರಾಮಯ್ಯ ಹಾಗೂ ಬಿಜೆಪಿಯವರು ನನ್ನನ್ನು ತಮ್ಮ ಪಕ್ಷಗಳಿಗೆ ಆಹ್ವಾನಿಸಿದ್ದರು. ಆದರೆ ನಾನು ಮಾತ್ರ ಎಚ್.ಡಿ. ದೇವೇಗೌಡರು ಇರುವವರೆಗೂ ಜೆಡಿಎಸ್ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.

    ಸಮ್ಮಿಶ್ರ ಸರ್ಕಾರ ಬಂದ್ರೆ ನಾನು ಸಿಎಂ ಆಗಲ್ಲ… ಚಾಮುಂಡಿ ಸನ್ನಿಧಿಯಲ್ಲೇ ಘೋಷಿಸಿ ಎಚ್​ಡಿಕೆ ಕೊಟ್ಟ ಕಾರಣ ಹೀಗಿದೆ…

    ಹಾಸನಾಂಬೆ ದೇವಾಲಯದಲ್ಲಿ ಹೃದಯಾಘಾತದಿಂದ ಭಕ್ತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts