More

    ಲೋಕದ ಒಳ ಹೊರಗೆ ನಾಟಕ ಪ್ರದರ್ಶನ

    ಮೈಸೂರು: ಸುವರ್ಣ ವರ್ಷದ ಸಂಭ್ರಮದಲ್ಲಿರುವ ರಂಗ ಸಂಪದ ತಂಡ ಅ.7ರ ಸಂಜೆ 6ಕ್ಕೆ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ‘ಘರೇ ಬೈರೇ’ ಕಾದಂಬರಿ ಆಧರಿಸಿದ ನಾಟಕ ರೂಪ ‘ಲೋಕದ ಒಳ ಹೊರಗೆ’ ಪ್ರಸ್ತುತ ಪಡಿಸಲಿದೆ.


    ನಿರ್ದೇಶಕ ಬಿ.ಸುರೇಶ ಅವರು ಕಾದಂಬರಿಯನ್ನು ರಂಗರೂಪಕ್ಕೆ ತಂದು ವಿನ್ಯಾಸದೊಂದಿಗೆ ನಾಟಕವನ್ನು ನಿರ್ದೇಶಿಸಿದ್ದಾರೆ. ಇದು ಬಿ.ಸುರೇಶ ಅವರು ರಚಿಸಿದ 25 ನೇ ನಾಟಕ ಹಾಗೂ ಅವರು ನಿರ್ದೇಶಿಸಿದ 50 ನೇ ರಂಗಪ್ರಯೋಗವಾಗಿದೆ.

    ಟ್ಯಾಗೋರರು 1923ರಲ್ಲಿ ಪ್ರಕಟಿಸಿದ ಕಾದಂಬರಿಯು 2023ರ ಕಾಲಘಟ್ಟದಲ್ಲೂ ಅತ್ಯಂತ ಪ್ರಸ್ತುತವಾಗಿದೆ. ‘ಲೋಕದ ಒಳ ಹೊರಗೆ ’ ಕಥನವು ಪಾಶ್ಚಾತ್ಯ ಸಂಸ್ಕೃತಿ ಮತ್ತು ಅದರ ವಿರುದ್ಧದ ಕ್ರಾಂತಿಯ ಕುರಿತಂತೆ ಸ್ವತಃ ಟ್ಯಾಗೋರರಿಗೆ ಈ ಪ್ರಶ್ನೆಗಳ ನೇರ ಚರ್ಚೆಯಾಗಿದೆ. ಈ ಎರಡೂ ಆಲೋಚನೆಗಳ ಪ್ರತೀಕವಾಗಿ ಈ ನಾಟಕದ ಎರಡು ಪ್ರಧಾನ ಪಾತ್ರಗಳಾದ ಸಿದ್ಧಾರ್ಥ ಪಾಶ್ಚಾತ್ಯ ಆಲೋಚನೆಯನ್ನು ಮೆಚ್ಚಿಕೊಂಡರೆ, ಇಂದ್ರಜಿತ್ ಆ ಸಂಸ್ಕೃತಿಯ ವಿರುದ್ಧ ಬಂಡಾಯವಾಗಿ ಕಾಣಿಸಿಕೊಳ್ಳುವಾಗ, ಅವರಿಬ್ಬರ ನಡುವೆ ಸಿಕ್ಕಿದ ಶಾರದೆ ಎಂಬ ಅಮಾಯಕ ಹೆಣ್ಣು ಅನುಭವಿಸುವ ಉಬ್ಬರವಿಳಿತಗಳು ಈ ನಾಟಕದ ತಿರುಳಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts