More

    22 ವರ್ಷದ ಬಳಿಕ ಹೆತ್ತಮ್ಮನ ಮಡಿಲು ಸೇರಿದ ಮಗಳು: ತಬ್ಬಿ ಮುತ್ತಿಟ್ಟು ಕಣ್ಣೀರಿಟ್ಟ ತಾಯಿ-ಮಗಳು!

    ಮೂಡಿಗೆರೆ: 9ನೇ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದ ಬಾಲಕಿ ಇದೀಗ ಗಂಡ-ಮಕ್ಕಳೊಂದಿಗೆ ತಾಯಿ ಎದುರು ಪ್ರತ್ಯಕ್ಷ್ಯವಾದ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ತಾಯಿಯನ್ನ ಭೇಟಿಯಾಗುತ್ತಿದ್ದಂತೆ ಅಮ್ಮ-ಮಗಳು ತಬ್ಬಾಡುತ್ತಾ ಕಣ್ಣೀರಿಟ್ಟ ದೃಶ್ಯ ವೈರಲ್​ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಪೂರ್ಣೇಶ್​ ಎಂಬುವವರ ಕಾಫಿ ಎಸ್ಟೇಟಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಕೂಲಿಲೈನ್​ನಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಚೈತ್ರಾ ಮತ್ತು ಕಾಳಿಮುತ್ತು ದಂಪತಿಯ 5ನೇ ಪುತ್ರಿ ಅಂಜಲಿ 1999ರಲ್ಲಿ ನಾಪತ್ತೆಯಾಗಿದ್ದಳು. ಆಗ ಈಕೆಯ ವಯಸ್ಸು 9 ವರ್ಷ. ಮುದ್ರೆಮನೆ ಪರಿಸರದಲ್ಲಿ ಟಿಂಬರ್​ ಕೆಲಸದ ಆನೆ ಮಾವುತನ ಪರಿಚಯವಾಗಿ ಆತನೊಂದಿಗೆ ಕೇರಳದ ಕ್ಯಾಲಿಕಟ್​ಗೆ ಹೋಗಿಬಿಟ್ಟಿದ್ದಳು. ಈ ವಿಷಯ ಪಾಲಕರಿಗೂ ಗೊತ್ತಿರಲಿಲ್ಲ. ಮಗಳಿಗಾಗಿ ಪಾಲಕರು ಹುಡುಕಾಟ ನಡೆಸಿದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ. ಅತ್ತ ಬಾಲಕಿಯನ್ನು ಕೇರಳಕ್ಕೆ ಕರೆದುಕೊಂಡು ಹೋದಾತ, ಅಂಜಲಿ ಹೆಸರನ್ನು ಬದಲಾಯಿಸಿ ಮಂಜು ಎಂದು ನಾಮಕರಣ ಮಾಡಿದ್ದ. ಬಾಲಕಿಯನ್ನು 5 ವರ್ಷ ಮನೆಯಲ್ಲೇ ಇರಿಸಿಕೊಂಡಿದ್ದ ಆತ, ಬಳಿಕ ಕ್ಯಾಲಿಕಟ್​ನ ಮುಕ್ಕಂ ಎಂಬಲ್ಲಿಯ ನೆಲ್ಮಣಿ ಶಾಜಿ ಎಂಬಾತನೊಂದಿಗೆ ಮದುವೆ ಮಾಡಿದ್ದ. ದಂಪತಿಗೆ ಒಂದು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    23 ವರ್ಷದ ಬಳಿಕ ತಂದೆ-ತಾಯಿಯನ್ನು ನೋಡಬೇಕು ಹಾತೊರೆದ ಅಂಜಲಿ(ಮಂಜು), ಗಂಡನ ಬಳಿ ಹೇಳಿಕೊಂಡಿದ್ದಳು. ಪತ್ನಿಯ ಆಸೆ ಈಡೇರಿಸಲು ಮುಂದಾದ ನೆಲ್ಮಣಿ ಶಾಜಿ, ಮಂಗಳೂರಿನಲ್ಲಿದ್ದ ತನ್ನ ಸ್ನೇಹಿತ ಮುಸ್ತಾ ಎಂಬುವವರನ್ನು ಸಂಪರ್ಕಿಸಿ ಮೂಡಿಗೆರೆ ತಾಲೂಕಿನ ಮುದ್ರೆಮನೆ ಎಸ್ಟೇಟಿನ ವಿಳಾಸ ಕೇಳಿದ್ದರು. ಮುಸ್ತಾ ಅವರು ಮೂಡಿಗೆರೆ ಸಮಾಜಸೇವಕ ಫಿಶ್​ ಮೋಣು ಅವರನ್ನು ಸಂಪರ್ಕಿಸಿ ವಿಳಾಸ ಪತ್ತೆಹಚ್ಚಿದ್ದರು.

    ಜ.3ರಂದು ಅಂಜಲಿ ಮತ್ತು ನೆಲ್ಮಣಿ ಶಾಜಿ ದಂಪತಿ ಕ್ಯಾಲಿಕಟ್​ನಿಂದ ಹೊರಟು ಇಂದು(ಜ.4) ಬೆಳಗ್ಗೆ ಮೂಡಿಗೆರೆ ಫಿಶ್​ಮೋಣು ಅವರನ್ನು ಭೇಟಿಯಾಗಿದರು. ಮುದ್ರೆಮನೆ ಎಸ್ಟೇಟ್​ಗೆ ಸಂಪರ್ಕಿಸಿದಾಗ ಅಂಜಲಿ ಪಾಲಕರು ಅಲ್ಲಿರಲಿಲ್ಲ. ಬಳಿಕ ಲೋಕವಳ್ಳಿ ಗ್ರಾಮದ ಸ್ಟೀವನ್​ ಸಿಕ್ವೆರಾ ಎಂಬುವವರ ಕಾಫಿ ತೋಟದಲ್ಲಿ ಅಂಜಲಿ ತಾಯಿ ಒಬ್ಬರೇ ಕೂಲಿ ಕೆಲಸ ಮಾಡುತ್ತಾ ಲೈನ್​ನಲ್ಲಿ ವಾಸವಾಗಿರುವ ವಿಷ್ಯ ತಿಳಿಯುತ್ತಿದ್ದಂತೆ ಅಂಜುಲಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.

    22 ವರ್ಷದ ಬಳಿಕ ಹೆತ್ತಮ್ಮನ ಮಡಿಲು ಸೇರಿದ ಮಗಳು: ತಬ್ಬಿ ಮುತ್ತಿಟ್ಟು ಕಣ್ಣೀರಿಟ್ಟ ತಾಯಿ-ಮಗಳು!

    ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ತಾಯಿಯನ್ನು ನೋಡಿ ಜೋರಾಗಿ ಅಳುತ್ತಾ ಓಡೋಡಿ ಬಂದು ಅಮ್ಮನ್ನು ಬಿಗಿದಪ್ಪಿಕೊಂಡು ಮುತ್ತಿಟ್ಟು ಭಾವುಕರಾದರು. ಇನ್ನೆಂದೂ ಮಗಳ ಮುಖ ನೋಡಲು ಸಾಧ್ಯವೇ ಇಲ್ಲ ಎಂದೇ ಭಾವಿಸಿದ್ದ ತಾಯಿಗೂ, ಮಗಳು ದಿಢೀರ್​ ಪ್ರತ್ಯಕ್ಷವಾಗಿದ್ದನ್ನು ನೋಡಿ ಆನಂದಬಾಷ್ಪ ಸುರಿಸಿದರು. ಮಗಳೇ ಅನ್ನೋದು ಗೊತ್ತಾಗ್ತಿದ್ದಂತೆ ತಬ್ಬಿ, ಮುತ್ತಿಟ್ಟು ಕಣ್ಣೀರಿಟ್ಟಿದ್ದಾರೆ. ಅಮ್ಮ-ಮಗಳ ಸಮಾಗಮನ ನೋಡಿ ನೆರೆದಿದ್ದವರೆಲ್ಲ ಮೂಕವಿಸ್ಮಿತರಾದರು.

    ಅಂಜಲಿಯ ತಂದೆ ಕಾಳಿಮುತ್ತು 2017ರಲ್ಲೇ ಮೃತಪಟ್ಟಿದ್ದಾರೆ. ಚೈತ್ರಾ ಮತ್ತು ಕಾಳಿಮುತ್ತು ದಂಪತಿಗೆ 7 ಹೆಣ್ಣು, 4 ಗಂಡು ಮಕ್ಕಳು. ಅವರೆಲ್ಲರಿಗೂ ಮದುವೆಯಾಗಿದ್ದು, ಬೇರೆಡೆ ವಾಸವಿದ್ದಾರೆ. ಒಂದು ದಿನ ತಾಯಿಯೊಂದಿಗಿದ್ದು ನಾಳೆ(ಬುಧವಾರ) ತಾಯಿಯನ್ನು ಕೇರಳಕ್ಕೆ ಹೋಗುವುದಾಗಿ ಅಂಜಲಿ ವಿಜಯವಾಣಿಗೆ ತಿಳಿಸಿದ್ದಾರೆ. ಸಮಾಜ ಸೇವಕ ಫಿಶ್​ ಮೋಣು, ಹಳೇ ಮೂಡಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಬಿ. ರಮೇಶ್, ದಾವೂದ್​ ಇದ್ದರು.

    ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

    ಮಗನನ್ನು ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣದ ಜಡ್ಜ್! ನ್ಯಾಯಾಧೀಶರ ನಡೆ ಕಂಡು ಉಬ್ಬೇರಿಸಿದ ಸ್ಥಳೀಯರು

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts