More

    World Cup 2023: ಹೆಲಿಕಾಪ್ಟರ್​​ನಲ್ಲಿ ಪ್ರಯಾಣಿಸಿ ಪಂದ್ಯ ವೀಕ್ಷಿಸಲು ಆಹ್ವಾನ ನೀಡಿದ ಕ್ರಿಕೆಟ್ ಅಭಿಮಾನಿ!

    ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೊಲ್ಟೆಜ್​ ಪಂದ್ಯ ವೀಕ್ಷಣೆಗಾಗಿ ಕ್ರಿಕೆಟ್​ ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲರಿಗೂ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಟಿವಿ, ಹಾಗೂ ಲೈವ್​ನಲ್ಲಿ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ವೀಕ್ಷಣೆ ಮಾಡುತ್ತಿರುವ ಕ್ರಿಕೆಟ್​​ ಅಭಿಮಾನಿಗಳಿಗೆ ಮತ್ತೊಬ್ಬ ಕ್ರೀಡಾ ಅಭಿಮಾನಿ ಬಂಪರ್​​ ಆಫರ್​​ ಘೋಷಣೆ ಮಾಡಿದ್ದಾನೆ.

    ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿಕೆಟ್ ಲಭ್ಯವಿರಲಿ, ಇಲ್ಲದಿರಲಿ, ಯಾವುದೇ ಸಂದರ್ಭದಲ್ಲೂ ಲೈವ್ ಪಂದ್ಯವನ್ನು ಮಿಸ್ ಮಾಡಿಕೊಳ್ಳದಿರಲು ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ. ಈ ಕುರಿತು ಇತ್ತೀಚೆಗೆ ವ್ಯಕ್ತಿಯೊಬ್ಬರ ಪೋಸ್ಟ್ ಕುತೂಹಲ ಮೂಡಿಸಿದೆ.

    ಟ್ವೀಟ್​​ನಲ್ಲಿ ಏನಿದೆ?: @ayushpranav3 ಎಂಬ ಟ್ವಿಟ್ಟರ್ ಐಡಿ ಹೊಂದಿರುವ ವ್ಯಕ್ತಿಯೊಬ್ಬರು ‘ಹೆಲಿಕಾಪ್ಟರ್‌ನಲ್ಲಿ ವಿಶ್ವಕಪ್ ಫೈನಲ್ ವೀಕ್ಷಿಸಲು ಯಾರಾದರೂ ಆಸಕ್ತಿ ಹೊಂದಿದ್ದೀರಾ? ನನಗೆ ಇಬ್ಬರು ಬೇಕು. ಶನಿವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಅಹಮದಾಬಾದ್‌ನಲ್ಲಿ ಉಪಹಾರ ಸೇವಿಸಿ ಪಂದ್ಯ ವೀಕ್ಷಿಸಿ ವಾಪಸ್ ಬರುತ್ತೇನೆ. ಪಂದ್ಯ ವೀಕ್ಷಣೆಗೆ ನಾವು ಹೋಗ ಬೇಕಾದರೆ…ನಿಮ್ಮ ಬಳಿ ಹೆಲಿಕಾಪ್ಟರ್ ಮತ್ತು ಟಿಕೆಟ್ ಇರಬೇಕು, ಇಲ್ಲದಿದ್ದರೆ ನಾವು ಹೋಗುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.

    ಈ ಪೋಸ್ಟ್ ಓದಿ ಖುಷಿಯ ಉತ್ತರ ನೀಡುವ ಮುನ್ನ..ಎಲ್ಲರಿಗೂ ಶಾಕ್​ ಆಗಿದೆ. ಈ ಪೋಸ್ಟ್‌ಗೆ ಜನರು ಅನೇಕ ಕಾಮೆಂಟ್‌ಗಳನ್ನು ಮಾಡಿದ್ದು, ಸಹೋದರ, ನಾನು ಹೆಲಿಕಾಪ್ಟರ್, ಟಿಕೆಟ್ಗಳನ್ನು ತರುತ್ತೇನೆ, ನೀವು ನನಗೆ ಪಾರ್ಕಿಂಗ್ ಸ್ಥಳವನ್ನು ಕೊಡಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಟ್ವೀಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗುತ್ತಿದೆ.

    ನವೆಂಬರ್ 19 ರಂದು ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಫೇವರಿಟ್ ಆಗಿ ಅಖಾಡಕ್ಕಿಳಿಯಲಿದೆ. 1 ಲಕ್ಷ 32 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಭಾರತ ಫೈನಲ್ ಪಂದ್ಯ ಆಡಲಿದೆ. ಈ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ಕೇಂದ್ರ ಸಚಿವರು ಕೂಡ ಆಗಮಿಸಲಿದ್ದಾರೆ.

    World Cup 2023; ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಅಂಪೈರ್​ಗಳು ಯಾರ‍್ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts