More

    ಪವಾಡವಾಗುತ್ತೆ ಎಂದು ಗೋಮೂತ್ರ ಸೇವನೆ ಕಾರ್ಯಕ್ರಮ; ಕೇಸರಿ ಪಡೆಯ ಕೆಲಸವೆಂದು ಟೀಕೆ

    ಕೋಲ್ಕತ: ಕರೊನಾ ವೈರಸ್​ ವಿಶ್ವದಾದ್ಯಂತ ಹರಡಿಕೊಂಡಿದೆ. ಈ ವೈರಸ್​ಗೆ ಯಾವುದೇ ಔಷಧ ಇಲ್ಲವೆಂದು ವೈದ್ಯರು ತಿಳಿಸುತ್ತಿದ್ದರೂ ಕೆಲವು ಕಡೆಗಳಲ್ಲಿ ಕೆಲ ಮೂಢನಂಬಿಕೆಗಳನ್ನು ಜನರು ನಂಬಿಕೊಂಡಿದ್ದಾರೆ. ಗೋಮೂತ್ರ ಸೇವನೆಯಿಂದ ಕರೊನಾ ವೈರಸ್​ ದೂರಾಗುತ್ತದೆ ಎಂದು ನಂಬಿರುವ ಕೆಲ ಜನರು ನಿನ್ನೆ ಕೊಲ್ಕತ್ತಾದಲ್ಲಿ ಗೋಮೂತ್ರ ಸೇವನಾ ಕಾರ್ಯಕ್ರಮವನ್ನು ನಡೆಸಿದ್ದಾರೆ.

    ಕೋಲ್ಕತ ಜೋರಸಂಕೊ ಪ್ರದೇಶದಲ್ಲಿರುವ ಗೋಶಾಲೆಯೊಂದರಲ್ಲಿ ನಿನ್ನೆ ಗೋಮೂತ್ರ ಸೇವನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗೋಮೂತ್ರ ಸೇವಿಸಿ, ತಾವು ಕರೊನಾ ಇಂದ ದೂರಾಗಿದ್ದೇವೆ ಎನ್ನುವ ನಂಬಿಕೆಯೊಂದಿಗೆ ಮನೆಗೆ ತೆರಳಿದ್ದಾರೆ. ಗೋಮೂತ್ರದಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಇದರಿಂದಾಗಿ ಕರೊನಾ ನಮ್ಮ ದೇಹದೊಳಗೆ ಬರುವುದಿಲ್ಲ. ಈ ಗೋಮೂತ್ರದಿಂದ ಪವಾಡವೇ ನಡೆಯುತ್ತದೆ ಎಂದು ಗೋಮೂತ್ರ ಹಂಚಿಕೆ ಮಾಡಲಾಗಿದೆ.

    ಪ್ರಪಂಚದೆಲ್ಲೆಡೆ ಹರಡಿಕೊಂಡಿರುವ ಕರೊನಾ ವೈರಸ್​ಗೆ ಯಾವುದೇ ಮದ್ದಿಲ್ಲ ಎಂದು ತಿಳಿಸಲಾಗುತ್ತಿದ್ದರೂ ಈ ರೀತಿಯಲ್ಲಿ ಜನರು ನಡೆದುಕೊಂಡಿರುವುದನ್ನು ರಾಜಕೀಯ ಪಕ್ಷಗಳಾಗಿರುವ ಟಿಎಂಸಿ ಮತ್ತು ಕಾಂಗ್ರೆಸ್​ ಟೀಕಿಸಿದೆ. ಇದು ಕೇಸರಿ ಪಡೆಗಳದ್ದೇ ಕೆಲಸ, ಗೋವುಗಳ ಕುರಿತಾಗಿ ಇರುವ ಗೀಳಿನಿಂದ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ನ ಮುಖ್ಯಸ್ಥ ಮನೋಜ್​ ಚಕ್ರವರ್ತಿ ಟೀಕಿಸಿದ್ದಾರೆ. ಇಚು ನಾಚಿಕೆಗೇಡಿನ ಕೆಲಸ ಮಾತ್ರವಲ್ಲ ಅಪರಾಧ. ಇಂತಹ ಬಲೆಗೆ ಬೀಳದಂತೆ ಎಚ್ಚರ ವಹಿಸಿ ಎಂದು ನಾನು ಜನರಲ್ಲಿ ಕೋರಿಕೊಳ್ಳುತ್ತೇನೆ ಎಂದು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥಾ ಚಟರ್ಜಿ ಹೇಳಿದ್ದಾರೆ. ಬಿಜೆಪಿ ಮಾತ್ರ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

    ಕಲಬುರಗಿಯಲ್ಲಿ ಕರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಕರೊನಾ ಸೋಂಕು

    ಯುವ ಕಾಂಗ್ರೆಸ್ ಮುಖಂಡರ ಹೊಡೆದಾಟ; ಕ್ಷೇತ್ರ ಪ್ರಧಾನ ಕಾರ್ಯದರ್ಶಿಗೆ ಹಲ್ಲೆ, ನಾಲ್ವರ ವಿರುದ್ಧ ಮೊಕದ್ದಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts