

ಕಲಬುರಗಿ: ರಾಜ್ಯದಲ್ಲಿ ಕರೊನಾ ವೈರಸ್ನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಕಲಬುರಗಿಯಲ್ಲಿ ಕರೊನಾ ಇಂದಾಗಿ ದೇಶದ ಮೊದಲ ಸಾವು ಸಂಭವಿಸಿತ್ತು. ಇದೀಗ ಆತನಿಗೆ ಚಿಕಿತ್ಸೆ ನೀಡಿದ ವೈದ್ಯನಲ್ಲೂ ಸೋಂಕು ಇರುವುದು ಪತ್ತೆಯಾಗಿದೆ.
ಕಲಬುರಗಿಯಲ್ಲಿ ಕರೊನಾ ಸೋಂಕಿತನಾಗಿದ್ದ ಸಿದ್ಧಿಕಿಗೆ ಚಿಕಿತ್ಸೆ ನೀಡಿದ್ದ ವೈದ್ಯನಲ್ಲಿ ಕರೊನಾ ವೈರಸ್ ಇರುವುದು ಧೃಡವಾಗಿದೆ. ವೈದ್ಯ ಸಿದ್ಧಿಕಿಯ ಮನೆಯಲ್ಲಿ ಆತನಿಗೆ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ್ದ. ಇದೀಗ ಆತನಲ್ಲಿ ವೈರಸ್ ಇರುವುದು ಧೃಡವಾಗಿದೆ ಎಂದು ಕಲಬುರಗಿಯೆ ಜಿಲ್ಲಾಧಿಕಾರಿ ಬಿ ಶರತ್ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಇದು ಮೂರನೇ ಕರೊನಾ ಪ್ರಕರಣವಾಗಿದೆ. ಸಿದ್ಧಿಕಿ ಸಾವಿನ ನಂತರ ಆತನ ಮನೆಯಲ್ಲಿದ್ದ ನಾಲ್ವರನ್ನು ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಒಬ್ಬರಲ್ಲಿ ಸೋಂಕಿರುವುದು ಧೃಡವಾಗಿತ್ತು. ಸದ್ಯ ಇಬ್ಬರೂ ಸೋಂಕಿತರನ್ನು ಜಿಲ್ಲೆಯ ಇ ಎಸ್ಐ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.