More

    ಕರೊನಾ ವ್ಯಾಕ್ಸಿನ್​ ಬಸ್ ಸಂಚಾರ.. ಲಸಿಕೆ ಹಾಕಿಸಿಕೊಳ್ಳಲು ಬನ್ನಿ…

    ಕಲಬುರಗಿ: ಕರೊನಾ ಲಸಿಕೆ ಹಾಕಿಸಿಕೊಳ್ಳಲು ರಾಜ್ಯದ ಕೆಲವು ಗ್ರಾಮಗಳಲ್ಲಿ ಜನ ಹಿಂದೇಟು ಹಾಕುತ್ತಿದ್ದಾರೆ. ತಾಂಡಾ, ಹಾಡಿಯಲ್ಲಿನ ಬಹುತೇಕರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹಾಗಾಗಿ ಇನ್ಮುಂದೆ ಅವರಿರುವಲ್ಲಿಗೇ ಹೋಗಿ ಲಸಿಕೆ ಹಾಕುವ ನಿಟ್ಟಿನಲ್ಲಿ ಈ ಬಸ್​ಗಳು​ ಸಂಚರಿಸಲಿವೆ.

    ಕೋವಿಡ್ ಲಸಿಕಾ ವಾಹನವನ್ನು ಕಲಬುರಗಿಯಲ್ಲಿ ಪ್ರಾರಂಭಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ತಯಾರಿ‌ ನಡೆಸಿದ್ದು, ಲೋಕಾರ್ಪಣೆಗೆ ಎರಡು ಸಂಚಾರಿ ಲಸಿಕಾ ಬಸ್​ ಸಿದ್ಧಗೊಂಡಿವೆ. ಇದು ರಾಜ್ಯದ ಮೊದಲ ಕೋವಿಡ್​ ಲಸಿಕಾ ಸಂಚಾರಿ ಬಸ್​ ಅನ್ನಿಸಿಕೊಳ್ಳಲಿದೆ.

    ಗ್ರಾಮೀಣ ಭಾಗ ಹಾಗೂ ತಾಂಡಾಗಳಲ್ಲಿ ವಾಸಿಸುವ ಜನರಿಗಾಗಿಯೇ ಸಂಚಾರಿ ಲಸಿಕಾ ಬಸ್ ಸಿದ್ಧಪಡಿಸಲಾಗಿದೆ. ಈ ಬಸ್ ಮೂರು ವಿಭಾಗ ಹೊಂದಿದ್ದು, ಮೊದಲನೇ ವಿಭಾಗದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಎರಡನೇ ವಿಭಾಗದಲ್ಲಿ ಲಸಿಕೆ ಹಾಕುವುದು, ಕೊನೆಯ ವಿಭಾಗದಲ್ಲಿ ಲಸಿಕೆ ಪಡೆದ ನಂತರದ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.

    ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕೋರಿಕೆಯಂತೆ 2 ಬಸ್ ಅನ್ನು ಈಶಾನ್ಯ ಸಾರಿಗೆ ಸಂಸ್ಥೆ ತಯಾರಿಸಿದ್ದು, ಅಗತ್ಯವಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಲಸಿಕಾ ವಾಹನ ತಯಾರಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ತೆಲ್ಕೂರ್ ತಿಳಿಸಿದ್ದಾರೆ. ಕೆಲ ಕುಗ್ರಾಮಗಳಲ್ಲಿ ಆಸ್ಪತ್ರೆಗಳಿಲ್ಲ. ಅಲ್ಲಿಗೂ ಈ ಬಸ್​ ಮೂಲಕ ಲಸಿಕೆ ಹಾಕುವ ಕಾರ್ಯ ನಡೆಯಲಿದೆ ಎಂದಿದ್ದಾರೆ.

    5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

    ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

    ಪತ್ನಿಯ ಕಾಮದಾಟಕ್ಕೆ ಬಿತ್ತು ಇಬ್ಬರ ಹೆಣ! ಪತ್ನಿ ಜತೆಗೆ ಅತ್ತೆಯನ್ನೂ ಅಟ್ಟಾಡಿಸಿ ಕೊಂದ ಭೂಪ

    ತವರಿಂದ ಗಂಡನ ಮನೆಗೆ ಹೊರಟಿದ್ದ ಮಹಿಳೆ ಮಗನ ಕಣ್ಣೆದುರಲ್ಲೇ ದುರಂತ ಅಂತ್ಯ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts