More

    ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಮತ್ತೆ ಕರೊನಾ ಪಾಸಿಟಿವ್​

    ನವದೆಹಲಿ: ಮಹಾಮಾರಿ ಕರೊನಾ 3ನೇ ಅಲೆ ಶರವೇಗ ಪಡೆದುಕೊಂಡಿದ್ದು, ರಾಜಕೀಯ, ಸಿನಿಮಾ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ರಂಗವನ್ನೂ ಆವರಿಸಿದೆ. ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಕರ್ನಾಟಕ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ರಾಜನಾಥ್​ ಸಿಂಗ್​, ಬಿಹಾರ ಸಿಎಂ ನಿತೀಶ್​ ಕುಮಾರ್​ ಸೇರಿದಂತೆ ಹಲವು ನಾಯಕರಲ್ಲಿ ಕೋವಿಡ್​ ದೃಢಪಟ್ಟಿದೆ. ಇವರ ಬೆನ್ನಿಗೇ ಇದೀಗ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೂ ಕರೊನಾ ಸೋಂಕು ತಗುಲಿದೆ.

    ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ನಿನ್ನೆ(ಜ.11) ಕರೊನಾ ಪಾಸಿಟಿವ್​ ಇದೆ ವರದಿಯಲ್ಲಿದೆ. ಈ ಬಗ್ಗೆ ಗಡ್ಕರಿ ಅವರೇ ನಿನ್ನೆ ರಾತ್ರಿ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ನನಗೆ ಕರೊನಾ ಸೋಂಕಿನ ಸೌಮ್ಯ ಲಕ್ಷಣಗಳಿದ್ದು, ಸೋಂಕು ದೃಢಪಟ್ಟಿದೆ. ಸದ್ಯ ಮನೆಯಲ್ಲೇ ಕ್ವಾರಂಟೈನ್​ ಆಗಿರುವೆ. ಇತ್ತೀಚಿಗೆ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕರೊನಾ ಟೆಸ್ಟ್​ ಮಾಡಿಸಿಕೊಳ್ಳುವ ಜತೆಗೆ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ’ ಎಂದಿದ್ದಾರೆ.

    ಗಡ್ಕರಿ ಅವರಿಗೆ ಕಳೆದ ಸೆಪ್ಟಂಬರ್​ನಲ್ಲಿ ಕರೊನಾ ಸೋಂಕು ತಗುಲಿತ್ತು. ಇದೀಗ ಮತ್ತೊಮ್ಮೆ ಸೋಂಕು ತಗುಲಿದೆ.

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ಗೆ ಕರೊನಾ ಪಾಸಿಟಿವ್​, ಐಸಿಯುನಲ್ಲಿ ಚಿಕಿತ್ಸೆ

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts