More

    ದಾವಣಗೆರೆಯಲ್ಲಿ ಶಿರಾ ಮೂಲದ 5 ವರ್ಷದ ಬಾಲಕಿ MIS-C ಸೋಂಕಿಗೆ ಬಲಿ!

    ದಾವಣಗೆರೆ: ಕರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುವ ಹೊಸ ರೋಗ ಮಿಸ್​-ಸಿ (MIS-C)ಗೆ 5 ವರ್ಷದ ಹೆಣ್ಣು ಮಗು ಇಂದು ಬಲಿಯಾಗಿದೆ.

    MIS-C ಮಲ್ಟಿಸಿಸ್ಟಮ್ ಇನ್‌ಫ್ಲಮೇಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್(MIS-C) ಪ್ರಕರಣಕ್ಕೆ ಜಿಲ್ಲೆಯಲ್ಲಿ ಇದು ಮೊದಲ ಬಲಿಯಾಗಿದ್ದು, ಮಕ್ಕಳ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ. ತುಮಕೂರು ಜಿಲ್ಲೆಯ ಶಿರಾ ಮೂಲದ 5 ವರ್ಷದ ಬಾಲಕಿಗೆ MIS-C ಕಾಣಿಸಿಕೊಂಡಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರಿಂದ ಬಾಲಕಿಯನ್ನು ಚಿತ್ರದುರ್ಗದಿಂದ ದಾವಣಗೆರೆ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

    ಈಗಾಗಲೇ 10 ಮಕ್ಕಳಿಗೆ MIS-C ಆವರಿಸಿದ್ದು, ಈ ಪೈಕಿ 7 ಮಕ್ಕಳು‌ ಗುಣಮುಖರಾಗಿದ್ದಾರೆ. 3 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
    ಕೋವಿಡ್‌ನಿಂದ ಗುಣಮುಖರಾದ ಮಕ್ಕಳಲ್ಲಿ MIS-C ಕಾಣಿಸಿಕೊಳ್ಳಲಿದ್ದು, ಮಕ್ಕಳಲ್ಲಿ ಬಹು ಅಂಗಾಗ ವೈಫಲ್ಯ ಆಗುವ ಸಾಧ್ಯತೆ ಹೆಚ್ಚು. ತೀವ್ರ ಜ್ವರ, ತಲೆ ನೋವು, ಹೊಟ್ಟೆನೋವು, ಕಣ್ಣು ಕೆಂಪಾಗುವುದು, ಚರ್ಮದ ಮೇಲೆ ಗಾದರೆಗಳಾಗುವುದು ಈ ರೋಗದ ಲಕ್ಷಣ.

    ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

    ಆಗ ತಾನೇ ಹುಟ್ಟಿದ ಮಗುವನ್ನ ಆಸ್ಪತ್ರೆಯ ಕಿಟಕಿಗೆ ನೇತು ಹಾಕಿ ಕೊಂದ ಕ್ರೂರಿ!

    ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

    ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts