More

    ಕೆಲಸ ಕಸಿದುಕೊಂಡ ಲಾಕ್‌ಡೌನ್‌: ಹಸಿವು ತಾಳದೇ ಕಸದ ರಾಶಿಯಲ್ಲೇ ಅನ್ನ ಹುಡುಕಿ ತಿಂದ ವ್ಯಕ್ತಿ… ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ಹಾಸನ: ಹೊತ್ತಿನ ಊಟಕ್ಕೂ ಗತಿಯಿಲ್ಲದೆ ವ್ಯಕ್ತಿಯೊಬ್ಬ ರಸ್ತೆಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನವನ್ನು ಹುಡುಕಿ ತಿನ್ನುತ್ತಿದ್ದ ಹೃದಯವಿದ್ರಾವಕ ಘಟನೆ ಆಲೂರು ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

    ಉದ್ಯೋಗ ಕಸಿದುಕೊಂಡ ಲಾಕ್‌ಡೌನ್, ಊರು ತಲುಪಲು ವಾಹನಗಳೂ ಇಲ್ಲ, ಟ್ಯಾಕ್ಸಿಗಳಿಗೆ ಬಾಡಿಗೆ ನೀಡುವಷ್ಟು ಶ್ರೀಮಂತ ಸಹ ಅಲ್ಲ, ಹೊತ್ತಿನ ಊಟಕ್ಕೂ ಗತಿಯಿಲ್ಲದೆ ರಸ್ತೆ ಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನದ ಅಗಳನ್ನು ಹುಡುಕಿ ಹಕ್ಕಿಯಂತೆ ತಿನ್ನುತ್ತಿದ್ದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

    ಕೆಲಸ ಕಸಿದುಕೊಂಡ ಲಾಕ್‌ಡೌನ್‌: ಹಸಿವು ತಾಳದೇ ಕಸದ ರಾಶಿಯಲ್ಲೇ ಅನ್ನ ಹುಡುಕಿ ತಿಂದ ವ್ಯಕ್ತಿ... ಬೆಚ್ಚಿಬೀಳಿಸುತ್ತೆ ಈ ದೃಶ್ಯಅರಸೀಕೆರೆ ತಾಲೂಕು ತಂತನಹಳ್ಳಿ ಕೆರೆ ಗ್ರಾಮದ ರಾಜು (38) ಎಂಬುವರು ಹಸಿವು ತಾಳಲಾರದೆ ರಸ್ತೆಬದಿಯ ಕಸದ ರಾಶಿಯಲ್ಲಿದ್ದ ಅನ್ನವನ್ನು ತಿನ್ನುತ್ತಿದ್ದರು. ದಾರಿಹೋಕನೊಬ್ಬ ವಿಚಾರಿಸಿದಾಗ, ಹೊಟ್ಟೆ ಹಸಿವು ತಾಳಲಾರದೆ ಹೀಗೆ ಮಾಡುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ವರ್ಷದ ಹಿಂದೆ ಆಲೂರಿಗೆ ಬಂದಿದ್ದೆ. ಆದರೀಗ ಕೆಲಸ ಕೈ ಕೊಟ್ಟಿದ್ದು, ಊರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ. ಹೊಟ್ಟೆ ಹಸಿವು ತಾಳಲಾಗುತ್ತಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ ಎಂದು ರಾಜು ಕಣ್ಣೀರ ಕೋಡಿ ಹರಿಸಿದರು.

    ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್, ಮನೆಯಿಂದ ಅನ್ನ-ಸಾಂಬರು ತಂದು ರಾಜುಗೆ ಕೊಟ್ಟರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸಿಬ್ಬಂದಿ ಜತೆ ಬಂದು ರಾಜು ಅವರಿಗೆ ಕರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು, ಗಾರೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.

    18 ಮಂದಿಗೆ ಕರೊನಾ ಅಂಟಿಸಿದ ಒಂದೇ ಒಂದು ಸಿಗರೇಟ್​!

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts