More

    ಕರೊನಾದಿಂದ ಮೃತಪಟ್ಟವರ ಡೆತ್ ಆಡಿಟ್​ಗೆ ಕಾಂಗ್ರೆಸ್​ ಸಜ್ಜು

    ಬೆಂಗಳೂರು: ಜುಲೈ 1ರಿಂದ ಮೂವತ್ತು ದಿನ ರಾಜ್ಯಾದ್ಯಂತ ಕಾಂಗ್ರೆಸ್‌ನಿಂದ ವಿಶೇಷ ಅಭಿಯಾನ ನಡೆಯಲಿದ್ದು, ಈ ವೇಳೆ ಕರೊನಾದಿಂದ ಮೃತಪಟ್ಟವರ ಡೆತ್ ಆಡಿಟ್ ನಡೆಸಲು ನಿರ್ಧರಿಸಿದೆ.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರ್ಕಾರ ನೀಡಿರುವ ಸಾವಿನ ಸಂಖ್ಯೆಯ 5 ಪಟ್ಟು ಹೆಚ್ಚು ಕರೊನಾದಿಂದ ಆಗಿದೆ. ಡೆತ್ ಆಡಿಟ್ ಮಾಡಿಸುವ ಸಂಬಂಧ ಸರ್ಕಾರ ಈವರೆಗೆ ಕ್ರಮ ಕೈಗೊಂಡಿಲ್ಲ. ನಮ್ಮ ಕಾರ್ಯಕರ್ತರು ಮೂವತ್ರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.

    ಮೂವತ್ತು ಜನರ ತಂಡ ರಚಿಸಿ ಅವರ ಮೂಲಕ ಮನೆಗೆ ಭೇಟಿ ನೀಡಿ ಕರೊನಾದಿಂದ ಮೃತರಾದ ಕುಟುಂಬಕ್ಕೆ ಸಾಂತ್ವನ ಹೇಳುವರು. ಜತೆಗೆ ಸರ್ಕಾರದ ಪರಿಹಾರ ಪ್ಯಾಕೇಜ್‌ಗೆ ಅರ್ಜಿಹಾಕಿಸಲು ನೆರವಾಗಲಿದ್ದಾರೆ ಎಂದು ವಿವರಿಸಿದರು.

    ಈವರೆಗೆ ಮೂವತ್ತು ಸಾವಿರ ಮಂದಿ‌ ಕರೊನಾದಿಂದ ಮೃತಪಟ್ಟಿದ್ದಾರೆಂದು ಸರ್ಕಾರ ಹೇಳಿದೆ. ಆದರೆ, 1.25 ಲಕ್ಷ ಮಂದಿ ಈ ಅವಧಿಯಲ್ಲಿ ಮರಣ ಪ್ರಮಾಣಪತ್ರ ಪಡೆದಿದ್ದಾರೆ. ಅವರೆಲ್ಲರದೂ ಕರೊನಾ ಸಾವು ಎಂದು ಪರಿಗಣನೆ ಯಾಗಿಲ್ಲ. ಹೀಗಾಗಿ ಅಂತವರ ಸಹಾಯ ಹಸ್ತ ನೀಡಲು, ಸರ್ಕಾರದ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಪಕ್ಷದಿಂದ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

    ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

    ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

    ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…

    ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

    ಗಂಡನಿದ್ದರೂ ಪರಪುರುಷನ ಜತೆ ಮಹಿಳೆಯ ಕಾಮದಾಟ! ಬೇಡ ಬೇಡ ಎಂದವನ ಉಸಿರನ್ನೇ ನಿಲ್ಲಿಸಿದ್ಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts