More

    VIDEO| ಕರೊನಾ​ ಮಣಿಸಲು ಪೊಲೀಸರ ಮಸ್ತ್​ ಡಾನ್ಸ್​! ವಿಡಿಯೋ ವೈರಲ್

    ತಿರುವನಂತಪುರಂ: ಮಹಾಮಾರಿ ಕರೊನಾಗೆ ಇಡೀ ಜಗತ್ತು ತಲ್ಲಣಿಸಿದೆ. ದೇಶದಲ್ಲಿ ನಿತ್ಯ ಸಾವಿರಾರು ಮಂದಿ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ. ಸಾವಿನ ಸರಣಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಕರೊನಾ ವಾರಿಯರ್ಸ್​ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕು ಮಣಿಸುವ ಹೋರಾಟದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಆದರೂ ಬಹುತೇಕ ಜನರು ಮಾಸ್ಕ್​ ಧರಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

    ಇಂತಹ ಜನರಿಗೆ ಅರಿವು ಮೂಡಿಸಲೆಂದೇ ಕೇರಳ ಪೊಲೀಸರು ಡಾನ್ಸ್​ ಮಾಡಿದ್ದಾರೆ. ಒಂದೂವರೆ ನಿಮಿಷ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಿದಲ್ಲಿ ಸಖತ್​ ವೈರಲ್​ ಆಗಿದೆ.

    VIDEO| ಕರೊನಾ​ ಮಣಿಸಲು ಪೊಲೀಸರ ಮಸ್ತ್​ ಡಾನ್ಸ್​! ವಿಡಿಯೋ ವೈರಲ್ಈ ಹಾಡಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ ತೊಳೆಯುತ್ತೀರಿ, ಮಾಸ್ಕ್ ಧರಿಸಿ, ಮಾಸ್ಕ್​ ಹಾಕದೆ ಹೊರಬರಬೇಡಿ, ಸ್ಯಾನಿಟೈಸರ್​ ಬಳಸಿ, ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ…. ಕರೊನಾ ರೂಲ್ಸ್​ ಬ್ರೇಕ್​ ಮಾಡದೆ ಮಹಾಮಾರಿ ಕೋವಿಡ್​ ಮಣಿಸಲು ಸಹಕರಿಸಿ ಎಂಬ ಸಂದೇಶ ಇದ್ದು, ಕೇರಳ ಸ್ಟೇಟ್​ ಪೊಲೀಸರು ಡಾನ್ಸ್​ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

    ಈ ಡಾನ್ಸ್​ ವಿಡಿಯೋವನ್ನು ಕೇರಳದ ರಾಜ್ಯ ಪೊಲೀಸ್ ಮಾಧ್ಯಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಎಲ್ಲರೂ ಕರೊನಾ ವಿರುದ್ಧ ಹೋರಾಟ ಮಾಡೋಣ. ನಿಮ್ಮೊಂದಿಗೆ ಕೇರಳ ಪೊಲೀಸ್ ಇದೆ ಎಂದು ಬರೆದುಕೊಂಡಿದೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಪೊಲೀಸರ ವಿನೂತನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

     

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ನಾಳೆಯಿಂದ ಆಸ್ಪತ್ರೆಗೆ ಬರಬೇಡಿ: ಸಚಿವ ಡಾ.ಸುಧಾಕರ್​

     

    https://www.vijayavani.net/a-a-rain-thunderbolt-house-collapse-in-chintamani-talluk/
    https://www.vijayavani.net/a-actor-shanaya-katave-brother-rakesh-case/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts