More

    ಅಕ್ಕಿ ಕೇಳಿದ ರೈತನಿಗೆ ‘ಸಾಯುವುದು ಒಳ್ಳೇದು’ ಎಂದ ಆಹಾರ ಸಚಿವ! ಕತ್ತಿ ಮಾತಿಗೆ ಸಿಎಂ ಬಿಎಸ್​ವೈ ಬೇಸರ

    ಬೆಳಗಾವಿ: ಲಾಕ್​ಡೌನ್​ ಹಿನ್ನೆಲೆ ಬಡಜನರು, ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ಹಸಿವು ತಣಿಸಿಕೊಳ್ಳುವುದ್ಹೇಗೆ ಎಂದು ಕಣ್ಣು-ಬಾಯಿ ಬಿಡುವಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಹಸಿವಿನಿಂದ ಜನ ಸಾಯಬೇಕಾ ಎಂದು ರೈತರೊಬ್ಬರು ಕೇಳಿದ ಪ್ರಶ್ನೆಗೆ ಸಾಯಲಿ ಎನ್ನುವ ಮೂಲಕ ಉಡಾಫೆ ತೋರಿದ ಸಚಿವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆಹಾರ ಸಚಿವರ ವಿವಾದಾತ್ಮಕ ಹೇಳಿಕೆಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರೇ ವಿಷಾದ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಚಿವರು ಹೇಳಿದ್ದೇನು ಗೊತ್ತಾ?

    ಪಡಿತರ ಚೀಟಿದಾರರಿಗೆ ಅಕ್ಕಿ ಕಡಿತ ಮಾಡಿರುವ ಕುರಿತು ಸಚಿವ ಉಮೇಶ್ ಕತ್ತಿಯನ್ನು ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ನಿವಾಸಿ, ರೈತ ಸಂಘದ ಕಾರ್ಯಕರ್ತ ಈಶ್ವರ್ ಪ್ರಶ್ನಿಸಿದ್ದಾರೆ. ಈ ವೇಳೆ ಸಂಭಾಷಣೆ ಇಲ್ಲಿದೆ

    ರೈತ ಈಶ್ವರ್: ಇಂತಹ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ ತಲಾ 2 ಕೆಜಿ ಅಕ್ಕಿ ಸಾಲುತ್ತಾ?
    ಉಮೇಶ್​ ಕತ್ತಿ: 3 ಕೆಜಿ ರಾಗಿ ಮಾಡಿದ್ದೀವಲ್ಲ?
    ರೈತ ಈಶ್ವರ್: ಉತ್ತರ ಕರ್ನಾಟಕದ ಜನತೆಗೆ ರಾಗಿ ಹೇಗೆ ಕೂಡುತ್ತೀರಾ?
    ಉಮೇಶ್​ ಕತ್ತಿ: ಉತ್ತರ ಕರ್ನಾಟಕಕ್ಕೆ ರಾಗಿ, ಜೋಳ ಮಾಡಿದ್ದೇವೆ
    ರೈತ ಈಶ್ವರ್: ಲಾಕ್​ಡೌನ್ ಇದೆ, ದುಡಿಮೆ ಇಲ್ಲಾ…
    ಉಮೇಶ್​ ಕತ್ತಿ: ಲಾಕ್​ಡೌನ್​ ಹಿನ್ನೆಲೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 5 ಕೆಜಿ ಅಕ್ಕಿ ಕೊಡಲಿದೆ. ಮುಂದಿನ ತಿಂಗಳಿಂದ ಕೊಡುತ್ತೇವೆ
    ರೈತ ಈಶ್ವರ್: ಅಲ್ಲಿಯವರೆಗೆ ಸತ್ತು ಹೋಗೋದಾ ಅಥವಾ ಉಪವಾಸ ಇರೋದಾ?
    ಉಮೇಶ್​ ಕತ್ತಿ: ಸತ್ತು ಹೋಗುವುದು ಒಳ್ಳೆಯದು. ಅದಕ್ಕಿಂತ ಪೂರ್ವದಲ್ಲಿ ಅಕ್ಕಿ ಮಾರಾಟ ಮಾಡೋದು ಬಿಡಿ, ನನಗೆ ಫೋನ್​ ಮಾಡಬೇಡಿ.
    ರೈತ ಈಶ್ವರ್: ಸರ್ ಫೋನ್ ಮಾಡ್ಬೇಡಿ ಅನ್ಬೇಡಿ. ನೀವು ಜನಪ್ರತಿನಿಧಿಗಳು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮಾತನಾಡಿದಾಗ ಉತ್ತರಿಸಬೇಕು.

    ಈ ಮಾತು ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಉಮೇಶ್ ಕತ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಳಸಂತೆಯಲ್ಲಿ ಅಕ್ಕಿ ದಂಧೆ ಮಾಡ್ತಿದ್ದಾರೆ ಅದನ್ನು ನಾನು ಕೇಳಿದ್ದೆ. ಅಕ್ಕಿ ಕಡಿತ ಮಾಡಿದ್ದಾರೆ ಸಾಯಬೇಕೋ ಅಂತಾ ಆತ ಕೇಳಿದ, ಸತ್ತು ಹೋಗಪ್ಪಾ ಅಂದೆ. ಅವನು ಸಾಯ್ತೀನಿ ಅಂದ್ರೆ ನಾನೇನು ಉತ್ತರ ಕೊಡಲಿ ಎಂದಿದ್ದಾರೆ. ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಮೇ- ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಪಡಿತರ ವಿತರಣೆ ಮಾಡುತ್ತೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಲಾಕ್​ಡೌನ್​ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

    ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

    PHOTOS| ಜನತಾ ಕರ್ಫ್ಯೂ: ಇಡೀ ಬೆಂಗಳೂರು ಸ್ತಬ್ಧ, ಲಾಕ್​ ಆದರೂ ಗುಳೇ ತಪ್ಪಿಲ್ಲ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts