More

    ಪರಾರಿಯಾಗಿರುವ ನೀರವ್​ ಮೋದಿಯ ಬೆಲೆ ಬಾಳುವ ವಸ್ತುಗಳು ಗುರುವಾರದಂದು ಹರಾಜು

    ನವದೆಹಲಿ: ಅನೇಕ ಬ್ಯಾಂಕ್​ಗಳಲ್ಲಿ ಕೋಟ್ಯಂತರ ಹಣವನ್ನು ಸಾಲ ಮಾಡಿ ಕಣ್ಮರೆಯಾಗಿರುವ ನೀರವ್​ ಮೋದಿ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಗುರುವಾರದಂದು ಆನ್​ಲೈನ್​ನಲ್ಲಿ ಹರಾಜಿಗೆ ಹಾಕಲಾಗುವುದು.

    ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಪೇಂಟಿಂಗ್​ಗಳು, ಕಾರು, ವಾಚು ಮತ್ತು ಬ್ಯಾಗ್​ಗಳನ್ನು ಆನ್​ಲೈನ್​ನಲ್ಲಿ ಹರಾಜಿಗೆ ಹಾಕಲಾಗುವುದು. ಇಡಿ ಇಲಾಖೆಯ ವಶದಲ್ಲಿರುವ ವಸ್ತುಗಳಿಗೆ ಒಟ್ಟು ಎರಡು ಭಾಗದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಮೊದಲನೇ ಭಾಗವು ಫೆ.27ಕ್ಕೆ ನಡೆಯಲಿದೆ. ಎರಡನೇ ಭಾಗವು ಮಾರ್ಚ್​ 3-4 ಕ್ಕೆ ನಡೆಯಲಿದೆ.

    ಮೊದಲನೇ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 15 ಪೇಂಟಿಂಗ್​ಗಳು ಸೇರಿ ಅನೇಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಎಮ್​.ಎಫ್​ ಹುಸೇನ್​ ಅವರ 1972ರ ವಿಶೇಷವಾದ ಪೇಂಟಿಂಗ್​ ಎ ಬ್ಯಾಟಲ್​ ಆಫ್​ ಗಂಗಾ ಮತ್ತು ಜಮುನಾ ಮಹಾಭಾರತ ಮತ್ತು ಅಮೃತ ಶೇರ್​ ಗಿಲ್​ ಅವರ 1935ರ ಎ ಬಾಯ್ಸ್​ ವಿತ್​ ಲೆಮನ್ಸ್​ ಪೇಂಟಿಂಗ್​ನ್ನು ಹರಾಜು ಹಾಕಲಾಗುತ್ತಿದೆ. ಈ ಎರಡು ಪೇಂಟಿಂಗ್​ಗಳು ಕನಿಷ್ಠ 12ರಿಂದ 18 ಕೋಟಿ ರೂಪಾಯಿಗೆ ಹರಾಜಾಗಲಿವೆ ಎಂದು ನಿರೀಕ್ಷಿಸಲಾಗಿದೆ.

    ಉಳಿದಂತೆ 1972ರಲ್ಲಿ ಬರೆಯಲಾಗಿರುವ ವಿ.ಎಸ್​.ಗೈಟೊಂಡೆ ಅವರ ಪೇಂಟಿಂಗ್​ಗೆ ಮೂರು ಕೋಟಿ ರೂಪಾಯಿ, ಅರ್ಪಿತಾ ಸೀಮಗ್​ ಅವರು 1996ರಲ್ಲಿ ರಚಿಸಿರುವ 27 ಡಕ್ಸ್​ ಆಫ್​ ಮೆಮೋರಿ ಪೇಂಟಿಂಗ್​ಗೆ 1.2ರಿಂದ 1.8 ಕೋಟಿ ರೂಪಾಯಿ ಸಿಗಬಹುದು ಎನ್ನಲಾಗಿದೆ.

    ಪೇಂಟಿಂಗ್​ಗಳ ಹೊರೆತುಪಡಿಸಿ, ರೋಲ್ಸ್​ ರಾಯ್ಸ್​ ಘೋಸ್ಟ್ ಕಾರಿಗೆ ಅಂದಾಜು 75-95 ಲಕ್ಷ, ಪೋರ್ಷೆ ಪನಾಮೆರಾ ಕಾರಿಗೆ 15 ಲಕ್ಷ ರೂಪಾಯಿ ಸಿಗಬಹುದು ಎನ್ನುವ ನಿರೀಕ್ಷೆಯಿದೆ. ಇನ್ನುಳಿದಂತೆ ದುಬಾರಿ ವಾಚುಗಳು, ಬ್ಯಾಗ್​ಗಳು ಹರಾಜಿನಲ್ಲಿ ಲಭ್ಯವಾಗಲಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts