ಪ್ರವೀಣ್​ ನೆಟ್ಟಾರು ಕುಟುಂಬಸ್ಥರಿಗೆ ನನ್ನ ಕಚೇರಿಯಲ್ಲಿ ಉದ್ಯೋಗ ಕೊಡ್ತೀನಿ: ಸಿಎಂ ಘೋಷಣೆ

praveenCM
Published on

ಬೆಂಗಳೂರು: ನನ್ನ ಕಚೇರಿಯಲ್ಲಿ ಪ್ರವೀಣ್​ ನೆಟ್ಟಾರು ಕುಟುಂಬದವರಿಗೆ ಕೆಲಸ ಕೊಡ್ತೀನಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಸಮಾವೇಶದಲ್ಲಿ ಭಟ್ಕಳದ ಪ್ರವೀಣ್​ ನೆಟ್ಟಾರು ಅವರ ಗುಣಗಾನ ಮಾಡಲಾಯಿತು. ಇತ್ತೀಚಿಗೆ ನಿಧನರಾದ ಸಚಿವ ಉಮೇಶ್​ ಕತ್ತಿ ಅವರ ಫೋಟೋ ಜತೆಗೆ ಪ್ರವೀಣ್​ ನೆಟ್ಟಾರು ಫೋಟೋವನ್ನೂ ಇಟ್ಟು ಬಿಜೆಪಿ ನಾಯಕರು ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ನನ್ನ ಕಚೇರಿಯಲ್ಲಿ ಪ್ರವೀಣ್​ ನೆಟ್ಟಾರು ಕುಟುಂಬದವರಿಗೆ ಕೆಲಸ ಕೊಡ್ತೀನಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಕಳೆದ ಜುಲೈ 26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್​ ನೆಟ್ಟಾರ್​ರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಇವರ ಹತ್ಯೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಪ್ರವೀಣ್​ ಕುಟುಂಬದ ಬೆನ್ನಿಗೆ ನಾವಿದ್ದೇವೆ ಎಂದು ಸಿಎಂ ಆ ವೇಳೆ ಅಭಯ ನೀಡಿದ್ದರು. ಅದರಂತೆ ಇಂದು ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಮಹತ್ವದ ಘೋಷಣೆ ಮಾಡಿದ್ದಾರೆ.

ಪ್ರವೀಣ್​ ನೆಟ್ಟಾರು ಬಿಜೆಪಿ​ ಯುವ ಮೋರ್ಚಾ ಕಾರ್ಯಕರ್ತರಾಗಿದ್ದರು. ಷಡ್ಯಂತ್ರಕ್ಕೆ ಬಲಿಯಾಗಿ ಪ್ರಾಣವನ್ನೇ ಬಿಟ್ಟರು. ಅವರ ಮನೆಯವರಿಗೆ ನನ್ನ ಕಚೇರಿಯಲ್ಲೇ ಕೆಲಸ ಕೊಡ್ತೀನಿ ಎಂದು ಸಿಎಂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net