More

    ಯುರೋಪ್​ನ ಈ ನಗರದಲ್ಲಿ ವಿದ್ಯುತ್​ಚಾಲಿತ ಬೈಕ್​ ಸೇರಿ ಎಲ್ಲ ಬಗೆಯ ಬೈಕ್​ಗಳ ನಿಷೇಧ

    ವಿಯೆನ್ನಾ: ವಿಯೆನ್ನಾ ನಗರದ ವ್ಯಾಪ್ತಿಯಲ್ಲಿ ವಿದ್ಯುತ್​ಚಾಲಿತ ಬೈಕ್​ ಸೇರಿ ಎಲ್ಲ ಬಗೆಯ ಬೈಕ್​ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲು ವಿಯೆನ್ನಾ ನಗರದ ಸ್ಥಳೀಯ ಆಡಳಿತ ಸಂಸ್ಥೆ ನಿರ್ಧರಿಸಿದೆ. ವಿಶ್ವಪ್ರಖ್ಯಾತ ಕೆಟಿಎಂ ಬೈಕ್​ಗಳ ತವರಿನಲ್ಲಿ ಈಗಾಗಲೆ ಈ ನಿರ್ಧಾರ ಜಾರಿಗೆ ಬಂದಿದೆ.

    ಯುರೋಪ್​ನಲ್ಲಿ ಪ್ರಾಕೃತಿಕವಾಗಿ ಅತ್ಯಂತ ಸುಂದರ ಮತ್ತು ಸೊಬಗಿನ ನೋಟವನ್ನು ಒದಗಿಸುವ ಆಸ್ಟ್ರೀಯಾದ ಟೈರಾಲ್​ ರಾಜ್ಯದಲ್ಲಿ ಕೂಡ ಬೈಕ್​ಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಪ್ರವಾಸಿಗರು ಪ್ರಕೃತಿಯ ಈ ಸೊಬಗಿನ ನೋಟವನ್ನು ಕಣ್ತುಂಬಿಕೊಳ್ಳಲು ಈ ರಾಜ್ಯದಲ್ಲಿ ಬೈಕ್​ ಸವಾರಿ ಮಾಡುತ್ತಿದ್ದರು. ಆದರೆ, ಇನ್ನುಮುಂದೆ ಅವರಿಗೆ ಇದಕ್ಕೆ ಅವಕಾಶ ಇರುವುದಿಲ್ಲ.

    ಅಷ್ಟೇ ಅಲ್ಲ, ವಿಯೆನ್ನಾ ನಗರದ ಹೃದಯ ಭಾಗದಲ್ಲಿ ಕಾರುಗಳ ಮುಕ್ತ ವಲಯವನ್ನು ರೂಪಿಸಲಾಗಿದ್ದು, ಈ ಪ್ರದೇಶಗಳಲ್ಲಿ ಎಲ್ಲ ಬಗೆಯ ಕಾರುಗಳ ಸಂಚಾರವನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ನಗರವನ್ನು ಸುತ್ತಲೂ ಆವರಿಸಿರುವ ರಿಂಗ್​ ರಸ್ತೆಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಆಡಿನ ತಂದೆ ಯಾರು ಎಂದು ತಿಳಿಯಲು ಕೋರ್ಟ್‌ ಮೊರೆ ಹೋಗಿರುವ ಮಹಿಳೆ!

    ವಾಹನಗಳ ನಿಷೇಧಿತ ವಲಯದಲ್ಲಿ ವಾಸವಾಗಿರುವ, ವಾಹನ ನಿಲುಗಡೆಗಾಗಿ ತಮ್ಮದೇ ಆದ ಗ್ಯಾರೇಜ್​ ಅನ್ನು ಹೊಂದಿರುವವರು ಈ ಪ್ರದೇಶಕ್ಕೆ ತೆರಳಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ನಿಲುಗಡೆಯ ಪರವಾನಗಿ ಹೊಂದಿರುವ ವಾಹನಗಳ ಮಾಲಿಕರಿಗೂ ಈ ವಲಯದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

    ವಿವಿಧ ವಸ್ತುಗಳ ಮಾರಾಟ ಪ್ರತಿನಿಧಿಗಳು ಮತ್ತು ಕಚೇರಿಯ ಅವಧಿಯಲ್ಲಿ ಸದಾ ಹೊರಗೆ ಓಡಾಡಿಕೊಂಡು ಕೆಲಸ ಮಾಡಬೇಕಾಗಿರುವಂಥವರ ವಾಹನಗಳ ಸಂಚಾರಕ್ಕೆ ಈ ನಿಷೇಧ ಅನ್ವಯಿಸುವುದಿಲ್ಲ. ಪ್ರಯಾಣಿಕರ ಟ್ಯಾಕ್ಸಿಗಳು, ಹೋಟೆಲ್​ಗಳಲ್ಲಿ ತಂಗಿರುವ ಪ್ರವಾಸಿಗರ ವಾಹನಗಳಿಗೂ ನಿಷೇಧಿತ ವಲಯದಲ್ಲಿ ಈ ನಿರ್ಬಂಧದಿಂದ ವಿನಾಯ್ತಿ ನೀಡಲಾಗಿದೆ.

    ಪರಿಸರ ಹಾಗೂ ಶಬ್ಧ ಮಾಲಿನ್ಯ ಉಂಟು ಮಾಡದ ವಿದ್ಯುತ್​ ಚಾಲಿತ ಬೈಕ್​ ಮತ್ತು ಕಾರುಗಳನ್ನು ನಿಷೇಧಿತ ವಾಹನಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದು ಸ್ಥಳೀಯ ಜನರನ್ನು ಕೆರಳಿಸಿದೆ. ಆದರೂ ಸಾರ್ವಜನಿಕರ ಆಕ್ಷೇಪಕ್ಕೆ ಮಾನ್ಯತೆ ನೀಡದೆ, ಪ್ರತಿಭಟನೆಗೂ ಅವಕಾಶ ನೀಡದೆ, ತಮ್ಮ ನಿರ್ಧಾರವನ್ನು ದಿಟ್ಟವಾಗಿ ಜಾರಿಗೊಳಿಸಲು ಸ್ಥಳೀಯ ಆಡಳಿತ ಸಂಸ್ಥೆಯ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.

    ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts