More

    ಅಂತರಘಟ್ಟೆಯಲ್ಲಿ ಸಂಭ್ರಮದ ಬಾನ ಸೇವೆ

    ಕಡೂರು: ತಾಲೂಕಿನ ಅಂತರಘಟ್ಟೆಯ ದುರ್ಗಂಬಾ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಅಮ್ಮನ ಹಬ್ಬದ ಬಾನ ಸೇವೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಅಲಂಕೃತಗೊಂಡ ಪಾನಕದ ಎತ್ತಿನ ಗಾಡಿಗಳನ್ನು ಮತ್ತಷ್ಟು ಸಿಂಗರಿಸಿ ಪಟ್ಟಣದ ದೊಡ್ಡಪೇಟೆಯಿಂದ ಆರಂಭಿಸಿದ ಎತ್ತಿಗಾಡಿ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಜೋಡೆತ್ತ್ತುಗಳನ್ನು ಮಧುವಣಗಿತ್ತಿಯಂತೆ ಶೃಂಗಾರಗೊಳಿದ್ದು ಎಲ್ಲರ ಗಮನ ಸೆಳೆಯಿತು. ಅದ್ದೂರಿ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್‌ಗೆ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಛತ್ರದ ಬೀದಿ ಸಮೀಪ ಬರುತ್ತಿದ್ದಂತೆ, ಪಾನಕದ ಬಂಡಿಗಳನ್ನು ವೇಗವಾಗಿ ಓಡಿಸುತ್ತಿದ್ದು ಸಾಮಾನ್ಯವಾಗಿತ್ತು. ರಸ್ತೆ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಬಂಡಿಗಳು ಓಡಿಸುವ ದೃಶ್ಯವನ್ನು ಕಣ್ತುಂಬಿಸಿಕೊಂಡರು. ಗಾಡಿಯಲ್ಲಿ ಪಾನಕಗಳ ಹಂಡೆಗಳನ್ನು ಇಟ್ಟುಕೊಂಡು ಗ್ರಾಮದೇವತೆ ಕೆಂಚಾಂಬ ದೇಗುಲದ ಬಳಿ ಗಾಡಿಗಳನ್ನು ನಿಲ್ಲಿಸಿ ದೇವಿಗೆ ಪಾನಕದ ನೈವೇದ್ಯವನ್ನು ಅರ್ಪಿಸಿ ನಂತರ ಬನ್ನಿಮರದವರೆಗೆ ಸುತ್ತ ಪಾನಕದ ಗಾಡಿಓಡಿಸಿ ಸಂಭ್ರಮಕ್ಕೆ ತೆರೆ ಎಳೆದರು. ಇದೇ ಪ್ರಕಾರವಾಗಿ ಹಳೇ ಪೇಟೆಯಲ್ಲಿ ದೇವಿ ಭಕ್ತರು ಕದಂಬ ವೃತ್ತದಿಂದ ಅಂತರಘಟ್ಟಮ್ಮ ದೇವಾಲಯದವರೆಗೆ ಪಾನಕದ ಗಾಡಿ ಮೂಲಕ ಮೆರವಣಿಗೆ ನಡೆಸಿ ಹಬ್ಬವನ್ನು ಸಂಭ್ರಮಿಸಿದರು. ಮೆರವಣಿಗೆಯಿಂದ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸಿಪಿಐ ದುರ್ಗಪ್ಪ ಹಾಗೂ ಪಿಎಎಸ್‌ಐ ಧನಂಜಯ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದ್‌ಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts