More

    ಬಹುಕೋಟಿ ಮೇವು ಹಗರಣದ ಡೊರಾಂಡ ಪ್ರಕರಣದಲ್ಲೂ ಲಾಲು ದೋಷಿ: ಸಿಬಿಐ ವಿಶೇಷ ಕೋರ್ಟ್​ ತೀರ್ಪು

    ರಾಂಚಿ: ಬಹುಕೋಟಿ ಮೇವು ಹಗರಣದ 5ನೇ ಪ್ರಕರಣದಲ್ಲೂ ಬಿಹಾರ ಮಾಜಿ ಸಿಎಂ, ಆರ್​ಜೆಡಿ ಸಂಸ್ಥಾಪಕ ಲಾಲು​ ಪ್ರಸಾದ್​ ಯಾದವ್​ ಅವರನ್ನ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

    ಈಗಾಗಲೇ ಮೇವು ಹಗರಣದ 4 ಪ್ರಕರಣದಲ್ಲೂ ಲಾಲು ದೋಷಿ ಆಗಿದ್ದು, ಒಟ್ಟು 20.5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 5ನೇ ಪ್ರಕರಣದಲ್ಲೂ ದೋಷಿ ಎಂದು ಸಾಬೀತಾಗಿದ್ದು, ಫೆ.21ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶ ಎಸ್​.ಕೆ. ಶಶಿ ತಿಳಿಸಿದ್ದಾರೆ.

    5ನೇ ಪ್ರಕರಣ: ಅವಿಭಜಿತ ಬಿಹಾರದಲ್ಲಿ 950 ಕೋಟಿ ಮೇವು ಹಗರಣ ನಡೆದಿತ್ತು. ವಿವಿಧ ಜಿಲ್ಲೆಗಳ ಸರ್ಕಾರಿ ಖಜಾನೆಯಿಂದ ಹಣವನ್ನು ಅಕ್ರಮವಾಗಿ ಪಡೆಯಲಾಗಿತ್ತು. ಡೊರಾಂಡಾ ಜಿಲ್ಲಾ ಸರ್ಕಾರಿ ಖಜಾನೆಯಿಂದ 139.35 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಪಡೆದ ಆರೋಪ ಲಾಲು ಮೇಲೆ ಬಂದಿತ್ತು. ಇದು ಮೇವು ಹಗರಣದ 5ನೇ ಪ್ರಕರಣ. ತನಿಖೆ ಬಳಿಕ ಆರೋಪ ಸಾಬೀತಾಗಿದ್ದು, ಈ ಪ್ರಕರಣ ಸಂಬಂಧ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಲಾಲು ಯಾದವ್​ ಮತ್ತು ಇತರ 75 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದೆ. 6 ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮಹಿಳೆಯರು ಸೇರದಂತೆ 24 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

    1991 ಮತ್ತು 1996ರ ನಡುವೆ ಲಾಲು ಯಾದವ್​ ಸಿಎಂ ಆಗಿದ್ದಾಗ ಬಿಹಾರ ಪಶುಸಂಗೋಪನೆ ಇಲಾಖೆಯಿಂದ ಈಗಾಗಲೇ ಮೂರುವರೆ ವರ್ಷ ನ್ಯಾಯಾಂಗ ಬಂಧನದಲ್ಲೇ ಕಾಲ ಕಳೆದಿದ್ದಾರೆ.

    ಹಾವೇರಿಯಲ್ಲಿ ಭೀಕರ ಅಪಘಾತ: ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು, ಕಾರಲ್ಲಿದ್ದ ಶಿಕ್ಷಕ ದುರ್ಮರಣ

    ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್​ ಆದೇಶ: ರೈತನಿಗೆ ಪರಿಹಾರ ಕೊಡದೆ ಸತಾಯಿಸುತ್ತಿದ್ದ ಡಿಸಿಗೆ ಶಾಕ್

    ಭೂಗತ ಪಾತಕಿ ದಾವೂದ್​ನ​ ಸಹೋದರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ED ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts