More

    ಬಿ.ಎಸ್ಸಿ ನರ್ಸಿಂಗ್​, ಇತರ ಕೋರ್ಸ್​ಗಳ​ ಪ್ರವೇಶ ಪ್ರಕ್ರಿಯೆ ಶುರು: ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಕೆಇಎ

    ಬೆಂಗಳೂರು: ಬಿ.ಎಸ್ಸಿ ನರ್ಸಿಂಗ್​, ಬಿಪಿಟಿ, ಬಿಪಿಒ ಕೋರ್ಸ್​ಗಳ ಪ್ರವೇಶಾತಿ ಸಂಬಂಧ ಮೆರಿಟ್​ ಪಟ್ಟಿ ಹಾಗೂ ಸರ್ಕಾರ ನೀಡಿರುವ ಸೀಟ್​ ಮ್ಯಾಟ್ರಿಕ್ಸ್​ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.

    ವಿಜಯವಾಣಿ ಫೆ.15ರಂದು “ಬಿ.ಎಸ್ಸಿ ನರ್ಸಿಂಗ್​ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ” ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದಾಗಿ ಎಚ್ಚೆತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ದಾಖಲಾತಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.

    ಈ ಸೀಟ್​ ಮ್ಯಾಟ್ರಿಕ್ಸ್​ ಅನ್ನು ಮೊದಲ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲು ನಿರ್ಧರಿಸಿದೆ. ಅಭ್ಯರ್ಥಿಗಳು ಇಚ್ಛೆ, ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಲು ಫೆ.18ರಿಂದ 22ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ದಾಖಲಿಸುವ ಇಚ್ಛೆ, ಆಯ್ಕೆಗಳನ್ನು ಪರಿಗಣಿಸಿ, ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಪ್ರಕಟಿಸಲಿದೆ. ಈ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಪರಿಶೀಲಿಸಿದ ನಂತರ ಇಚ್ಛೆ, ಆಯ್ಕೆಗಳನ್ನು ಬದಲಾಯಿಸಿಕೊಳ್ಳಲು, ಮಾರ್ಪಾಡು ಮಾಡಿಕೊಳ್ಳಲು ಅವಕಾಶ ನೀಡಲಿದೆ. ಆನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಲಿದೆ. ಹೆಚ್ಚಿನ ಮಾಹಿತಿಗೆ http://kea.kar.nic.in ನೋಡಬಹುದು.

    ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts