More

    ಬಿಜೆಪಿ ಸೇರುವ ಕುರಿತು ವಿಚಾರ ಮಾಡುತ್ತೇನೆ ಎಂದಿದ್ದರಲ್ಲಿ ತಪ್ಪೇನಿದೆ?: ಬಸವರಾಜ ಹೊರಟ್ಟಿ

    ಹಾವೇರಿ: ಬಿಜೆಪಿಯಲ್ಲಿರುವ ಅನೇಕ ಸ್ನೇಹಿತರು ನನ್ನನ್ನು ಕರೆಯುತ್ತಿದ್ದಾರೆ. ಈ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಕೆಲವು ಸತ್ಯಗಳನ್ನು, ನಂಬಿಕೆಗಳನ್ನು ಹೇಳಬಾರದು. ಹಾಗೇನಾದರೂ ಇದ್ದರೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ನಾನು ಬಿಜೆಪಿ ಸೇರುವ ವಿಚಾರ ಮಾಡುತ್ತೇನೆ ಎಂದು ಹೇಳಿದ್ದೇನೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಬಾರ್​ನಲ್ಲಿ ಕುಳಿತುಕೊಂಡರೆ ಅಥವಾ ಏನಾದರೂ ಕಾನೂನು ಬಾಹಿರ ಕೆಲಸ ಮಾಡಿದ್ದರೆ ಸಾಂವಿಧಾನಿಕ ಹುದ್ದೆಯ ನಿಯಮ ಮುರಿದಂತೆ. ಸದನವನ್ನು ಎಷ್ಟು ಕಟ್ಟುನಿಟ್ಟಾಗಿ ನಡೆಸಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ನಿಯಮಗಳನ್ನು ಬಿಟ್ಟು ಏನೂ ಮಾಡಿಲ್ಲ. ಇನ್ನೊಬ್ಬರ ಬಗ್ಗೆ ಟೀಕೆ, ಟಿಪ್ಪಣಿ ಮಾಡುವುದಿಲ್ಲ. ಹೇಳುವವರು ಹೇಳುತ್ತಾರೆ, ಅದಕ್ಕೆ ನನ್ನ ತಕರಾರಿಲ್ಲ ಎಂದರು.

    ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ. ಶಿಕ್ಷಕರು ನನ್ನನ್ನು ಯಾವಾಗಲೂ ಕೈಬಿಟ್ಟಿಲ್ಲ, ಬಿಡುವುದೂ ಇಲ್ಲ. ಸಭಾಪತಿ ಇದ್ದವನು ಪಕ್ಷಾಂತರ ಮಾಡಿ ಹೋಗಲು ಆಗುತ್ತದೆಯೇ? ಹೋಗುವುದಾದರೆ ರಾಜೀನಾಮೆ ಕೊಟ್ಟು ಹೋಗುವೆ. ಚುನಾವಣೆ ವೇಳೆ ಬಿಜೆಪಿಗೆ ಹೋಗುವ ಬಗ್ಗೆ ವಿಚಾರ ಮಾಡುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

    ಸರ್ಕಾರದ ವಿರುದ್ಧ ಪರ್ಸೆಂಟೇಜ್​ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ನಾನು ಸಭಾಪತಿಯಾಗಿ ಇದನ್ನು ಹೇಳಬಾರದು. ಸಾರ್ವಜನಿಕ ಹಿತಾಸಕ್ತಿಗಾಗಿ ಹೇಳುತ್ತಿದ್ದೇನೆ. ಇದ್ಯಾವುದೂ ಒಳ್ಳೆಯದಲ್ಲ. ಸ್ವಾಮೀಜಿಗಳಾಗಲೀ, ನಮ್ಮಂಥವರಾಗಲೀ ಇದರ ಬಗ್ಗೆ ಮಾತನಾಡಬಾರದು. ರಾಜ್ಯದಲ್ಲಿ ಮೂನ್ನೂರು ಜನ ಶಾಸಕರಿದ್ದೇವೆ. ಇವರಿಗೆ ಇರುವ ಸೌಭಾಗ್ಯ ಯಾರಿಗೂ ಸಿಗುವುದಿಲ್ಲ. ಉತ್ತಮವಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದರು.

    ಕೆಜಿಎಪ್-2 ಸಿನಿಮಾ ನೋಡುವಾಗ ಥಿಯೇಟರ್​ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್​

    ತಮಕೂರಲ್ಲಿ ಟಿ.ಬಿ. ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಗೆ ಮಾಜಿ ಸಚಿವ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts