More

    ಭದ್ರಾ ನದಿಯ ವಸಿಷ್ಠ ತೀರ್ಥದಲ್ಲಿ ಜಾರಿಬಿದ್ದ ವೈದ್ಯ ನೀರುಪಾಲು!

    ಕಳಸ: ಬೆಂಗಳೂರು ಕೆಂಗೇರಿಯ ಆಯುರ್ವೆದ ವೈದ್ಯರೊಬ್ಬರು ಕಳಸದ ಭದ್ರಾ ನದಿಯ ವಸಿಷ್ಠ ತೀರ್ಥದಲ್ಲಿ ಜಾರಿಬಿದ್ದು ನೀರು ಪಾಲಾಗಿದ್ದಾರೆ.

    ಬೆಂಗಳೂರಿನ ಶ್ರೀ ಆಯುರ್ವೇದ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ರುದ್ರೇಶ್ ಮೃತರು. ಡಾ.ರುದ್ರೇಶ್ ಸೇರಿ 8 ಜನರು ಕಳಸಕ್ಕೆ ಶನಿವಾರ ಆಗಮಿಸಿ ಹೋಮ್ ಸ್ಟೇಯಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ವಸಿಷ್ಠಾಶ್ರಮದ ಬಳಿ ಬಂದು ತೂಗುಸೇತುವೆ ಮತ್ತು ಸುಂದರ ಪರಿಸರ ವೀಕ್ಷಿಸಿದ್ದಾರೆ. ಡಾ.ರುದ್ರೇಶ್ ಮೆಟ್ಟಿಲಿಳಿದು ನದಿಯತ್ತ ಹೋಗಿದ್ದಾರೆ. ಮಳೆಗಾಲವಾದ್ದರಿಂದ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ.

    ಸ್ಥಳಕ್ಕೆ ಎಸ್​ಡಿಆರ್​ಎಫ್ ತಂಡ, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ವಸಿಷ್ಠ ತೀರ್ಥ ಅಪಾಯಕಾರಿ ಆಗಿರುವುದರಿಂದ ನೀರಿನಲ್ಲಿ ಮುಳುಗಿ ಹುಡುಕುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ.

    ಭದ್ರಾ ನದಿಯ ವಸಿಷ್ಠ ತೀರ್ಥದಲ್ಲಿ ಜಾರಿಬಿದ್ದ ವೈದ್ಯ ನೀರುಪಾಲು!

    ಡಾ. ರುದ್ರೇಶ್ ಅವರ ಪತ್ನಿ ಕೂಡ ವೈದ್ಯೆ. ಈ ದಂಪತಿ ನಾಲ್ಕು ವರ್ಷದ ಮಗಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಕಳಸ ಪೊಲೀಸರು, ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ ಸದಾನಂದ, ಪಿಡಿಒ ಕವೀಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವಯನಾಡಿನಲ್ಲಿ ಮತ್ತೆ ನಕ್ಸಲ್ ಹೆಜ್ಜೆ: ಕರಪತ್ರ ಹಂಚಿ ಸಿಎಂಗೆ ಸವಾಲು ಹಾಕಿದ ನಕ್ಸಲ್​ ಪಡೆ

    2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

    ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts