ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಕ್ಕೆ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಆರಂಭವಾಗಿದೆ. ಶೇ.56.02 ಮತದಾನವಾಗಿದೆ. ಆರಂಭಿಕವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತಾದಾರೂ 21ನೇ ಸುತ್ತಿಗೆ ಬರುವಷ್ಟರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರತಿಷ್ಠೆಯನ್ನ ಪಣಕ್ಕಿಟ್ಟು ಹೋರಾಟ ನಡೆಸಿದ್ದು, ಗೆಲುವಿನ ಅಂತರ ಬಹಳ ಇರಲಾರದು ಎಂಬುದಕ್ಕೆ 21ನೇ ಸುತ್ತಿನ ಮತ ಎಣಿಕೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳೇ ಸಾಕ್ಷಿ.
ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಬಿಜೆಪಿ ಕಣಕ್ಕಿಳಿಸಿ, ಅನುಕಂಪದ ಮತಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎದುರಾಳಿಯಾಗಿದ್ದಾರೆ. ಮರಾಠ ಸಮುದಾಯದ ಮತಗಳನ್ನು ಸೆಳೆಯಲೆಂದು ಎಂಇಎಸ್ ಕೂಡ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿತ್ತು.
1ನೇ ಸುತ್ತು
ಬಿಜೆಪಿ- 6445
ಕಾಂಗ್ರೆಸ್- 9613
ಕಾಂಗ್ರೆಸ್ಗೆ 3168 ಮತಗಳ ಮುನ್ನಡೆ
6ನೇ ಸುತ್ತು
ಕಾಂಗ್ರೆಸ್- 18004
ಬಿಜೆಪಿ- 14418
ಕಾಂಗ್ರೆಸ್ಗೆ 3586 ಮತಗಳ ಮುನ್ನಡೆ
7ನೇ ಸುತ್ತು
ಕಾಂಗ್ರೆಸ್- 25432
ಬಿಜೆಪಿ- 22780
ಕಾಂಗ್ರೆಸ್ಗೆ 2652 ಮತಗಳ ಮುನ್ನಡೆ
9ನೇ ಸುತ್ತು
ಕಾಂಗ್ರೆಸ್- 33841
ಬಿಜೆಪಿ- 32272
ಕಾಂಗ್ರೆಸ್ಗೆ 1569 ಮತಗಳ ಮುನ್ನಡೆ
10ನೇ ಸುತ್ತು
ಬಿಜೆಪಿ-39631
ಕಾಂಗ್ರೆಸ್-38170
ಬಿಜೆಪಿಗೆ 1461 ಮತಗಳ ಮುನ್ನಡೆ
21ನೇ ಸುತ್ತು
ಬಿಜೆಪಿ-65854
ಕಾಂಗ್ರೆಸ್-62828
ಬಿಜೆಪಿಗೆ 3026 ಮತಗಳ ಮುನ್ನಡೆ
28ನೇ ಸುತ್ತು
ಬಿಜೆಪಿ- 1,13,912
ಕಾಂಗ್ರೆಸ್- 1,04,133
ಬಿಜೆಪಿಗೆ 9779 ಮತಗಳ ಮುನ್ನಡೆ
ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ
ಮಸ್ಕಿ ಕ್ಷೇತ್ರದ ಉಪ ಚುನಾವಣೆ: 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್