More

    ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

    ಬೆಂಗಳೂರು: ಬಡ ಜನರಿಗೆ ಊಟ ವಿತರಿಸುತ್ತಿರುವಾಗಲೇ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಅವರನ್ನು ಅಟ್ಟಾಡಿಸಿಕೊಂಡು ದುಷ್ಕರ್ಮಿಗಳ ತಂಡ ಗುರುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ. ರೇಖಾ ಅವರ ಪತಿ ಕದಿರೇಶ್​ನನ್ನೂ 3 ವರ್ಷದ ಹಿಂದೆ ಅವರ ಮನೆ ಬಳಿಯೇ ಹಾಡಹಗಲೇ ಶೋಭನ್ ಗ್ಯಾಂಗ್ ಕೊಲೆ ಮಾಡಿತ್ತು. ಈ ಘಟನೆ ಬೆಂಗಳೂರನ್ನೇ ಬೆಚ್ಚಿಬೀಳಿಸತ್ತು. ಇದೀಗ ರೇಖಾರನ್ನ ಸಹಚರರೇ ಹತ್ಯೆ ಮಾಡಿದ್ದಾರೆ.

    ಸಂಸದ ಪಿ.ಸಿ. ಮೋಹನ್ ಅವರ ಶಿಷ್ಯೆಯಾಗಿದ್ದ ರೇಖಾ ಕದಿರೇಶ್ 2010 ಮತ್ತು 2015ರಲ್ಲಿ ಎರಡು ಭಾರಿ ಛಲವಾದಿಪಾಳ್ಯ ಕಾರ್ಪೋರೇಟ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದರು. ಇಡೀ ವಾರ್ಡ್ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು. ಇಂತಹ ಪ್ರಭಾವಿ ಮಾಜಿ ಕಾರ್ಪೋರೇಟರ್ ಹತ್ಯೆಗೆ ಮೊದಲೇ ಪ್ಲಾನಿಂಗ್ ಆಗಿತ್ತು ಎನ್ನಲಾಗಿದೆ.

    ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

    ಲಾಕ್​ಡೌನ್ ಹಿನ್ನೆಲೆ ದಿನನಿತ್ಯ ಸ್ಲಂ ಜನರಿಗೆ ರೇಖಾ ಕದಿರೇಶ್​ ಉಪಹಾರದ ವ್ಯವಸ್ಥೆ ಮಾಡುತ್ತಿದ್ದರು. ನೂರಾರು ಮಂದಿಯ ಹಸಿವು ನೀಗುಸುವ ಕಾಯಕದಲ್ಲಿ ತೊಡಗಿದ್ದರು. ಎಂದಿನಂತೆ ಇಂದು ಕೂಡ ಉಪಹಾರ ವಿತರಣೆ ಮಾಡುತ್ತಿದ್ದರು. ಈ ವೇಳೆ ಅಂದರೆ ಬೆಳಗ್ಗೆ 10:15ಕ್ಕೆ ರೇಖಾರ ಕಚೇರಿ ಬಳಿ ಬಳಿ ಬಂದ ಆಗಂತುಕರು ಮನೆಯಲ್ಲಿದ್ದ ರೇಖಾರನ್ನ ಕಚೇರಿ ಬಳಿಗೆ ಕರೆಸಿದ್ದರು. ಒಬ್ಬರೇ ಬಂದ ರೇಖಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ದಾಳಿ ಆಗುತ್ತಿದ್ದಂತೆ ಪ್ರಾಣ ಉಳಿಸಿಕೊಳ್ಳಲು ಕಚೇರಿಯ ಒಳಗೆ ಓಡಿ ಹೋದ ರೇಖಾರನ್ನು ಅಟ್ಟಾಡಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯಎಸ್ ಎಸ್ ವೆಲ್ಫೇರ್ ಕಚೇರಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ಕೊಲೆ ಮಾಡುವ ಉದ್ದೇಶದಿಂದಲೇ ಇಂದು ಬೆಳಗಿನಜಾವದಲ್ಲಿ ಮೇಲಕ್ಕೆ ತಿರುಗಿಸಿರುವುದು ಮತ್ತು ಪರಿಚಯ ಇರುವವರೇ ಹತ್ಯೆ ಮಾಡಿರುವುದು ಕಂಡು ಬಂದಿದೆ. ರೇಖಾ ಕದಿರೇಶ್ ಜತೆಗಿದ್ದ ಪೀಟರ್ ಆ್ಯಂಡ್ ಟೀಮ್ ಈ ಕೊಲೆ ಮಾಡಿರಬಹುದು ಎಂದು ರೇಖಾರ ಸಹೋದರಿ ಶಂಕಿಸಿದ್ದಾರೆ. ಒಂದು ಲೆಕ್ಕದಲ್ಲಿ ರೇಖಾಗೆ ಬಾಡಿಗಾರ್ಡ್ ತರದಲ್ಲಿ ಕೆಲಸ ಮಾಡ್ತಿದ್ದ ಪೀಟರ್ ಹಾಗೂ ಸುರೇಶ್ ಅವರಿಂದಲೇ ಹತ್ಯೆ ಆಗಿರುವ ಅನುಮಾನ ದಟ್ಟವಾಗಿದೆ. ರೇಖಾ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕಿಮ್ಸ್​ ಆಸ್ಪತ್ರೆ ಬಳಿ ಜಮಾಯಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

    ರೇಖಾ ಛಲವಾದಿಪಾಳ್ಯದ 138ನೇ ವಾರ್ಡ್​ನ ಸದಸ್ಯೆಯಾಗಿದ್ದರು. ಇವರ ಪತಿ ಕದಿರೇಶ್ ಅವರನ್ನು ಮನೆ ಸಮೀಪದ ಮುನೇಶ್ವರ ದೇವಸ್ಥಾನದ ಬಳಿ 2018ರ ಫೆಬ್ರವರಿ 8ರಂದು ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಕದಿರೇಶ್​ರ ಸಹೋದರರು ಮತ್ತು ಸಾರ್ವಜನಿಕರ ಕಣ್ಣೆದುರಲ್ಲೇ ಈ ಹತ್ಯೆ ನಡೆದಿತ್ತು. ಇದಾದ ಮೂರು ವರ್ಷದ ಬಳಿಕ ರೇಖಾರನ್ನು ಕೊಲ್ಲಲಾಗಿದೆ. ರಾಜಕೀಯ ಹಾಗೂ ಕೌಟುಂಬಿಕ ಕಲಹ ಘಟನೆಗೆ ಕಾರಣ ಎನ್ನಲಾಗಿದೆ. ಕದಿರೇಶ್​ಗೆ ರೇಖಾ ಎರಡನೇ ಪತ್ನಿ. ಈ ಬಗ್ಗೆ ಸ್ಥಳೀಯರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ‌.

    ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

    ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…

    ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…

    ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts