ಕಾರಿನ ಮೇಲೆ ಆಲದ ಮರ ಬಿದ್ದು ಓರ್ವ ಸಾವು: ಅರ್ಕಾವತಿ ನದಿ ನೀರಲ್ಲಿ ಕೊಚ್ಚಿಹೋದ ಹಸು

New Project(12)
Published on

ರಾಮನಗರ: ವರುಣನ ಅಬ್ಬರಕ್ಕೆ ರಾಮನಗರದಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬಿಡದಿ ಪರಸಭೆಯ 21ನೇ ವಾರ್ಡ್ ವ್ಯಾಪ್ತಿ ತೊರೆದೊಡ್ಡಿಯಲ್ಲಿ ಬೃಹತ್‌ ಆಲದಮರ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಬೋರೆಗೌಡ(50) ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಕಾರಿನ ಮೇಲೆ ಆಲದ ಮರ ಬಿದ್ದಿರುವುದು
ಕಾರಿನ ಮೇಲೆ ಆಲದ ಮರ ಬಿದ್ದಿರುವುದು

ಇಟ್ಟಮಡು ತೊರೆದೊಡ್ಡಿ ನಡುವೆ ನಲ್ಲಿಗುಡ್ಡ ಕೆರೆ ಕೋಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿರುವ ದೊಡ್ಡ ಆಲದಮರ ಭಾರಿ ಮಳೆಯಿಂದ ನೆಲಕ್ಕುರುಳಿದೆ. ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ದುರಂತ ಸಂಭವಿಸಿದೆ.

ಅರ್ಕಾವತಿ ನದಿ ನೀರಲ್ಲಿ ಹಸು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ
ಅರ್ಕಾವತಿ ನದಿ ನೀರಲ್ಲಿ ಹಸು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ

ಕನಕಪುರ ರಸ್ತೆಯಲ್ಲಿನ ಗೌಡಯನದೊಡ್ಡಿ ಬಳಿ ಅರ್ಕಾವತಿ ನದಿ ನೀರಲ್ಲಿ ಹಸುವೊಂದು ತೇಲಿಹೋಗಿದೆ. ಸೇತುವೆ ಮೇಲ್ಭಾಗದಲ್ಲಿದ್ದ ಸಾರ್ವಜನಿಕರು ಹಸುವನ್ನ ಕಾಪಡಲು ಆಗದೆ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಾ ಮರುಕ ವ್ಯಪ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net